ಬರೋಬ್ಬರಿ 34 ವರ್ಷದಿಂದ ಪರಪ್ಪನ ಅಗ್ರಹಾರದಲ್ಲಿದ್ದ ವೀರಪ್ಪನ್ ಸಹಚರ ಸಾವು

Published : Apr 17, 2023, 07:08 PM IST
ಬರೋಬ್ಬರಿ 34 ವರ್ಷದಿಂದ ಪರಪ್ಪನ ಅಗ್ರಹಾರದಲ್ಲಿದ್ದ ವೀರಪ್ಪನ್ ಸಹಚರ ಸಾವು

ಸಾರಾಂಶ

ಬರೋಬ್ಬರಿ 34 ವರ್ಷದಿಂದ ಜೈಲಿನಲ್ಲಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಮೀಸೆ ಮಾದಯ್ಯ ಮೃತಪಟ್ಟಿದ್ದಾನೆ. ಉಸಿರಾಟದ ತೊಂದರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಮೀಸೆ ಮಾದಯ್ಯನನ್ನು ದಾಖಲಿಸಲಾಗಿತ್ತು.

ಬೆಂಗಳೂರು (ಏ.17): ಬರೋಬ್ಬರಿ 34 ವರ್ಷದಿಂದ ಜೈಲಿನಲ್ಲಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಮೀಸೆ ಮಾದಯ್ಯ (72) ಮೃತಪಟ್ಟಿದ್ದಾನೆ. ಉಸಿರಾಟದ ತೊಂದರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಮೀಸೆ ಮಾದಯ್ಯನನ್ನು ದಾಖಲಿಸಲಾಗಿತ್ತು.  ಈ ಹಿಂದೆ ಪಾಲಾರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯಾಗಿತ್ತು. ಉಳಿದ ಸಹಚರರಾದ ಸೈಮನ್ , ಬಿಲವೇಂದ್ರನ್ , ಮೀಸೆ ಮಥಾಯನ್ ಜೈಲಿನಲ್ಲಿರುವಾಗಲೇ  ಮೃತಪಟ್ಟಿದ್ದರು. ಈ ನಡುವೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವವಿದ್ದರೂ ಜೈಲು ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಮತ್ತೊಬ್ಬ ವೀರಪ್ಪನ್ ಸಹಚರ ಆರೋಪಿಸಿದ್ದಾನೆ. ಸದ್ಯ ವಿಕ್ಟೋರಿಯಾ ಶವಾಗಾರದಲ್ಲಿರುವ ಮೀಸೆ ಮಾದಯ್ಯನ ಮೃತ ದೇಹ ಇಡಲಾಗಿದೆ.

 1993 ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಜ್ಞಾನ ಪ್ರಕಾಶ್‌ ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಾನವೀಯತೆ ಆಧಾರದ ಮೇಲೆ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಪಾಲಾರ್ ಬ್ಲಾಸ್ಟ್   9 ಏಪ್ರಿಲ್ 1993 ರಂದು ನಡೆದ ನೆಲಬಾಂಬ್ ದಾಳಿಯಾಗಿದೆ . ಪೊಲೀಸರ ಕಾರ್ಯಾಚರಣೆ ವೇಳೆ ಅರಣ್ಯ ದರೋಡೆಕೋರ ವೀರಪ್ಪನ್ ಆಯೋಜಿಸಿದ್ದ ಈ ದಾಳಿಯಲ್ಲಿ 22 ಜನ ಪ್ರಾಣ ಕಳೆದುಕೊಂಡಿದ್ದರು.

ಯುಪಿ ಗ್ಯಾಂಗ್‌ಸ್ಟರ್‌ ಹತ್ಯೆಗೆ ಪಕ್ಕಾ ಪ್ಲಾನ್‌!
ಪ್ರಯಾಗ್‌ರಾಜ್‌: ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಉತ್ತರಪ್ರದೇಶದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಮತ್ತು ಆತನ ಸೋದರ ಅಶ್ರಫ್‌ ಹತ್ಯೆ ಏಕಾಏಕಿ ನಡೆದ ಘಟನೆಯಲ್ಲ. ಅದಕ್ಕೊಂದು ಯೋಜಿತ ಸಂಚು ರೂಪುಗೊಂಡಿದ್ದು, ತಾವು ಅಂಡರ್‌ವಲ್ಡ್‌ರ್‍ ಡಾನ್‌ ಎನ್ನಿಸಿಕೊಳ್ಳುವ ಕನಸು ಕಂಡಿದ್ದ ಮೂವರು, ಉತ್ತರಪ್ರದೇಶದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನನ್ನು ಹತ್ಯೆ ಮಾಡಲು ಅನೇಕ ದಿನಗಳಿಂದ ಚಿಂತನೆ ನಡೆಸಿದ್ದರು. ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಗುರುವಾರವೇ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಬಂಧಿತ ಪಾತಕಿಗಳಾದ ಲವಲೇಶ್‌, ಮೋಹಿತ್‌ ಮತ್ತು ರಾಜೇಶಕುಮಾರ್‌ ಮೌರ್ಯನನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಈ ಅಂಶಗಳು ಬೆಳಕಿಗೆ ಬಂದಿದೆ.

3 ದಿನ ಮೊದಲೇ ಆಗಮನ:
ತಾವು ಕೂಡಾ ದೊಡ್ಡ ಗ್ಯಾಂಗ್‌ಸ್ಟರ್‌ಗಳಾಗುವ ಕನಸು ಕಂಡಿದ್ದ ಲವಲೇಶ್‌, ಮೋಹಿತ್‌ ಮತ್ತು ಮೌರ್ಯ ಇದಕ್ಕಾಗಿ ದೊಡ್ಡ ತಲೆಯನ್ನೇ ಹೊಡೆದುರುಳಿಸಲು ಬಯಸಿದ್ದರು. ಅದಕ್ಕೆಂದೇ ಅವರು ಅತಿಕ್‌ನನ್ನು ಗುರಿಯಾಗಿಸಿಕೊಂಡಿದ್ದರು. ಅತೀಕ್‌ ನ್ಯಾಯಾಂಗ ಬಂಧನದ ಅವಧಿ ಶನಿವಾರ ಮುಗಿಯಲಿದ್ದು, ಅಂದು ಆತನನ್ನು ಪೊಲೀಸ್‌ ವಶಕ್ಕೆ ಒಪ್ಪಿಸಬಹುದು. ಪೊಲೀಸ್‌ ವಶಕ್ಕೆ ಹೋಗುವಾಗ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಈ ವೇಳೆ ಅತೀಕ್‌ನನ್ನು ಪ್ರಯಾಗ್‌ರಾಜ್‌ ಜಿಲ್ಲಾಸ್ಪತ್ರೆಗೆ ತಂದೇ ತರುತ್ತಾರೆ. ಈ ವೇಳೆ ಎಂದಿನಂತೆ ಅತೀಕ್‌ ಹೇಳಿಕೆ ಪಡೆಯಲು ಟೀವಿ ಪತ್ರಕರ್ತರು ಮುಗಿಬೀಳುತ್ತಾರೆ ಎಂಬ ಪಕ್ಕಾ ಮಾಹಿತಿ ಅವರಿಗೆ ಇತ್ತು.

ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸರ ಮೇಲೆ ಸಾಲು ‌ಸಾಲು ಆರೋಪ, ಕಮಿಷನರ್ ರೆಡ್ಡಿ ಫುಲ್

ಹೀಗಾಗಿ ಪತ್ರಕರ್ತರ ಸೋಗಿನಲ್ಲೇ ದಾಳಿ ನಡೆಸಲು ಯೋಜಿಸಿ ಮೂವರು ಗುರುವಾರವೇ ಪ್ರಯಾಗ್‌ರಾಜ್‌ನ ಹೋಟೆಲ್‌ಗೆ ಆಗಮಿಸಿ ಅಲ್ಲಿ ತಂಗಿದ್ದರು. ಅಲ್ಲಿ ಹತ್ಯೆಗೆ ಬೇಕಾದ ಪೂರ್ವತಯಾರಿ ಮಾಡಿಕೊಂಡಿದ್ದರು. ದಾಳಿ ನಡೆಸಬೇಕಾದ ಸ್ಥಳ, ರೀತಿ, ತಪ್ಪಿಸಿಕೊಳ್ಳಲು ಬೇಕಾದ ರೀತಿಯ ಬಗ್ಗೆ ಚರ್ಚೆ ನಡೆಸಿದ್ದರು.

Bengaluru crime: ತಡೆಯಲು ಬಂದ ಪೊಲೀಸ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಪರಾರಿ!

ಹೀಗೆ ಪೂರ್ವ ಯೋಜಿತ ರೀತಿಯಂತೆ ಟೀವಿ ಮೈಕ್‌, ನಕಲಿ ಐಡಿ ಕಾರ್ಡ್‌ ಹಾಗೂ ಕ್ಯಾಮರಾ ಖರೀದಿಸಿ ಮೂವರೂ ಶನಿವಾರ ರಾತ್ರಿ ಆಸ್ಪತ್ರೆ ಬಳಿ ಪತ್ರಕರ್ತರ ಟೀಂ ಸೇರಿಕೊಂಡರು. ಹೀಗಾಗಿ ಯಾರಿಗೂ ಇವರ ಬಗ್ಗೆ ಅನುಮಾನ ಬರಲಿಲ್ಲ. ಕೊನೆಗೆ ಅತೀಕ್‌ನನ್ನು ಅಸಲಿ ಪತ್ರಕರ್ತರು ಮಾತನಾಡಿಸುವಾಗ ಪತ್ರಕರ್ತರ ವೇಷದಲ್ಲಿದ್ದ ಹಂತಕರು ಬಚ್ಚಿಟ್ಟಿದ್ದ ಗನ್‌ ಹೊರತೆಗೆದು ಅತೀಕ್‌ ಹಾಗೂ ಸೋದರನಿಗೆ ಹೊಡೆದರು ಎಂಬ ಅಂಶ ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು