ಸಿಲಿಕಾನ್‌ ಸಿಟಿ ಜನರೇ ಎಚ್ಚರ: ಮೆಟ್ರೋ ನಿಲ್ದಾಣದ ಬಳಿ ಸುಪ್ರೀಂಕೋರ್ಟ್‌ ವಕೀಲನ ಮೇಲೆ ಹಲ್ಲೆ, ಫೋನ್‌ ದೋಚಿದ ದರೋಡೆಕೋರರು

By BK Ashwin  |  First Published Jul 1, 2023, 3:24 PM IST

ವಕೀಲ ದಾಸರಿ ಗೋವಿಂದ್ ಅವರು ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಜಾಲಹಳ್ಳಿ ಕ್ರಾಸ್‌ನಲ್ಲಿರುವ ವೈಷ್ಣವಿ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ಗೆ ಹಿಂದಿರುಗುತ್ತಿದ್ದಾಗ ಮಂಗಳವಾರ ರಾತ್ರಿ ಅವರ ಮೇಲೆ ಹಲ್ಲೆ ನಡೆಸಿ ಫೋನ್‌ ದೋಚಿದ್ದಾರೆ. 


ಬೆಂಗಳೂರು (ಜುಲೈ 1, 2023): ಬಳ್ಳಾರಿಯಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವ 52 ವರ್ಷದ ಸುಪ್ರೀಂ ಕೋರ್ಟ್ ವಕೀಲರೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ನಗರದ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಅಮಾನುಷವಾಗಿ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ವಕೀಲರು ಆರೋಪಿಗಳಲ್ಲಿ ಒಬ್ಬನನ್ನು ದೂರದವರೆಗೆ ಬೆನ್ನಟ್ಟಿ ಹಿಡಿದ್ದಾರೆ. ಆದರೂ, ಮತ್ತೊಬ್ಬ ಆರೋಪಿ ಅವರ ಮೊಬೈಲ್ ಫೋನ್ ಮತ್ತು 3,000 ರೂ.ನಗದು ಸಮೇತ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಕೀಲ ದಾಸರಿ ಗೋವಿಂದ್ ಅವರು ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಜಾಲಹಳ್ಳಿ ಕ್ರಾಸ್‌ನಲ್ಲಿರುವ ವೈಷ್ಣವಿ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ಗೆ ಹಿಂದಿರುಗುತ್ತಿದ್ದಾಗ ಮಂಗಳವಾರ ರಾತ್ರಿ 9.15 ರಿಂದ 9.45 ರ ನಡುವೆ ಈ ಘಟನೆ ಸಂಭವಿಸಿದೆ ಎಂದು ಮಾಧ್ಯಮಕ್ಕೆ ಅವರು ಹೇಳಿಕೊಂಡಿದ್ದಾರೆ. "ನಾನು ಮೆಟ್ರೋ ನಿಲ್ದಾಣದಿಂದ ನನ್ನ ಅಪಾರ್ಟ್ಮೆಂಟ್‌ಗೆ ಹಿಂತಿರುಗುತ್ತಿದ್ದೆ. ರಾತ್ರಿ ಸುಮಾರು 9.15 ಆಗಿತ್ತು. ನಾನು ಫೋನ್ ಕರೆಗೆ ಉತ್ತರಿಸುತ್ತಿದ್ದೆ. ಆರೋಪಿಗಳಲ್ಲಿ ಒಬ್ಬನು ನನ್ನ ಮುಂದೆ ಬಂದು ನನ್ನ ಫೋನ್ ಕಸಿದುಕೊಂಡನು. ಅವನು ಓಡಿಹೋಗಲು ಪ್ರಯತ್ನಿಸಿದಾಗ, ನಾನು ಅವನನ್ನು ಹಿಡಿದಿಯಲು ಯಶಸ್ವಿಯಾದೆ. 

Tap to resize

Latest Videos

ಇದನ್ನು ಓದಿ: ಬಾಲಕನ ಹತ್ಯೆ ಖಂಡಿಸಿ ಫ್ರಾನ್ಸಲ್ಲಿ ಭಾರಿ ಹಿಂಸೆ: ನೂರಾರು ವಾಹನಕ್ಕೆ ಬೆಂಕಿ; 200 ಪೊಲೀಸರಿಗೆ ಗಾಯ, ನೂರಾರು ಜನ ಸೆರೆ

ಆದರೆ, ಕತ್ತಲೆಯಲ್ಲಿದ್ದ ಎರಡನೇ ಆರೋಪಿ ತನ್ನ ಜತೆಗಾರನ ಸಹಾಯಕ್ಕೆ ಬಂದರು ಮತ್ತು ಇಬ್ಬರೂ ನನ್ನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬ ಆರೋಪಿ ನನ್ನ ಜೇಬಿನಿಂದ ಮೊಬೈಲ್ ಫೋನ್ ಮತ್ತು ಹಣವನ್ನು ತೆಗೆದುಕೊಂಡರು. ನನಗೆ ತೀವ್ರ ರಕ್ತಸ್ರಾವ ಪ್ರಾರಂಭವಾಯಿತು ಮತ್ತು ಒಂದು ನಿಮಿಷ ನನ್ನ ಜೀವನದ ಕೊನೆಯ ದಿನ ಎಂದು ನಾನು ಭಾವಿಸಿದೆ. ಇಬ್ಬರು ಓಡಲು ಪ್ರಾರಂಭಿಸಿದಾಗ, ನಾನು ಅವರನ್ನು ಹಿಂಬಾಲಿಸಿ ಒಬ್ಬ ಆರೋಪಿಯನ್ನು ಹಿಡಿದುಕೊಂಡೆ ಎಂದೂ ಸುಪ್ರೀಂಕೋರ್ಟ್‌ ವಕೀಲ ಗೋವಿಂದ್ ಹೇಳಿದರು.

ಈ ವೇಳೆ ಕೆಲವು ದಾರಿಹೋಕರು ಸಹಾಯ ಮಾಡಿದರು ಎಂದೂ ಗೋವಿಂದ್ ಹೇಳಿದರು. “ನನ್ನ ಅದೃಷ್ಟಕ್ಕೆ, ಸ್ಥಳಕ್ಕೆ ಸಮೀಪದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಹೊಯ್ಸಳ ವಾಹನವು ಆರೋಪಿಯನ್ನು ಕರೆದೊಯ್ದಿದೆ. ಇಡೀ ಘಟನೆಯು ಸುಮಾರು 30 ನಿಮಿಷಗಳ ಕಾಲ ನಡೆದಿದೆ’’ ಎಂದೂ ಸುಪ್ರೀಂಕೋರ್ಟ್‌ ವಕೀಲ ವಿವರಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ಅಪಘಾತ: ಸವಿನಿದ್ರೆಯಲ್ಲಿದ್ದ 25 ಮಂದಿ ಸಜೀವ ದಹನ

ವಕೀಲರು ನಂತರ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದೂ ತಿಳಿದುಬಂದಿದೆ. ಇನ್ನು, ಈ ಸಂಬಂಧ ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ಪ್ರಕರಣವು ಇನ್ನೂ ತನಿಖೆಯಲ್ಲಿದೆ. ವಕೀಲರು ಹಿಡಿದುಕೊಟ್ಟ ಬಂಧಿತ ಆರೋಪಿಯನ್ನು ಸಿದ್ದು ಎಂದು ಗುರುತಿಸಲಾಗಿದೆ. ಆರೋಪಿಗಳು ಮಾಮೂಲಿ ಕಳ್ಳರಾಗಿರಬೇಕು ಎಂದು ನಾವು ಶಂಕಿಸುತ್ತೇವೆ. ದರೋಡೆಕೋರರು ವಕೀಲರನ್ನು ತೀವ್ರವಾಗಿ ಥಳಿಸಿದರೂ, ಅವರನ್ನು ಬಂಧಿಸುವಲ್ಲಿ ವಕೀಲರ ಧೈರ್ಯವನ್ನು ನಾವು ಪ್ರಶಂಸಿಸುತ್ತೇವೆ ಎಂದೂ ಹೇಳಿದರು.

ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 397 ಅಡಿಯಲ್ಲಿ ಸಾವು ಅಥವಾ ಘೋರವಾದ ಗಾಯವನ್ನು ಉಂಟುಮಾಡುವ ಪ್ರಯತ್ನದೊಂದಿಗೆ ದರೋಡೆ ಪ್ರಕರಣವನ್ನು ದಾಖಲಿಸಲಾಗಿದೆ. ಪೀಣ್ಯ ಉಪ ವಿಭಾಗದ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋವಿಂದ್ ಐಪಿಎಸ್ ಅಧಿಕಾರಿ ಅಶೋಕ್ ವೆಂಕಟ್ ಅವರ ಚಿಕ್ಕಪ್ಪ ಆಗಿದ್ದು, ಇತ್ತೀಚೆಗೆ ಆದಾಯ್ಕೂ ಹೆಚ್ಚು ಆಸ್ತಿ ಮಾಡಿದ ಆರಪ ಹೊಂದಿರುವ ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸ್ ತಂಡದ ಮುಖ್ಯಸ್ಥರಾಗಿದ್ದರು.

ಇದನ್ನೂ ಓದಿ: ಅಯ್ಯೋ ಪಾಪಿ: ಮಗಳ ಮದುವೆಯ ದಿನವೇ ತಂದೆಯನ್ನು ಕೊಂದ ಮಾಜಿ ಪ್ರೇಮಿ

click me!