ಬಿಹಾರದಲ್ಲಿ ಕಳ್ಳರ ಚಮತ್ಕಾರ, ಸುರಂಗ ತೋಡಿ ರೈಲಿನ ಇಂಜಿನ್‌ಅನ್ನೇ ಕದ್ದರು!

Published : Nov 25, 2022, 05:14 PM IST
ಬಿಹಾರದಲ್ಲಿ ಕಳ್ಳರ ಚಮತ್ಕಾರ, ಸುರಂಗ ತೋಡಿ ರೈಲಿನ ಇಂಜಿನ್‌ಅನ್ನೇ ಕದ್ದರು!

ಸಾರಾಂಶ

ಮುಜಾಫರ್‌ಪುರದ ಸ್ಕ್ರ್ಯಾಪ್ ಅಂಗಡಿಯಿಂದ ವಶಪಡಿಸಿಕೊಂಡ ಕೆಲವು ಚೀಲಗಳಲ್ಲಿ ರೈಲಿನ ಎಂಜಿನ್ ಭಾಗಗಳು ಕಂಡುಬಂದಿವೆ. ಆಗ ಬರೌನಿ (ಬೇಗುಸರೈ ಜಿಲ್ಲೆ) ಎಂಬಲ್ಲಿ ಚಾಲಾಕಿ ಕಳ್ಳರು ಸುರಂಗ ತೋಡಿ ಇಡೀ ರೈಲಿನ ಇಂಜಿನ್‌ಅನ್ನೇ ಕದ್ದಿರುವ ವಿಚಾರ ಬೆಳಕಿಗೆ ಬಂದಿದೆ.

ಪಾಟ್ನಾ (ನ.25): ಬಿಹಾರದಲ್ಲಿ ಚಾಣಾಕ್ಷ ಕಳ್ಳರ ಚಮತ್ಕಾರ ಬಹಿರಂಗವಾಗಿದೆ. ಇವರು ಮಾಡಿರೋ ಕೆಲಸವನ್ನು ಓದಿದರೆ ನೀವು ಅಚ್ಚರಿ ಪಡೋದು ಖಂಡಿತ. ಬಿಹಾರದ ಹೋಹ್ತಾಸ್‌ನಲ್ಲಿ ಇತ್ತಿಚೆಗೆ ಕಳ್ಳರು 500 ಟನ್‌ ತೂಕದ ಕಬ್ಬಿಣದ ಸೇತುವೆಯನ್ನೇ ಕದ್ದುಕೊಂಡು ಹೋಗಿದ್ದು ಸುದ್ದಿಯಾಗಿತ್ತು. ಈಗ ಮಹಾ ಕಳ್ಳರು, ಸುರಂಗವನ್ನು ತೋಡಿ ರೈಲಿನ ಇಂಜಿನ್‌ಅನ್ನೇ ನಾಪತ್ತೆ ಮಾಡಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, ಮುಜಾಫರ್‌ಪುರದ ಸ್ಕ್ರ್ಯಾಪ್‌ ಅಂಗಡಿಯಿಂದ ವಶಪಡಿಸಿಕೊಂಡ ಬ್ಯಾಗ್‌ನಲ್ಲಿ ರೈಲಿನ ಇಂಜಿನ್‌ನ ಬಿಡಿ ಭಾಗಗಳನ್ನು ತುಂಬಿಸಿ ಇಡಲಾಗಿತ್ತು. ಇದರ ಜಾಡು ಹಿಡಿದು ಹೊರಟಾಗ ಪೊಲೀಸರಿಗೆ ರೈಲಿನ ಇಡೀ ಇಂಜಿನ್‌ಅನ್ನೇ ಕಳ್ಳರು ಕದ್ದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಕಳೆದ ವಾರ ಬೆಗುಸರೈ ಜಿಲ್ಲೆಯ ಗ್ಯಾಂಗ್ ಬರೌನಿ, ಗರ್ಹರಾ ಯಾರ್ಡ್‌ನಲ್ಲಿ ದುರಸ್ತಿಗಾಗಿ ತಂದಿದ್ದ ರೈಲಿನ ಸಂಪೂರ್ಣ ಡೀಸೆಲ್ ಎಂಜಿನ್ ಅನ್ನು ಕದ್ದಿದ್ದಾರೆ ಏಕಕಾಲಕ್ಕೆ ಕೆಲವು ಭಾಗಗಳನ್ನು ಕದಿಯುವ ಮೂಲಕ ಗ್ಯಾಂಗ್ ಈ ಸಾಹಸವನ್ನು ಪೂರ್ಣ ಮಾಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರುವ ಮೂವರನ್ನು ವಶಕ್ಕೆ ಪಡೆದುಕೊಂಡ ಬಳಿಕ ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಸಿಕ್ಕಿದೆ. ಅವರ ಮಾಹಿತಿಯ ಆಧಾರದ ಮೇಲೆ ಅವರು ಮುಜಾಫರ್‌ಪುರದ ಪ್ರಭಾತ್ ಕಾಲೋನಿಯಲ್ಲಿರುವ ಸ್ಕ್ರ್ಯಾಪ್ ಗೋದಾಮಿನಿಂದ 13 ಗೋಣಿ ಚೀಲಗಳ ಎಂಜಿನ್ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ರೈಲಿನ ಆವರಣದ ಬಳಿ ಸುರಂಗ ಮಾರ್ಗವೊಂದು ಸಿಕ್ಕಿದ್ದು, ಅದರ ಮೂಲಕ ಕಳ್ಳರು ಬಂದು ಇಂಜಿನ್ ಬಿಡಿಭಾಗಗಳನ್ನು ಕದ್ದು ಗೋಣಿ ಚೀಲಗಳಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ ಎನ್ನಲಾಗಿದೆ.

ಪೂನಿರ್ಯಾದಲ್ಲೂ ಆಗಿತ್ತು ಈ ಘಟನೆ: ಇದಕ್ಕೂ ಮುನ್ನ ಪುರ್ನಿಯಾ ಜಿಲ್ಲೆಯಲ್ಲೂ ಇದೇ ರೀರತಿಯ ಘಟನೆ ನಡೆದಿತ್ತು. ಕಳ್ಳರು ಹಳೆಯ ಕಾಲದ ಮೀಟರ್‌ ಗೇಜ್‌ ರೈಲಿನ ಸ್ಟೀಮ್‌ ಇಂಜಿನ್‌ಅನ್ನು ಕದ್ದಿದ್ದರು. ಇದನ್ನು ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು.ತನಿಖೆಯ ಸಂದರ್ಭದಲ್ಲಿ, ಸಮಸ್ತಿಪುರ ವಿಭಾಗದ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ನೀಡಿದ ನಕಲಿ ಪತ್ರದ ಆಧಾರದ ಮೇಲೆ ರೈಲ್ವೆ ಎಂಜಿನಿಯರ್ ಕ್ಲಾಸಿಕ್ ಸ್ಟೀಮ್ ಎಂಜಿನ್ ಅನ್ನು ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದರು.

ಗ್ರಾಹಕರ ವೇಷದಲ್ಲಿ ಚಿನ್ನ ಕದಿಯುತ್ತಿದ್ದ ಯುವಕ-ಯುವತಿ ಬಂಧನ, ಬಂಧಿತರಿಂದ ಬಂಗಾರ ವಶ!

ಮತ್ತೊಂದೆಡೆ, ಮತ್ತೊಂದು ಗ್ಯಾಂಗ್ ಬಿಹಾರದ ಈಶಾನ್ಯ ಅರಾರಿಯಾ ಜಿಲ್ಲೆಯ ಸಿತಾಧರ್ ನದಿಯ ಮೇಲೆ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆಯನ್ನು ಕದ್ದಿದೆ. ಸೇತುವೆಯ ಇತರ ಪ್ರಮುಖ ಭಾಗಗಳು ನಾಪತ್ತೆಯಾಗಿರುವುದು ಕಂಡು ಪೊಲೀಸರು ಕೂಡ ಅಚ್ಚರಿಗೊಳಪಟ್ಟಿದ್ದಾರೆ. ಪೊಲೀಸರು ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿದ್ದು ಮಾತ್ರವಲ್ಲ, ಸೇತುವೆಯ ರಕ್ಷಣೆಗಾಗಿ ಒಬ್ಬ ಪೇದೆಯನ್ನೂ ನಿಯೋಜನೆ ಮಾಡಿದ್ದಾರೆ.  ಪಲ್ಟಾನಿಯಾ ಸೇತುವೆಯು ಫರ್ಬಿಸ್‌ಗಂಜ್ ನಗರವನ್ನು ರಾಣಿಗಂಜ್‌ಗೆ ಸಂಪರ್ಕಿಸುತ್ತದೆ. ಈ ಎರಡೂ ನಗರಗಳು ಅರಾರಿಯಾ ಜಿಲ್ಲೆಯಲ್ಲಿ ಬರುತ್ತದೆ.

ಮಾಧ್ಯಮದಲ್ಲಿ ಕಳ್ಳತನ ವರದಿ: ಕದ್ದ ಚಿನ್ನಾಭರಣ ಕೋರಿಯರ್‌ ಮೂಲಕ ಹಿಂದುರುಗಿಸಿದ ಕಳ್ಳರು

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಂಡಿದ್ದಾರೆ. ಬೆಸ್‌ಗಂಜ್‌ ಪೊಲೀಸ್ ಠಾಣೆಯ ಪ್ರಭಾರಿ ನಿರ್ಮಲ್ ಕುಮಾರ್ ಯದುವೇಂದು ಅವರು ಮಾಧ್ಮಗಳಿಗೆ ಮಾಹಿತಿ ನೀಡಿದ್ದು, ಸೇತುವೆಯ ಭದ್ರತೆಗಾಗಿ ನಾವು ಕಾನ್‌ಸ್ಟೆಬಲ್ ಅನ್ನು ನಿಯೋಜಿಸಿದ್ದಾಗಿ ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು