ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ತಮಿಳುನಾಡಿಗೆ ತೆರಳಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿಜಯಪುರ IRB ಘಟಕದ ಓರ್ವ ಹೆಡ್ ಕಾನಸ್ಟೇಬಲ್ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡು ತಿರುಣ್ಣಾಮಲೈ ಬಳಿ ಗುರುವಾರ ಸಂಜೆ ಸಂಭವಿಸಿದೆ.
ವಿಜಯಪುರ (ಏ.11) ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ತಮಿಳುನಾಡಿಗೆ ತೆರಳಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿಜಯಪುರ IRB ಘಟಕದ ಓರ್ವ ಹೆಡ್ ಕಾನಸ್ಟೇಬಲ್ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡು ತಿರುಣ್ಣಾಮಲೈ ಬಳಿ ಗುರುವಾರ ಸಂಜೆ ಸಂಭವಿಸಿದೆ.
ವಿಜಯಪುರ ಐ.ಆರ್.ಬಿ ಘಟಕದ ಹೆಡ್ ಕಾನಸ್ಟೇಬಲ್ ವಿಠಲ ಗಡದಾರ (34) ಸಾವನ್ನಪ್ಪಿದ್ದು, ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಕುಮಾರ ಹೆಗ್ಡೆ ಗಾಯಗೊಂಡ ಪೊಲೀಸ್ ಅಧಿಕಾರಿ.
ಲೋಕಸಭಾ ಚುನಾವಣೆ(Lok sabha election 2024 ) ಹಿನ್ನೆಲೆ ಹತ್ತು ದಿನಗಳ ಹಿಂದೆ ಕೆಎಸ್ಆರ್ಪಿ ಯ ತುಕಡಿಯನ್ನು ತಮಿಳುನಾಡಿನ ಧರ್ಮಪುರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವಿಜಯಪುರ ಐ.ಆರ್.ಬಿ ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಕುಮಾರ್ ತುಕಡಿಯ ಮುಂದಾಳತ್ವ ವಹಿಸಿದ್ದರು. ಕರ್ತವ್ಯನಿರತ ಪೊಲೀಸ್ ತಂಡ ಜೀಪ್ ನಲ್ಲಿ ಗುರುವಾರ ಸಂಜೆ ತಿರುವಣ್ಣಾಮಲೈದಿಂದ ದಿಂಡಿವಣ್ಣಂ ಕಡೆಗೆ ಹೋಗುವ ಮಾರ್ಗ ಮಧ್ಯೆ ಎದುರಿಗೆ ವೇಗವಾಗಿ ಬಂದ ತಮಿಳುನಾಡು ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಜೀಪನ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರು-ಬೈಕ್ ನಡುವೆ ಭೀಕರ ಅಪಘಾತ; ಯುಗಾದಿ ಹಬ್ಬದಂದೇ ಹೆಡ್‌ಕಾನ್ಸ್‌ಟೇಬಲ್ ದುರ್ಮರಣ!
ಜೀಪ್ ನಲ್ಲಿದ್ದ ಕೆಎಸ್ಆರ್‌ಪಿ 3 ನೇ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಟಿ.ಪ್ರಭಾಕರ (58) , ವಿಜಯಪುರ ಐ.ಆರ್.ಬಿ ಯ ವಿಠಲ ಗಡದಾರ (34) ಮತ್ತು ತಮಿಳನಾಡು ಪೊಲೀಸ್ ಕಾನಸ್ಟೇಬಲ್ ದಿನೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತುಕಡಿಯ ಮುಂದಾಳತ್ವ ವಹಿಸಿದ್ದ ವಿಜಯಪುರ ಐ.ಆರ್.ಬಿ ಘಟಕದ ಡೆಪ್ಯೂಟಿ ಕಮಾಂಡೆಂಟ್ ಹೇಮಂತ ಕುಮಾರ ಹೆಗ್ಡೆ ಅವರು ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ: ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ನಡೆಸಿದ ಪುಂಡರು!
ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದವರಾದ ವಿಠಲ ಗಡದಾರ 2008 ರ ಬ್ಯಾಚ್ ನಲ್ಲಿ ನೇಮಕಗೊಂಡು ವಿಜಯಪುರ ಐ.ಆರ್.ಬಿ (ಇಂಡಿಯನ್ ರಿಸರ್ವ್ ಬೆಟಾಲಿಯನ್ ) ನಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ವಿಶೇಷವೆಂದರೆ ಅವರು ಅತ್ಯುತ್ತಮ ಅಥ್ಲೆಟಿಕ್ ಕ್ರೀಡಾಪಟುವಾಗಿದ್ದರು. ರಾಷ್ಟ್ರೀಯ ಪೊಲೀಸ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅಥ್ಲೆಟಿಕ್, ಲಾಂಗ್ ಜಂಪ್ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದರು. ಅಲ್ಲದೇ ತಮ್ಮ ವಿಶಿಷ್ಟ ಸೇವೆ ಮೂಲಕ ಮುಖ್ಯಮಂತ್ರಿಗಳ ಪದಕ (ಸಿಎಂ ಮೆಡಲ್) ಸಹ ಪಡೆದುಕೊಂಡಿದ್ದರು.