
ಬೆಂಗಳೂರು (ನ.25): ಮೆಗಾ ಧಾರಾವಾಹಿ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ತಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಿರುವವರ ವಿರುದ್ಧ ಉದ್ಯಮಿ ವಿದ್ಯಾಭರಣ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಟಿ ವೈಷ್ಣವಿಯೊಂದಿಗೆ ವಿದ್ಯಾಭರಣನೊಂದಿಗೆ ವಿಳ್ಯದೆಲೆ ಶಾಸ್ತ್ರ ಆಗಿತ್ತು. ಸಮಾರಂಭದ ಪೋಟೊಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾಭರಣ ಸಂಬಂಧಿಸಿದಂತೆ ಅಪಸ್ವರ ಕೇಳಿಬಂದಿತ್ತು.
ಅಲ್ಲದೆ ವಿದ್ಯಾಭರಣ ಯುವತಿಯರೊಂದಿಗೆ ಅಕ್ರಮ ಸಂಬಂಧವಿದೆ ಎನ್ನುವ ರೀತಿಯ ಯುವತಿಯರಿಬ್ಬರ ಆಡಿಯೋ ಕರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯ ವೈಷ್ಣವಿ ತಮ್ಮ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದಳು. ತಮ್ಮ ಚಾರಿತ್ರ್ಯವಧೆ ಕಾರಣರಾದವರ ವಿರುದ್ಧ ಕಮೀಷನರ್ ಕಚೇರಿಗೆ ಭೇಟಿ ನೀಡಿ ವಿದ್ಯಾಭರಣ ದೂರು ನೀಡಿದ್ದಾರೆ. ಕಂಪ್ಲೇಟ್ ಕೊಟ್ಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿದ್ಯಾಭರಣ ನನ್ನ ವಿರುದ್ಧ ಇಲ್ಲಸಲ್ಲದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಡಿಯೊ ಹರಿಬಿಡಲಾಗಿದೆ. ಇದು ಶುದ್ಧ ಸುಳ್ಳು ಆಡಿಯೊದಲ್ಲಿ ಹೇಳಿರುವಂತೆ ನಾನು ತಪ್ಪು ಮಾಡಿಲ್ಲ.
ವಿದ್ಯಾ ಭರಣ್ ಜೊತೆ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್; ಇಲ್ಲಿದೆ ಸಂಪೂರ್ಣ ವಿವರ
ನನ್ನ ಹಾಗೂ ಕುಟುಂಬದವರ ಗೌರವಕ್ಕೆ ಧಕ್ಕೆಯಾಗಿದೆ. ಈ ಸಂಬಂಧ ಆಡಿಯೊ ವೈರಲ್ ಮಾಡಿದವರ ವಿರುದ್ಧ ದೂರು ನೀಡಲಾಗಿದ್ದು, ಕಮೀಷನರ್ ಅವರು ಸುಬ್ರಮಣ್ಯಪುರ ಪೊಲೀಸರಿಗೆ ತನಿಖೆಗೆ ವಹಿಸಿದ್ದಾರೆ ಎಂದರು. ನನಗೂ ವೈಷ್ಣವಿಗೂ 2016ರಿಂದಲೂ ಪರಿಚಯವಾಗಿತ್ತು. ನಾನು ನಟಿಸಿದ ಚಾಕಲೇಟ್ ಬಾಯ್ ಸಿನಿಮಾದಲ್ಲಿಯೂ ನಟಿಸಿದ್ದರು. ಇತ್ತೀಚೆಗೆ ಸಿನಿಮಾವೊಂದರ ಪ್ರೀಮಿಯರ್ ಶೋನಲ್ಲಿ ಮುಖಾಮುಖಿಯಾಗಿದ್ದೆವು. ಬಳಿಕ ಗುರು-ಹಿರಿಯರು ನಿಶ್ಚಯಿಸಿ ಕುಟುಂಬದವರ ಸಮ್ಮುಖ ಮೇರೆಗೆ ವಿಳ್ಯದೆಲೆ ಶಾಸ್ತ್ರ ಅಂದ್ರೆ ಹೆಣ್ಣು ನೋಡುವ ಶಾಸ್ತ್ರ ಗಟ್ಟಿಯಾಗಿತ್ತು.
ಬೇಡವೇ ಬೇಡ ಎಂದು ನಿಶ್ಚಿತಾರ್ಥ ಮುರಿದ ವೈಷ್ಣವಿ ಗೌಡ
ಪೋಟೊಸ್ ವೈರಲ್ ಆಗುತ್ತಿದ್ದಂತೆ ನನ್ನ ವಿರುದ್ಧ ಮೂರನೇ ವ್ಯಕ್ತಿಯು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ಯುವತಿ ವಿಚಾರವಾಗಿ ಹಿಂದೆ ತಪ್ಪು ಮಾಡಿದ್ದು ನಿಜ. ನಾನು ಮನುಷ್ಯನೇ. ಆದರೆ ಆಗಿರುವ ತಪ್ಪನ್ನು ತಿದ್ದಿಕೊಂಡಿದ್ದೇನೆ. ನಾನು ಯಾರ ಹೆಸರು ಹೇಳಲು ಇಷ್ಟಪಡುವುದಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ವಿಳ್ಯದೆಲೆ ಶಾಸ್ತ್ರ ಆಗುವ ಮುನ್ನವೇ ಆರೋಪಿಸಬಹುದಿತ್ತು. ನನಗೆ 55ಕ್ಕೂ ಹೆಚ್ಚು ಪ್ರಫೋಸಲ್‌ಗಳು ಬಂದಿದ್ದವು. ಯಾರೋ ನಮಗೆ ಆಗದವರು ಈ ರೀತಿ ಮಾಡಿದ್ದಾರೆ. ನಾನು ಸೋಮವಾರವೇ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತೇನೆ ಎಂದು ವಿದ್ಯಾಭರಣ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ