ಕೋವಿಡ್ ವೇಳೆ ಅಪ್ರಾಪ್ತೆ ನಾದಿನಿಯ ಮೇಲೆ ಅತ್ಯಾಚಾರವೆಸಗಿದ ಭಾವನಿಗೆ 20 ವರ್ಷ ಶಿಕ್ಷೆ

By Sathish Kumar KH  |  First Published Jul 22, 2023, 9:16 PM IST

ಕೋವಿಡ್‌ ವೇಳೆ ಮನೆಯಲ್ಲಿದ್ದ ಪತ್ನಿಯ ಅಪ್ರಾಪ್ತೆ ಸಹೋದರಿ ಮೇಲೆ ಮಾವನೇ ಅತ್ಯಾಚಾರ ಎಸಗಿದ್ದು, ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ನೀಡಿದೆ.


ವರದಿ- ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜು.22): ಕೋವಿಡ್‌ ವೇಳೆ ಮನೆಯಲ್ಲಿದ್ದ ಪತ್ನಿಯ ಅಪ್ರಾಪ್ತೆ ಸಹೋದರಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 26, 000 ರೂ. ದಂಡ ವಿಧಿಸಿ ಆದೇಶಿಸಿದೆ. ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿಯ ನಿವಾಸಿ ಶಿವರಾಜ ಬಸವಂತಪ್ಪ ಬಡಿಗೇರ ಎಂಬವನೇ ಶಿಕ್ಷೆಗೆ ಗುರಿಯಾಗಿದ್ದಾನೆ.

ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ನಿವಾಸಿಯ ಎರಡನೇ ಮಗಳನ್ನು ಆರೋಪಿ ಶಿವರಾಜ ಬಡಿಗೇರ ಮದುವೆಯಾಗಿದ್ದನು. ಟ್ಯಾಕ್ಸಿ ಚಾಲಕನಾಗಿದ್ದ ಶಿವರಾಜ್ ಬೆಂಗಳೂರಿನಲ್ಲಿ ವಾಸವಾಗಿದ್ದನು. ಇನ್ನು ಈತನ ಪತ್ನಿಯ ಕೊನೆಯ ಇಬ್ಬರು ಹೆಣ್ಣು ಮಕ್ಕಳ ಅಪ್ರಾಪ್ತ ವಯಸ್ಸಿನವರಾಗಿದ್ದರು.  ಅವರು ಇನ್ನೂ ಶಾಲೆಗೆ ಹೋಗುತ್ತಿದ್ದರು. ಆದರೆ, 2020ರ ಮಾರ್ಚ್‌ನಲ್ಲಿ ಸಂಬಂಧಿಕರ ಮದುವೆಗೆಂದು ಆರೋಪಿ ಶಿವರಾಜ ಬಡಿಗೇರ ದಂಪತಿ ಬೊಮ್ಮನಹಳ್ಳಿಗೆ ಬಂದಿದ್ದರು. ಈ ವೇಳೆ ಕೋವಿಡ್‌ ಮಹಾಮಾರಿ ರೋಗ ಹರಡಿರುವ ಕಾರಣ ಬಸ್‌ಗಳು ಬಂದ್ ಆಗಿದ್ದರಿಂದ ಬೆಂಗಳೂರಿಗೆ ವಾಪಸ್ ಆಗಲು ಸಾಧ್ಯವಾಗಿರಲಿಲ್ಲ.

Latest Videos

undefined

ರೇಷನ್‌ ಕಾರ್ಡ್‌ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಅತ್ಯಾಚಾರ ವಿಚಾರ ಬಾಯ್ಬಿಡದಂತೆ ಬೆದರಿಕೆ: ನಂತರ ಕೆಲ ದಿನಗಳ ನಂತರ ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ಉಳಿದ ಇಬ್ಬರು ಹೆಣ್ಣು ಮಕ್ಕಳು ಅಪ್ರಾಪ್ತರಾಗಿದ್ದರಿಂದ ಆರೋಪಿ ಶಿವರಾಜ್ ಬಡಿಗೇರಿ ಮನೆಯಲ್ಲಿ ಒಬ್ಬಳನ್ನು ಇನ್ನೂಬ್ಬಳನ್ನು ಮಂಜುನಾಥ ಎಂಬವರ ಮನೆಯಲ್ಲಿ ಬಿಟ್ಟಿದ್ದರು.  2020 ಏಪ್ರಿಲ್ 18ರಂದು ಪತ್ನಿ ಮಾರ್ಕೆಟ್‌ಗೆ ಹೋದಾಗ ಶಿವರಾಜ್ ಮನೆಯಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ಅಪ್ರಾಪ್ತೆ ನಾದಿನಿಯನ್ನು ಅತ್ಯಾಚಾರ ಮಾಡಿದ್ದನು. ಈ ವಿಷಯ ಯಾರಿಗಾದರೂ ಹೇಳಿದರೆ ನಿಮ್ಮ ಅಕ್ಕ, ತಂದೆ, ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದನು.

ಎರಡನೇ ಬಾರಿ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಾಮುಕ: ಇದಾದ ಬಳಿಕ ಮುಂದಿನ ದಿನಗಳಲ್ಲಿ ಕರೋನಾ ಉಲ್ಬಣವಾಗಿದ್ದರಿಂದ ಶಿವರಾಜ ದಂಪತಿ ಬೆಂಗಳೂರನಿಂದ ವಾಪಸ್ ವಿಜಯಪುರ ಜಿಲ್ಲೆಯ ಬೊಮ್ಮನಹಳ್ಳಿ ವಾಪಸ್ ಆಗಿದ್ದರು. ಆಗಲೂ ಅಪ್ರಾಪ್ತೆ ಬಾಲಕಿ ಮೇಲೆ ಶಿವರಾಜ್ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ವಿಷಯ ಮನೆಯವರಿಗೆ ಗೊತ್ತಾಗಿ ಆತನ ವಿರುದ್ಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದಾಗ ಅದಾಗಲೇ ಆತ ಬೆಂಗಳೂರಿನಲ್ಲಿ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 

ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ, ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ

ಕಾಮುಕನಿಗೆ ಶಿಕ್ಷೆ ನೀಡಿದ ನ್ಯಾಯಾಲಯ: ಈ ಪ್ರಕರಣದ ದೋಷಾರೋಪಣಾ ಪಟ್ಟಿ ಪರಿಶೀಲನೆ ಮಾಡಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಮನಾಯಕ ಅವರು, ಆರೋಪಿಯ ಮೇಲೆ ಅತ್ಯಾಚಾರದ ಆರೋಪ ಸಾಬೀತಾದ ಕಾರಣ ಕೃತ್ಯ ಎಸಗಿದ ಶಿವರಾಜ್ ಬಡಿಗೇರಿಗೆ 20 ವರ್ಷಗಳ ಜೀವಾವಧಿ ಶಿಕ್ಷೆ ಹಾಗೂ 26,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿ.ಜಿ. ಹಗರಗುಂಡ ವಾದ ಮಂಡಿಸಿದ್ದರು.

click me!