ಗಂಡನ ಜತೆ ಜಗಳಕ್ಕೆ 3 ವರ್ಷದ ಮಗಳನ್ನು ಬೆಟ್ಟದ ಮೇಲೆ ಬಿಟ್ಟುಬಂದ ಅಮ್ಮ, ಹಸಿವಿನಿಂದ ಸಾವು ಕಂಡ ಮಗು!

By Santosh Naik  |  First Published May 11, 2024, 7:55 PM IST

ಗಂಡನ ಜತೆ ಜಗಳವಾದ್ರೆ ಹೆಂಡ್ತಿ ಏನು ಮಾಡಬಹುದು? ಮನೆ ಬಿಟ್ಟು ಹೋಗಬಹುದು. ಇಲ್ಲ ಪೊಲೀಸರಿಗೆ ದೂರು ನೀಡಬಹುದು. ಆದರೆ, ಛತ್ತೀಸ್‌ಗಢದಲ್ಲಿ ಮಹಿಳೆಯೊಬ್ಬಳು ಗಂಡನ ಜೊತೆ ಗಲಾಟೆಯ ಬೆನ್ನಿಗೆ ಮೂರು ವರ್ಷದ ಮಗಳನ್ನು ಬೆಟ್ಟದ ಮೇಲೆ ಏಕಾಂಗಿಯಾಗಿ ಬಿಟ್ಟುಬಂದಿದ್ದಾಳೆ.
 


ನವದೆಹಲಿ (ಮ.11): ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸುವಂಥ ಅಮಾನವೀಯ ಘಟನೆ ಛತ್ತೀಸ್‌ಗಢ ರಾಜ್ಯದ ಮುಂಗೇಲಿಯಲ್ಲಿ ನಡೆದಿದೆ. ಇಲ್ಲಿ ಗ್ರಾಮದ ಸರ್‌ಪಂಚ್‌ ಆಗಿರುವ ಮಹಿಳೆ ತನ್ನ ಗಂಡನ ಜೊತೆ ಗಲಾಟೆ ಮಾಡಿಕೊಂಡಿದ್ದ ಕಾರಣಕ್ಕೆ ತನ್ನ ಮೂರು ವರ್ಷದ ಮಗಳನ್ನು ಅಮಾನುಷವಾಗಿ ಕೊಲೆ ಮಾಡಿದ್ದಾಳೆ. ಹಾಗಂತ ಏಕಾಏಕಿ ಈಕೆ ಕೊಲೆ ಮಾಡಿದ್ದಲ್ಲ. ಗಂಡನ ಜೊತೆ ಗಲಾಟೆಯಾದ ಬೆನ್ನಲ್ಲಿಯೇ ತನ್ನ ಮೂರು ವರ್ಷದ ಪುತ್ರಿಯನ್ನು ಬೆಟ್ಟದ ತುದಿಗೆ ಏಕಾಂಗಿಯಾಗಿ ಬಿಟ್ಟುಬಂದಿದ್ದಾಳೆ. ಕಾಡಿನಲ್ಲಿ ಎಲ್ಲಿ ಹೋಗೋದು ಅನ್ನೋದು ಗೊತ್ತಾಗದೇ, ಹಸಿವು ಹಾಗೂ ಬಾಯಾರಿಕೆಯಿಂದ ಕಂಗಾಲಾಗಿದ್ದ ಮಗು ಹಾಗೇ ಸಾವು ಕಂಡಿದೆ. ಮೂರು ದಿನಗಳ ಬಳಿಕ ಮಗುವಿನ ಶವ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭ ಮಾಡಿದ್ದಾರೆ.  ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಷಯವು ಮುಂಗೇಲಿ ಜಿಲ್ಲೆಯ ಲೋರ್ಮಿ ಪೊಲೀಸ್ ಠಾಣೆ ವ್ಯಾಪ್ತಿಯ ಖುಡಿಯಾ ಔಟ್‌ಪೋಸ್ಟ್‌ನಲ್ಲಿರುವ ಪಟ್ಪರ್ಹಾ ಎಂಬ ಅರಣ್ಯ ಗ್ರಾಮಕ್ಕೆ ಸಂಬಂಧಿಸಿದೆ. ಇಲ್ಲಿ ಸರಪಂಚ್ ತಾಯಿಯೇ ತನ್ನ ಮೂರು ವರ್ಷದ ಮಗಳನ್ನು ದಾರುಣವಾಗಿ ಸಾಯಿಸಿದ್ದಾರೆ.

ತಾಯಿ ತನ್ನ ಮೂರು ವರ್ಷದ ಮಗಳನ್ನು ಕಾಡಿನ ಬೆಟ್ಟದ ಮೇಲೆ ಒಂಟಿಯಾಗಿ ಬಿಟ್ಟಿದ್ದಾಳೆ. ಇಲ್ಲಿ ಹುಡುಗಿ ಹಸಿವು ಮತ್ತು ಬಾಯಾರಿಕೆಯಿಂದ ಸಾವು ಕಂಡಿದ್ದಾಳೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ ಸರಪಂಚ್ ಸಂಗೀತಾ ಅವರು ಮೇ 6 ರಂದು ಪತಿಯೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದರು.ಕೋಪಗೊಂಡ ಮಹಿಳಾ ಸರಪಂಚ್ ತನ್ನ ಇಬ್ಬರು ಮಕ್ಕಳೊಂದಿಗೆ ಕಾಲ್ನಡಿಗೆಯಲ್ಲಿ ಕಾಡಿಗೆ ತೆರಳಿದ್ದರು.

Tap to resize

Latest Videos

ಕದ್ದುಮುಚ್ಚಿ 2ನೇ ಮದುವೆಗೆ ರೆಡಿಯಾಗ್ತಿದ್ದ ಮಗ, ದರದರನೆ ಎಳೆದು ಪೊಲೀಸರಿಗೆ ಒಪ್ಪಿಸಿದ ತಂದೆ!

ಕಾಡಿಗೆ ಹೋಗುವಾಗ ಸಂಗೀತಾ ತನ್ನ ಒಂದು ವರ್ಷದ ಪುತ್ರ ಹಾಗೂ ಮೂರು ವರ್ಷದ ಮಗಳು ಅನುಷ್ಕಾಳನ್ನು ಕರೆದುಕೊಂಡು ಹೋಗಿದ್ದರು. ಮೂಲಗಳ ಪ್ರಕಾರ ಸಂಗೀತಾ, ಗಂಡನ ಮನೆಯಂದ 25 ಕಿಲೋಮೀಟರ್‌ ದೂರದಲ್ಲಿರುವ ಅಪ್ಪನ ಮನೆಗೆ ಕಾಲ್ನಡಿಗೆಯಲ್ಲಿ ಹೀಗಬೇಕು ಎಂದು ತೀರ್ಮಾನ ಮಾಡಿದ್ದರು. ಅವರ ತಂದೆಯ ಮನೆ ಇರುವ ದಿಂಡೋರಿ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಜಿಲ್ಲೆಯ ಗಡಿ ಪ್ರದೇಶವಾಗಿದೆ. ಇಬ್ಬರು ಮಕ್ಕಳನ್ನು ಕರೆದುಕೊಂಡು ಹೊರಟ ಸಂಗೀತಾ ಮಗಳು ಅನುಷ್ಕಾಳನ್ನು ಗ್ರಾಮದಿಂದ 5 ಕಿಲೋಮೀಟರ್‌ ದೂರದಲ್ಲಿದದ ಮೈಲು ಬೆಟ್ಟದ ಮೇಲೆ ಬಿಟ್ಟುಬಂದಿದ್ದಳು. ಇದು ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿದೆ. ಈ ವಿಚಾರವನ್ನು ಮನೆಯಲ್ಲಿ ಹೇಳಿದ ಬಳಿಕ ಅಕ್ಕಪಕ್ಕದವರು ಅಚ್ಚರಿಗೊಂಡಿದ್ದರು. ತಕ್ಷಣವೇ ಸಂಗೀತಾ ಅವರ ಪತಿಯೊಂದಿಗೆ ಕಾಡಿನಲ್ಲಿ ಅನುಷ್ಕಾಳನ್ನು ಹುಡುಕಲು ಆರಂಭ ಮಾಡಿದ್ದರು.

ಗದಗನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಟಿವಿ, ಫ್ರಿಡ್ಜ್ ಒಡೆದು ದುಷ್ಕರ್ಮಿಗಳ ಅಟ್ಟಹಾಸ!

ಬಾಲಕಿಯ ತಾಯಿ ಸಂಗೀತಾ ಬಾಲಕಿಯನ್ನು ಕಾಡಿನ ಯಾವ ಪ್ರದೇಶಲ್ಲಿ ಬಿಟ್ಟು ಹೋಗಿದ್ದಾಳೆಂದು ಎಂದು ತಿಳಿಸಲು ಸಾಧ್ಯವಾಲಿಲ್ಲ. ಗ್ರಾಮಸ್ಥರೊಂದಿಗೆ ಪೊಲೀಸ್ ತಂಡಗಳು ಕೂಡ ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದವು. ಅಂತಿಮವಾಗಿ ಮೇ 9ರ ರಾತ್ರಿ ಬಾಲಕಿಯ ಶವ ಮೈಲು ಬೆಟ್ಟದಲ್ಲಿ ಪತ್ತೆಯಾಗಿದೆ.. ಬಾಲಕಿಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅನುಷ್ಕಾ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಅಥವಾ ಪ್ರಾಣಿಗಳ ಯಾವುದೇ ಕುರುಹುಗಳು ಕಂಡುಬಂದಿಲ್ಲ. ಮೂರು ವರ್ಷದ ಬಾಲಕಿ ಹಸಿವು ಮತ್ತು ಬಾಯಾರಿಕೆಯಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿಸಲಾಗಿದೆ.

 

click me!