ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಚಾಕು ಇರಿದ ಪಾಪಿ, ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ!

Published : Feb 22, 2025, 10:56 PM ISTUpdated : Feb 22, 2025, 11:56 PM IST
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಚಾಕು ಇರಿದ ಪಾಪಿ, ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ!

ಸಾರಾಂಶ

ಶಿರಸಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಚಾಕು ಇರಿದು ಸಹ ಪ್ರಯಾಣಿಕ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕ ಪತ್ನಿಯ ಎದುರಲ್ಲೇ ಸಾವನ್ನಪ್ಪಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಈ ದುರ್ಘಟನೆ ಸಂಭವಿಸಿದೆ.

ಕಾರವಾರ (ಫೆ.22): ಪ್ರಯಾಣಿಕನಿಗೆ ಕ್ಷುಲ್ಲಕ ಕಾರಣಕ್ಕೆ  ಚಾಕು ಇರಿದು  ಸಹ ಪ್ರಯಾಣಿಕ  ಪರಾರಿಯಾಗಿರುವ ಘಟನೆ ಶನಿವಾರ ಶಿರಸಿಯಲ್ಲಿ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಹ ಪ್ರಯಾಣಿಕ ಪತ್ನಿಯ ಎದುರಲ್ಲೇ ದಾರುಣವಾಗಿ ಸಾವು ಕಂಡಿದ್ದಾನೆ. ಶಿರಸಿಯಿಂದ ಬೆಂಗಳೂರಿಗೆ ತೆರಳುತಿದ್ದ  ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿಯೇ ಈ ಘಟನೆ ನಡೆದಿದ. ಸಾಗರ ನಗರದ ಗಂಗಾಧರ್ ಚಾಕು ಇರಿತಕ್ಕೊಳಗಾಗಿ ಸಾವು ಕಂಡ ವ್ಯಕ್ತಿ. ಶಿರಸಿಯ ದುಂಡಸಿ ನಗರದ ಪ್ರೀತಮ್ ಡಿಸೋಜಾ ಚಾಕು ಇರಿದು ಪರಾರಿಯಾಗಿದ್ದಾನೆ. ಗಂಗಾಧರ್ ಶಿರಸಿಯಲ್ಲಿನ ಪತ್ನಿಯ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಇಂದು ಪತ್ನಿ ಜೊತೆ ಬೆಂಗಳೂರಿಗೆ ಶಿರಸಿಯಿಂದ ಗಂಗಾಧರ್‌ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪ್ರೀತಮ್ ನಡುವೆ ಕ್ಷುಲ್ಲಕ ಕಾರಣಕ್ಕೆ ತಗಾದೆ ಶುರುವಾಗಿದೆ. ಈ ಹಂತದಲ್ಲಿ ಜೇಬಿನಿಂದ ಚಾಕು ತೆಗೆದು ಗಂಗಾಧರ್ ಎದೆಗೆ ಚುಚ್ಚಿ ಪ್ರೀತಮ್ ಪರಾರಿಯಾಗಿದ್ದಾನೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಊಟ ಹಾಕೋದು ತಡವಾಗಿದ್ದಕ್ಕೆ ಪತ್ನಿಯನ್ನೇ ಕೊಂದ 79 ವರ್ಷದ ವೃದ್ಧ!

'ನಾನು ಮತ್ತು ಗಂಡ ಬೆಂಗಳೂರಿನಲ್ಲಿ ಕೆಲಸ ಮಾಡೋದು. ಇಲ್ಲಿ ಕೂತಿರೋರು ನಮ್ಮ ಅತ್ತಿಗೆ. ಅವರ ಮನೆಯ ಕಾರ್ಯಕ್ರಮಕ್ಕಾಗಿ ಶಿರಸಿಗೆ ಬಂದಿದ್ದೆವು. ಇಲ್ಲಿಂದ ನಾವು ಇವತ್ತು ಬೆಂಗಳೂರಿಗೆ ಹೊರಟ್ಟಿದ್ದೆವು. ಅದಕ್ಕಾಗಿ ಹಾವೇರಿ-ಬೆಂಗಳೂರು ಬಸ್‌ ಹತ್ತಿದ್ದೆವು. ನನ್ನೂರು ಸಿರಸಿ. ಅವರ ಊರು ಸಾಗರ. ಹಳೆ ಬಸ್‌ ಸ್ಟ್ಯಾಂಡ್‌ನಲ್ಲಿ ಬಸ್‌ ಚೇಂಜ್‌ ಮಾಡಲು ಇಳಿಯಲು ಬಂದಿದ್ದೆವು. ಈ ವೇಳೆ ಚರ್ಚ್ ಎದುರುಗಡೆ ಅವರು ದಾಳಿ ಮಾಡಿದರು. ಆ ಹುಡುಗನ ಹೆಸರು ಪ್ರೀತಮ್‌ ಅಂತಾ. ಆತ ಶಿರಸಿಯವನೇ' ಎಂದು ಗಂಗಾಧರ್‌ ಅವರ ಪತ್ನಿ ತಿಳಿಸಿದ್ದಾರೆ.

ಡ್ರಗ್ಸ್​, ಸೆ*ಗಳಿಗೆ ದಾಸರಾಗ್ತಿರೋ ಮಕ್ಕಳು: ನಿಗಾ ಇಡಲು ಖಾಸಗಿ ಪತ್ತೇದಾರಿಗಳ ಮೊರೆ ಹೋಗ್ತಿರೋ ಬೆಂಗಳೂರಿಗರು!

ಕೊಲೆ ಮಾಡಿದ ಆರೋಪಿ ಶಿರಸಿ ನಗರ ಠಾಣಾ ಪೊಲೀಸರಿಗೆ ಶರಣಾಗಿದ್ದಾನೆ. ಶಿರಸಿಯ ದುಂಡಸಿ ನಗರದ ನಿವಾಸಿ ಆರೋಪಿ ಪ್ರೀತಮ್ ಡಿಸೋಜಾ ಪೊಲೀಸರಿಗೆ ಶರಣಾಗಿದ್ದು, ಇದರ ಬೆನ್ನಲ್ಲಿಯೇ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಕೊಲೆ ಆರೋಪಿ ಪ್ರೀತಮ್ ಹಾಗೂ ಮೃತನ ಹೆಂಡತಿ ಪೂಜಾ ಹತ್ತು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು. ಶಿರಸಿ ನಿವಾಸಿಯಾಗಿದ್ದ 30 ವರ್ಷದ ಪೂಜಾ ಮನೆ ಬಿಟ್ಟು ಕೆಲ ಕಾಲ ಕೊಲೆ ಆರೋಪಿ ಪ್ರೀತಮ್‌ ಜೊತೆಯಲ್ಲೇ ಇದ್ದಳು ಎಂದು ವರದಿಯಾಗಿದೆ. ಆರೋಪಿ ಪ್ರೀತಮ್‌ಗೆ ಬೇರೆ ಅಫೇರ್ ಇರೋದು ತಿಳಿದು ಅವನನ್ನು ಬಿಟ್ಟು ಕೆಲಸಕ್ಕೆ ಪೂಜಾ ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದಳು.

ಈ ವೇಳೆ ಬೆಂಗಳೂರಿನಲ್ಲಿ ಪೂಜಾ ಹಾಗೂ ಸಾಗರ ನಗರದ 35 ವರ್ಷದ ಗಂಗಾಧರ್ ಎನ್ನುವವರ ಜೊತೆ ಲವ್‌ ಆಗಿ ಮದುವೆಯಾಗಿತ್ತು.ಕಳೆದ 7-8 ತಿಂಗಳ ಹಿಂದೆ ಮದುವೆಯಾಗಿದ್ದ ಪೂಜಾ ಹಾಗೂ ಗಂಗಾಧರ್ ಸುಖವಾಗಿ ಸಂಸಾರ ಮಾಡಿಕೊಂಡಿದ್ದರು. ಮೃತ ಗಂಗಾಧರ್ ಶಿರಸಿಯಲ್ಲಿನ ಅತ್ತಿಗೆ ಮನೆಗೆ ಮೊನ್ನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಇಂದು ಪತ್ನಿ ಜೊತೆ ಬೆಂಗಳೂರಿಗೆ ಶಿರಸಿಯಿಂದ ಹೊರಟಿದ್ದರು.

ಶಿರಸಿಯಿಂದ ಬೆಂಗಳೂರಿಗೆ   ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ತೆರಳಲು ಗಂಗಾಧರ್ ಹಾಗೂ ಪೂಜಾ ಬಂದಿದ್ದರು. ಅದೇ ಸಮಯಕ್ಕೆ ಚಾಕು ಹಿಡಿದು ಸಿದ್ಧವಾಗಿ ಬಸ್‌ನೊಳಗೆ ಗಂಗಾಧರ್ ಪಕ್ಕದಲ್ಲೇ ಬಂದು ಪ್ರೀತಮ್ ಕುಳಿತುಕೊಂಡಿದ್ದ. ಗಂಗಾಧರ್ ಪತ್ನಿ ವಿಚಾರಕ್ಕೋ ಅಥವಾ ಬೇರೆ ವಿಚಾರಕ್ಕೋ ಗಂಗಾಧರ್ ಹಾಗೂ ಆರೋಪಿ ಪ್ರೀತಮ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಜೇಬಿನಿಂದ ಚಾಕು ತೆಗೆದು ಗಂಗಾಧರ್ ಎದೆಗೆ ಚುಚ್ಚಿ ಆರೋಪಿ ಪ್ರೀತಮ್‌ ಪರಾರಿಯಾಗಿದ್ದ. ಘಟನೆ ಸಂಬಂಧಿಸಿ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲವು ಅನುಮಾನ: ಪೂಜಾ ಹಾಗೂ ಗಂಗಾಧರ್ ದಂಪತಿ ಹೊರಡೋ ಸಮಯದಲ್ಲೇ ಪ್ರೀತಮ್ ಎಂಟ್ರಿ ಮೂಡಿಸಿದೆ ಹಲವು ಸಂಶಯ ಮೂಡಿಸಿದೆ. ಹಳೇ ಲವ್ವರ್‌ ಆರೋಪಿ ಪ್ರೀತಮ್‌ನನ್ನು ಗಂಗಾಧರ್ ಪತ್ನಿ ಪೂಜಾಳೇ ಕರೆಯಿಸಿದ್ದಳೇ ? ಅನ್ನೋದು ಮುಂದಿರುವ ಪ್ರಶ್ನೆಯಾಗಿದೆ. ಗಂಗಾಧರ್ ಜತೆ ಮದುವೆಯಾಗಿದ್ದರೂ ಆರೋಪಿ ಪ್ರೀತಮ್ ಜತೆ ಪೂಜಾಗಿತ್ತಾ ಸಂಪರ್ಕ ? ಅನ್ನೋದು ಇನ್ನೊಂದು  ಪ್ರಶ್ನೆಯಾಗಿದೆ. ಒಂದು ದಶಕದ ಲವ್‌ ಅಫೇರ್‌ಗೆ ಪತಿರಾಯ ಗಂಗಾಧರ್ ಸುಮ್ಮನೆ ಬಲಿಯಾದ್ನಾ ಎನ್ನುವ ತನಿಖೆ ನಡೆಯುತ್ತಿದೆ. ಕೊಲೆ ಪ್ರಕರಣ ಸಂಬಂಧಿಸಿ ಶಿರಸಿ ನಗರ ಠಾಣಾ ಪೋಲೀಸರಿಂದ ತನಿಖೆ ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ