ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಬಂಡಿಕಾಶಿಯಲ್ಲಿ ನಡೆದಿದೆ.
ಕಾರವಾರ, ಉತ್ತರಕನ್ನಡ (ಮೇ.11): ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಬಂಡಿಕಾಶಿಯಲ್ಲಿ ನಡೆದಿದೆ.
ಶಿರಾಲಿಯ ಬಂಡಿಕಾಶಿ ನಿವಾಸಿ ಮಂಜುನಾಥ ರಾಮ ನಾಯ್ಕ ಎಂಬುವರ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಖದೀಮರು. ಬೆಳಗ್ಗೆ ಮಗನನ್ನು ಕರೆದುಕೊಂಡು ತನ್ನ ಬೊಲೆರೋ ವಾಹನದಲ್ಲಿ ಬಾಡಿಗೆಗೆ ತೆರಳಿದ್ದ ಮಂಜುನಾಥ. ಈ ವೇಳೆ ಪತ್ನಿ ಬೇಬಿ ಮಂಜುನಾಥ ನಾಯ್ಕ್ ಮನೆಗೆ ಬೀಗ ಹಾಕಿ ಪೇಪರ್ ಬ್ಯಾಗ್ ತಯಾರಿಕೆ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದರು. ಇದೇ ಸಮಯಕ್ಕೆ ಹೊಂಚು ಹಾಕಿದ್ದ ಖದೀಮರು, ಮನೆಯ ಹಿಂಬಾಗಿಲನ್ನು ತೆರೆದು ಒಳನುಗ್ಗಿದ್ದಾರೆ. ಬೆಡ್‌ರೂಂ ಕೋಣೆಯ ಕಪಾಟು ಒಡೆದು ಅಂದಾಜು 250 ಗ್ರಾಂ ತೂಕದ ಚಿನ್ನಾಭರಣ ಹಾಗೂ ಸುಮಾರು 40 ಸಾವಿರ ರೂಪಾಯಿ ನಗದು ಹಣ ದೋಚಿ ಪರಾರಿಯಾಗಿದ್ದಾರೆ.
undefined
ಗದಗನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಟಿವಿ, ಫ್ರಿಡ್ಜ್ ಒಡೆದು ದುಷ್ಕರ್ಮಿಗಳ ಅಟ್ಟಹಾಸ!
ಮನೆ ಮಾಲೀಕ ಹಿಂದಿರುಗಿ ಬಂದು ಅಡುಗೆ ಒಲೆಗೆ ಸೌದೆ ಹಾಕಲು ಮುಂದಾದಾಗ ಹಿಂಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಆಗ ಪರಿಶೀಲಿಸಿದಾಗ ಮನೆಯೊಳಗೆ ಎಲ್ಲವೂ ಚೆಲ್ಲಾಪಿಲ್ಲಿಯಾಗಿರೋದು ಕಂಡು ಬಂದಿದೆ. ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿರುವುದು ತಿಳಿದು ಶಾಕ್ ಆಗಿರುವ ಮಾಲೀಕ. ಕೂಡಲೇ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರವಾರದಿಂದ ಶ್ವಾನದಳವನ್ನು ಕರೆಯಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಖದೀಮರ ಚಲನವಲನ ಆಧರಿಸಿ ಪತ್ತೆಗೆ ಮುಂದಾಗಿರುವ ಪೊಲೀಸರು.