ರಸ್ತೆ ಬದಿಯಲ್ಲಿ ಗೆಳೆಯನ ಶವ ಎಸೆದು ಹೋದ್ರಾ?, ಬೆಚ್ಚಿಬಿದ್ದ ಉಡುಪಿ ಜನ!

By Gowthami K  |  First Published Feb 17, 2023, 10:35 PM IST

ಟೆಂಪೋವೊಂದರಿಂದ ವ್ಯಕ್ತಿಯೊಬ್ಬನ  ಶವವನ್ನು ಅನಾಮತ್ತಾಗಿ ಇಳಿಸಿ ಹೋಗುವ ಸಿಸಿಟಿವಿ ಫೂಟೇಜ್ ಕಂಡ ಉಡುಪಿಯ ಜನ ಬೆಚ್ಚಿಬಿದ್ದಿದ್ದರು.  ಮಲ್ಪೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿದೆ.


ಉಡುಪಿ (ಫೆ.17): ಈ ಚಿತ್ರಣ ನೋಡಿದರೆ ಒಂದು ಕ್ಷಣ ಎಂತವರು ಬೆಚ್ಚಿ ಬೀಳಬೇಕು. ಟೆಂಪೋವೊಂದರಿಂದ ವ್ಯಕ್ತಿಯೊಬ್ಬನ  ಶವವನ್ನು ಅನಾಮತ್ತಾಗಿ ಇಳಿಸಿ ಹೋಗುವ ಸಿಸಿಟಿವಿ ಫೂಟೇಜ್ ಕಂಡ ಉಡುಪಿಯ ಜನ ಬೆಚ್ಚಿಬಿದ್ದಿದ್ದರು! ಟೆಂಪೋ ಒಂದು ಬಂದು ನಿಲ್ಲುತ್ತದೆ. ಒಳಗಿರುವ ಒಬ್ಬ ವ್ಯಕ್ತಿಯನ್ನು ಇಬ್ಬರು ರಸ್ತೆ ಬದಿ ಮಲಗಿಸಿ ಹೋಗುತ್ತಾರೆ. ಸ್ವಲ್ಪ ಹೊತ್ತಿನ ನಂತರ ಆ ವ್ಯಕ್ತಿ ಶವವಾಗಿದ್ದ. ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಕ್ಷಣಮಾತ್ರದಲ್ಲಿ ಇದೊಂದು ಅಮಾನವೀಯ ಘಟನೆ. ಇದೊಂದು ಕೊಲೆ ಎಂದು ಎಲ್ಲೆಡೆ ವೀಡಿಯೋ ವೈರಲಾಗಿದೆ. 

ಮೇಲ್ನೋಟಕ್ಕೆ ಮನುಷ್ಯರಲ್ಲಿ ಮಾನವೀಯತೆಯ ಸತ್ತು ಹೋಯಿತಾ? ಸತ್ತ ವ್ಯಕ್ತಿಯನ್ನು ರಸ್ತೆ ಬದಿ ಬಿಸಾಕಿ ಹೋದರಾ? ಸಂಗಡಿಗನನ್ನು ಸಂಗಡ ಇದ್ದವರೆ ಕೊಂದರಾ..!? ಹೀಗೆ ಅನೇಕ ಸಂಶಯಗಳನ್ನು ಈ ವಿಡಿಯೋ ಹುಟ್ಟಿಸಿದೆ.

Tap to resize

Latest Videos

undefined

ಉಡುಪಿ ಜಿಲ್ಲೆ ಕೆಮ್ಮಣ್ಣು ಪ್ರದೇಶದ ದೃಶ್ಯ ಇದು. ಕಲ್ಲಂಗಡಿಯ ಟೆಂಪೋ ಬಂದು ನಿಲ್ಲುತ್ತದೆ. ಇಬ್ಬರು ಒಳಗಿದ್ದ ವ್ಯಕ್ತಿಯನ್ನು ರಸ್ತೆ ಬದಿ ಮಲಗಿಸಿ ಹೋಗುತ್ತಾರೆ. ಕೆಲ ಕ್ಷಣದಲ್ಲಿ ಆತ ಮೃತಪಟ್ಟಿದ್ದ. ಸತ್ತ ವ್ಯಕ್ತಿಯನ್ನು ರಸ್ತೆ ಬದಿ ಎಸೆದು ಹೋದರು ಎಂದು ಈ ದೃಶ್ಯ ಎಲ್ಲಾ ಕಡೆ ಓಡಾಡಿದೆ. ಜೊತೆಗಿದ್ದವರು ವ್ಯಕ್ತಿಯನ್ನು ಕೊಂದು ಎಸೆದು ಹೋದರು ಎಂದು ಗಾಳಿ ಸುದ್ದಿ ಹರಡಿದೆ. 

ಇಷ್ಟಾಗುತ್ತಲೇ ಪೊಲೀಸರು ಆ ಟೆಂಪೋ ವನ್ನು ಟ್ರೇಸ್ ಮಾಡಿ ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಮೂಲದ ಹನುಮಂತ ಎಂದು ಗುರುತಿಸಲಾಗಿದೆ. ಈ ಮೂವರು ಉಡುಪಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

Belagavi: ದಾಂಪತ್ಯ ಕಲಹ ದೂರ ಮಾಡ್ತೀನಿ ಅಂತಾ ಬಂದಾಕೆ ಎರಡನೇ ಪತ್ನಿಯಾದಳು!

ಕೆಲಸದ ನಡುವೆ ಹನುಮಂತ ಮದ್ಯ ಸೇವನೆ ಮಾಡಿ ಟೆಂಪೋದಲ್ಲಿ ಮಲಗಿದ್ದಾನೆ. ಕಾರ್ಮಿಕರು ಕೆಲಸ ಮುಗಿಸಿ ಕೆಮ್ಮಣ್ಣು ಕಡೆ ತೆರಳಿದ್ದಾರೆ. ಹನುಮಂತನ ಏರಿಯ ಬಂದ ಕೂಡಲೇ ಅಲ್ಲೇ ರಸ್ತೆ ಬದಿಯಲ್ಲಿ ಇಳಿಸಿ, ಮಲಗಿಸಿ ಹೋಗಿದ್ದಾರೆ. ಮಲಗಿಸಿದ ವ್ಯಕ್ತಿ ಗಂಟೆಗಳ ಕಾಲ ಕಳೆದರೂ ಎದ್ದೇಳದ ಕಾರಣ ಜನ ಸಂಶಯ ಪಟ್ಟಿದ್ದಾರೆ. ಪೊಲೀಸರನ್ನು ಕರೆಸಿದ್ದಾರೆ, ಸಿಸಿ ಟಿವಿ ಚೆಕ್ ಮಾಡಿಸಿದ್ದಾರೆ. ಇದೊಂದು ಕೊಲೆ ಎಂದು ನಿರ್ಧರಿಸಿದ್ದಾರೆ.

MYSURU: ಮಕ್ಕಳಿಲ್ಲವೆಂಬ ಕೊರಗು, ಪತ್ನಿ ತವರು ಸೇರಿಕೊಂಡ್ರೆ, ಪತಿ ಆತ್ಮಹತ್ಯೆ!

ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮಾಹಿತಿಗಳನ್ನು ಕಲೆ ಹಾಕಿ ಇಬ್ಬರನ್ನು ವಿಚಾರಣೆ ಮಾಡಿದ ನಂತರ ಮೇಲ್ನೋಟಕ್ಕೆ ಪೊಲೀಸರಿಗೆ ಇದು ಕೊಲೆಯಂತೆ ಕಾಣುತ್ತಿಲ್ಲ. ಶಿವಮೊಗ್ಗದಿಂದ ಹನುಮಂತನ ಕುಟುಂಬಸ್ಥರು ಬಂದು, ಸಾವಿನಲ್ಲಿ ಸಂಶಯ ಇದೆ ಎಂದು ದೂರು ನೀಡಿದ್ದಾರೆ. ಇದೊಂದು ಅನುಮಾನಾಸ್ಪದ ಸಾವಾಗಿದ್ದು ಮಲ್ಪೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿದೆ. ಅಮಾನವೀಯ ಘಟನೆ ಎಂದು ದೂರಿದ್ದ ಜನ ತನಿಖೆ ನಂತರ ಏನಂತಾರೆ ನೋಡಬೇಕು.
 

click me!