Uttara Kannada: ದೇಹದಿಂದ ಬೇರ್ಪಟ್ಟ ಗೋವಿನ ತಲೆ ನಡು ರಸ್ತೆಯಲ್ಲಿ ಪತ್ತೆ!

By Gowthami K  |  First Published Jul 1, 2023, 8:02 PM IST

ನಡು ರಸ್ತೆಯಲ್ಲಿ ಗೋವಿನ ತಲೆ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಬಳಿ ನಡೆದಿದೆ.


ಕಾರವಾರ (ಜು.1): ದೇಹದಿಂದ ಕತ್ತರಿಸಿದ ಸ್ಥಿತಿಯಲ್ಲಿ ನಡು ರಸ್ತೆಯಲ್ಲಿ ಗೋವಿನ ತಲೆ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಬಳಿ ನಡೆದಿದೆ. ರಸ್ತೆ ಮೇಲೆ ಗೋವಿನ ತಲೆ ದೇಹದಿಂದ ಬೇರ್ಪಡಿಸಿ ಇಟ್ಟಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದೆ. ಹೆಗಡೆಕಟ್ಟಾದಿಂದ ಕಾನಳ್ಳಿ ರಸ್ತೆಗೆ ತೆರಳುವ ಮಧ್ಯೆ ಗೋವಿನ ತಲೆ ಕಂಡುಬಂದಿದೆ. ಪೊದೆಯಲ್ಲಿ ಎಸೆದಿದ್ದ ಗೋವಿನ ತಲೆಯನ್ನು ನಾಯಿಗಳು ಕಚ್ಚಿಕೊಂಡು ರಸ್ತೆ ಮಧ್ಯೆ ಬಿಟ್ಟಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ  ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಶಂಕಿತ ಉಗ್ರರ ವಿಚಾರಣೆಯಲ್ಲಿ ಕರಾಳ ಸತ್ಯ, ರಾಜ್ಯದಲ್ಲಿ ರೋಬೋಟ್ ಮೂಲಕ ವಿದ್ವಂಸಕ ಕೃತ್ಯಕ್ಕೆ ಐಸಿಸ್ ಸಂಚು!

Tap to resize

Latest Videos

undefined

ಗೋಹತ್ಯೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಕೆರೂರ: ಗುರುವಾರ ಬಾದಾಮಿಯಲ್ಲಿ ನಡೆದಿದೆ ಎನ್ನಲಾದ ಗೋಹತ್ಯೆ ಖಂಡಿಸಿ ಹಾಗೂ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧÜ ಕಾಯ್ದೆಯಲ್ಲಿ ತಿದ್ದುಪಡಿತರುವುದನ್ನು ವಿರೋಧಿ​ಸಿ ಕೆರೂರ ಪಟ್ಟಣದ ವಕೀಲರ ಸಂಘದಿಂದ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ವಕೀಲರ ಸಂಘದ ಉಪಾದ್ಯಕ್ಷ ರಾಜು ಕಕರಡ್ಡಿ, ರಾಜ್ಯದಲ್ಲಿ ಕಠಿಣ ಗೋಹತ್ಯೆ ನಿಷೇಧÜ ಕಾಯ್ದೆ ಜಾರಿಯಲ್ಲಿರುವಾಗಲೇ ಅಲ್ಲಲ್ಲಿ ಗೋಹತ್ಯೆಗಳಾಗುತ್ತಿವೆ. ಇದರಿಂದ ಗೋವುಗಳನ್ನು ಪೂಜ್ಯಭಾವದಿಂದ ಗೌರವಿಸುವ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗುವ ಅಪಾಯವಿದೆ. ಕೂಡಲೇ ಸರ್ಕಾರ ಬಾದಾಮಿಯಲ್ಲಿ ಗೋಹತ್ಯೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮಕೈಗೊಂಡು ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗೋ ಹಾಗೂ ರಾಸುಗಳ ರಕ್ಷಣೆಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಗೋ ಹತ್ಯೆ ನಿಷೇಧ ಕಾನೂನು ಅವಶ್ಯವಾಗಿದ್ದು ಅದನ್ನು ಯಾವುದೇ ಕಾರಣ ತೋರಿಸಿ ರದ್ದುಗೊಳಿಸುವುದಾಗಲಿ, ತಿದ್ದುಪಡೆಯ ಮೂಲಕ ದುರ್ಬಲಗೊಳಿಸುವುದಾಗಲಿ ಮಾಡಬಾರದೆಂದು ಸರ್ಕಾರಕ್ಕೆ ವಿನಂತಿಸಿದರು.

ಒಡಹುಟ್ಟಿದವನ್ನು ಹೊಲಕ್ಕೆ ಕರೆದು ಕೊಡಲಿಯಿಂದ ಕೊಚ್ಚಿ ಕೊಂದ ಸಹೋದರರು!

ಮನವಿ ಸ್ವೀಕರಿಸಿ ಮಾತನಾಡಿದ ಉಪತಹಸೀಲ್ದಾರ್‌ ರಾಜಶೇಖರ ಸಾತಿಹಾಳ ವಕೀಲರ ಸಂಘದ ಮನವಿಯನ್ನು ಜಿಲ್ಲಾಧಿ​ಕಾರಿಗಳ ಮುಖಾಂತರ ಸರ್ಕಾರದ ಗಮನಕ್ಕೆ ತರುತ್ತೇನೆಂದರು. ಈ ಸಂದರ್ಭದಲ್ಲಿ ವಕೀಲರಾದ ಮಹೇಶ ಗೌಡರ, ಎಸ್‌.ವಿ.ಗುರುಣಗೌಡರ, ಎನ್‌.ಎಸ್‌. ಸಾಲಿಮಠ,ವಿ.ಎಸ್‌.ಲಮಾಣಿ ಇತರರಿದ್ದರು.

click me!