ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಬಾಲಕ ಕಾಕೋಶಿ ಗ್ರಾಮದಲ್ಲಿ ಬಾಲನ್ನು ಎತ್ತಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಬಾಲಕನಿಗೆ ಬೆದರಿಕೆ ಹಾಕಿದ್ದಾನೆ.
ನವದೆಹಲಿ (ಜೂನ್ 6, 2023): ಕ್ರಿಕೆಟ್ ಪಂದ್ಯದ ವೇಳೆ ಸೋದರ ಸಂಬಂಧಿ ಟೆನ್ನಿಸ್ ಎತ್ತಿಕೊಂಡ ದಲಿತ ವ್ಯಕ್ತಿಯ ಹೆಬ್ಬೆರಳನ್ನು ಗ್ರಾಮಸ್ಥರು ಕತ್ತರಿಸಿದ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್‌ನ ಪಟಾನ್ ಜಿಲ್ಲೆಯ ಗ್ರಾಮಸ್ಥರು ಭಾನುವಾರ ಶಾಲೆಯ ಆಟದ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ತಮ್ಮ ಸೋದರ ಸಂಬಂಧಿ ಟೆನ್ನಿಸ್ ಬಾಲನ್ನು ಎತ್ತಿಕೊಂಡ ಕಾರಣ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹೆಬ್ಬೆರಳು ಕತ್ತರಿಸಿದ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಬಾಲಕ ಕಾಕೋಶಿ ಗ್ರಾಮದಲ್ಲಿ ಬಾಲನ್ನು ಎತ್ತಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಬಾಲಕನಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ದಲಿತ ಸಮುದಾಯದ ಸದಸ್ಯರನ್ನು ಅವಮಾನಿಸುವ ಮತ್ತು ಬೆದರಿಸುವ ಉದ್ದೇಶದಿಂದ ಬಾಲಕನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದೂ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ: ಬಾಯ್‌ಫ್ರೆಂಡ್‌ಗಾಗಿ ಪೊಲೀಸರ ಹುಡುಕಾಟ
ಈ ಮಧ್ಯೆ, ಬಾಲಕನ ಚಿಕ್ಕಪ್ಪ, ಧೀರಜ್ ಪರ್ಮಾರ್ ತಮ್ಮ ಸಮುದಾಯದ ಮೇಲೆ ಮಾಡಿರುವ ಆಕ್ಷೇಪಾರ್ಹ ಹೇಳಿಕೆ ಹಾಗೂ ಜಾತಿ ನಿಂದನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ವೇಳೆ ಆ ವಿಷಯವನ್ನು ಸದ್ಯಕ್ಕೆ ಇತ್ಯರ್ಥಗೊಳಿಸಲಾಯಿತು ಎಂಬಂತೆ ಆರೋಪಿ ನಾಟಕವಾಡಿದ್ದಾನೆ.
ಆದರೆ ಅದೇ ದಿನ ಸಂಜೆ, ಏಳು ಜನರ ಗುಂಪು ಹರಿತವಾದ ಆಯುಧಗಳಿಂದ ಶಸ್ತ್ರಸಜ್ಜಿರಾಗಿ ದೂರುದಾರರಾದ ಧೀರಜ್ ಮತ್ತು ಅವರ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಿದೆ. ಆರೋಪಿಗಳಲ್ಲಿ ಒಬ್ಬರು ಕೀರ್ತಿ ಅವರ ಹೆಬ್ಬೆರಳು ಕತ್ತರಿಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಇದೆಂತ ದುರಂತ ಪ್ರೀತಿ! ಎಣ್ಣೆ ಏಟಲ್ಲಿ ಬರ್ತಡೇ ವಿಷ್ ಮಾಡಲು ಗರ್ಲ್ ಫ್ರೆಂಡ್ ಮನೆಗೆ ಹೋಗಿ ಕೊಲೆಯಾದ ಯುವಕ
ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ ಹಾಗೂ ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗುಜರಾತ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಕೇಸ್ ದಾಖಲಿಸಲಾಗಿದ್ದು, ಇತರೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದೂ ವರದಿಯಾಗದೆ. ತೀವ್ರ ಗಾಯಗೊಂಡಿರುವ ಕೀರ್ತಿಯನ್ನು ಪಾಲನ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಅಲ್ಲಿಂದ ಅಹ್ಮದಾಬಾದ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ದತ್ತು ಕೇಂದ್ರದಲ್ಲಿ ಮಗುವಿನ ಮೇಲೆ ಅಮಾನುಷ ಹಲ್ಲೆ; ಕೂದಲು ಹಿಡಿದು ನೆಲಕ್ಕೆ ಎಸೆದ ಪಾಪಿ ಮಹಿಳೆ: ವಿಡಿಯೋದಲ್ಲಿ ಸೆರೆ