ಕಾಳಿ ದೇವಿಯ ಅವಹೇಳನ ಮಾಡಿದ ಭೂಪ, ಟ್ವಿಟರ್ ವಿರುದ್ಧ ದೂರು

By Suvarna News  |  First Published Dec 30, 2020, 10:03 AM IST

ನನಗೂ ಹಿಂದೂಯಿಸಂ ಇಷ್ಟ, ಇದರಲ್ಲಿ ಇಷ್ಟು ಸೆಕ್ಸೀ ದೇವಿ ಇದ್ದಾರೆಂದು ಗೊತ್ತಿರಲಿಲ್ಲ ಎಂದ ಯುವಕ | ಟ್ವಿಟರ್‌ನಲ್ಲಿ ಅವಹೇಳನಕಾರಿ ಪೋಸ್ಟ್


ಕಾಳಿ ದೇವಿಯ ಅವಹೇಳನ ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಸಿದ್ದ ಜಾಲತಾಣ ಟ್ವಿಟರ್ ಸಂಸ್ಥೆ ಮೇಲೆ ಎಫ್ ಐ ಆರ್ ದಾಖಲಾಗಿದೆ.

ನ್ಯಾಯಾಲಯದ ಅದೇಶದಂತೆ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಕಿರಣ್ ಅರಾಧ್ಯ ಎಂಬುವರು ನೀಡಿದ ದೂರಿನ ಹಿನ್ನೆಲೆ ಎಫ್.ಐ.ಆರ್ ದಾಖಲಿಸಲಾಗಿದೆ.

Latest Videos

undefined

ಬೆಂಗ್ಳೂರಲ್ಲಿ ಇರಾನಿ ಸರಗಳ್ಳರ ಗ್ಯಾಂಗ್..! 1 ಕೆ.ಜಿ. ಚಿನ್ನಾಭರಣ ವಶ

ಅರ್ಮಿನ್ ನವಾಬಿ ಎಂಬ ಟ್ವೀಟರ್ ಖಾತೆಯಿಂದ ಕಾಳಿ ದೇವಿಯ ಅಶ್ಲೀಲ ಪೋಸ್ಟ್ ಅಪ್ ಮಾಡಲಾಗಿತ್ತು. ಈ ಕುರಿತು ಟ್ವೀಟರ್ ಸಂಸ್ಥೆಗೆ  ಪೋಸ್ಟ್ ತೆಗೆಯುವಂತೆ ಕಿರಣ್ ಅರಾಧ್ಯ ಮನವಿ‌ ಮಾಡಿದ್ದರು.

ಆದರೆ ಪೋಸ್ಟ್ ತೆಗೆಯದ ಕಾರಣ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದಾರೆ. ಪೋಸ್ಟ್ ಮಾಡಿದ್ದ ಅರ್ಮಿನ್ ನವಾಬಿ , ಟ್ವೀಟರ್ ಸಂಸ್ಥೆ, ಸಿ ಇಓ ಜಾಕ್ ಡೋರ್ಸಿ, ಭಾರತದ ಮೂವರು ಟ್ವೀಟರ್ ನಿರ್ದೇಶಕರಾದ  ಮಹೀಮ್ ಕೌಲ್, ಮನೀಷ್ ಮಹೇಶ್ವರಿ, ಮಾಯ ಹರಿ ಸೇರಿ ಒಟ್ಟು ಏಳು ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ 67(a) ಹಾಗೂ ಐಪಿಸಿಯ 292a 295a, ಹಾಗೂ 298 ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ.

click me!