ಪ್ರೀತಿ, ಪ್ರೇಮಲ್ಲಿ ಅಪ್ರಾಪ್ತ ಬಾಲಕಿ ಹಿಂದೆ ಬಿದ್ದವನು ಆಕೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದೇಕೆ ಎನ್ನುವ ವಿಷಯವೇ ಅಚ್ಚರಿ. ಬಾಲಕಿಯ ತಲೆ ಕಡಿದುಕೊಂಡು ಹೋದವನು ಒಂದು ದಿನವೆಲ್ಲಾ ಏನೇನು ಮಾಡಿದ ಎನ್ನುವುದನ್ನು ಕೇಳಿದರೆನೇ ನೀವು ಬೆಚ್ಚಿ ಬೀಳುತ್ತೀರ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.11) ಪ್ರೀತಿ, ಪ್ರೇಮಲ್ಲಿ ಅಪ್ರಾಪ್ತ ಬಾಲಕಿ ಹಿಂದೆ ಬಿದ್ದವನು ಆಕೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದೇಕೆ ಎನ್ನುವ ವಿಷಯವೇ ಅಚ್ಚರಿ. ಬಾಲಕಿಯ ತಲೆ ಕಡಿದುಕೊಂಡು ಹೋದವನು ಒಂದು ದಿನವೆಲ್ಲಾ ಏನೇನು ಮಾಡಿದ ಎನ್ನುವುದನ್ನು ಕೇಳಿದರೆನೇ ನೀವು ಬೆಚ್ಚಿ ಬೀಳುತ್ತೀರ.
ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಬರ್ಭರ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇಂದು ಬಂಧನವಾಗಿರುವ ಆರೋಪಿ ಪ್ರಕಾಶ್ ನನ್ನು ಪೊಲೀಸರು ತಮ್ಮ ಭಾಷೆಯಲ್ಲಿ ಬಾಯ್ಬಿಡಿಸಿದ್ದಾರೆ. ಹತ್ಯೆ ನಡೆದು ಎರಡು ದಿನಗಳೇ ಕಳೆಯುತ್ತಾ ಬಂದರೂ ಇನ್ನೂ ಬಾಲಕಿಯ ರುಂಡ ಸಿಗದ ಹಿನ್ನೆಲೆಯಲ್ಲಿ ಪಾಪಿ ಪ್ರಕಾಶ್ನನ್ನು ಇಂದು ಮಹಜರ್ ಗಾಗಿ ಸ್ಥಳಕ್ಕೆ ಕರೆತಂದಿದ್ದರು. ಈ ವೇಳೆ ಬಾಲಕಿಯ ತಲೆ ಕಡಿದು ಅಡಗಿಸಿಟ್ಟಿದ್ದ ಸ್ಥಳಕ್ಕೆ ಪರಮಪಾಪಿ ಪ್ರಕಾಶ್ನನ್ನು ಕರೆದೊಯ್ದರು.
ಕೊಡಗು ವಿದ್ಯಾರ್ಥಿನಿಯ ತಲೆ ಕಡಿದ ಆರೋಪಿ ಕಾಡಿನಲ್ಲಿ ಬಂಧನ, ಅಪ್ರಾಪ್ತೆಯ ರುಂಡಕ್ಕಾಗಿ ಪೊಲೀಸರ ಶೋಧ!
ತಲೆಯನ್ನು ತೋರಿಸುತ್ತಿದ್ದಂತೆ ಅದನ್ನು ವಶಕ್ಕೆ ಪಡೆಯಲು ಪೊಲೀಸರು ಮಹಜರಿಗಾಗಿ ಬಾಲಕಿಯ ಅಣ್ಣನನ್ನು ಸ್ಥಳಕ್ಕೆ ಕರೆದರು. ಈ ವೇಳೆ ತಮ್ಮ ಮುದ್ದಿನ ತಂಗಿ ತಲೆಯನ್ನು ನೋಡಿದ ಅಣ್ಣ ದಿಲೀಪ್ ಆಕ್ರೋಶ ಗೊಂಡಿದ್ದ. ತೀವ್ರ ರಕ್ತದೊತ್ತಡಕ್ಕೆ ಒಳಗಾಗಿ ಮೈಒದರಾಡಲು ಶುರುಮಾಡಿದ. ಬಳಿಕ ಪೊಲೀಸರು ಆತನಿಗೆ ನೀರು ಕುಡಿಸಿ ಸಮಾಧಾನ ಪಡಿಸುತ್ತಿದ್ದಂತೆ ಅಲ್ಲಿಂದ ನೇರವಾಗಿ ಕೋವಿ ತೆಗೆದುಕೊಂಡು ಬಂದು ಆರೋಪಿಯ ಮೇಲೆ ಹಲ್ಲೆ ಮಾಡುವುದಕ್ಕೆಂದು ಮುಂದಾದ. ಆದರೆ ಪೊಲೀಸರು ಆತನನ್ನು ತಡೆದರು.
ಹೌದು ಕಳೆದ ಒಂದು ವರ್ಷದ ಹಿಂದೆ ಆರೋಪಿ ಪ್ರಕಾಶ್ ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲಕಿಯ ಹಿಂದೆ ಬಿದ್ದಿದ್ದನಂತೆ. ಬಾಲಕಿಯ ಆಗುಹೋಗುಗಳನೆಲ್ಲಾ ನೋಡಿಕೊಳ್ಳುತ್ತಿದ್ದವನು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದನಂತೆ. ಆದರೆ ಕಳೆದ ಹದಿನೈದು ದಿನಗಳ ಹಿಂದೆ ಬಾಲಕಿ ಪ್ರಕಾಶ್ ಗೆ ಕರೆ ಮಾಡಿ ನಿನ್ನನ್ನು ಮದುವೆ ಆಗುವುದಿಲ್ಲ. ಅದೇನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಸವಾಲು ಹಾಕಿದ್ದಳಂತೆ. ಜೊತೆಗೆ ಮೊನ್ನೆ ನಿಶ್ಚಿತಾರ್ಥದ ವೇಳೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲ್ಯವಿವಾಹ ಎಂದು ಅದಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಸಿಟ್ಟಿಗೆದ್ದಿದ್ದ ಎನ್ನುವ ಸತ್ಯವನ್ನು ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.
ಹೌದು ನಿಶ್ಚಿತಾರ್ಥಕ್ಕೂ ಹದಿನೈದು ದಿನಗಳು ಮೊದಲು ಬಾಲಕಿ ಆರೋಪಿ ಪ್ರಕಾಶ್ಗೆ ನಿನ್ನನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದು, ಇಲಾಖೆ ಅಧಿಕಾರಿಗಳು ಬಂದು ಸದ್ಯಕ್ಕೆ ಮದುವೆ ಆಗಕೂಡದು ಎಂದು ನಿಶ್ಚಿತಾರ್ಥಕ್ಕೆ ತಡೆಯೊಡ್ಡಿದ್ದು ಇವೆಲ್ಲವುಗಳಿಂದ ಕ್ರೋಧಗೊಂಡಿದ್ದ ಪ್ರಕಾಶ್ ಬಾಲಕಿಯ ರುಂಡ ಚೆಂಡಾಡಿದ್ದ. ಅಷ್ಟಕ್ಕೆ ಸುಮ್ಮನಾಗದ ಪರಮ ಪಾಪಿ ಬಾಲಕಿಯ ತಲೆಯನ್ನು ಅಲ್ಲಿಂದ ಕೊಂಡೊಯ್ದು ಯಾರೂ ನುಗ್ಗಲಾಗದ ದಟ್ಟಾರಣ್ಯದ ಪೊದೆಯೊಳಗೆ ಅಡಗಿಸಿಟ್ಟಿದ್ದ. ತಲೆಯನ್ನು ಮುಂದಿಟ್ಟುಕೊಂಡು ಬರೋಬ್ಬರಿ ಎರಡು ಗಂಟೆಗಳ ಕಾಲ ಪೊದೆಯೊಳಗೆ ಅವಿತು ಕುಳಿತಿದ್ದ ಎನ್ನುವ ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.
ಹತ್ಯೆಯ ವಿಷಯ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಪಡೆ ನುಗ್ಗಿತ್ತು. ಹತ್ತಾರು ಪೊಲೀಸರು ಪಾಪಿಯ ಬಂಧನಕ್ಕೆ ಅಲ್ಲಿ ತಲಾಶ್ ನಡೆಸುತ್ತಿದ್ದರೆ ಹತ್ಯೆ ನಡೆದಿದ್ದ ಸ್ಥಳದ ಎದುರಿಗೆ ದೂರದಲ್ಲಿದ್ದ ಬೆಟ್ಟದಲ್ಲಿಯೇ ಈ ರಾಕ್ಷಸ ಅಡಗಿ ಕುಳಿತಿದ್ದ. ಅಲ್ಲಿಂದಲೇ ಹತ್ಯೆಯಾಗಿರುವ ಸ್ಥಳದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ಗಮನಿಸುತ್ತಾ ಕುಳಿತಿದ್ದನಂತೆ. ಆದರೆ ಬಾಲಕಿಯನ್ನು ಹತ್ಯೆ ಮಾಡಲೇಬೇಕು ಎಂದು ಫ್ರೀ ಪ್ಲಾನ್ ಮಾಡಿದ್ದ ಎನ್ನುವುದು ಬಾಲಕಿಯ ಅಣ್ಣಂದಿರು ಮತ್ತು ಚಿಕ್ಕಪ್ಪಂದಿರ ಗಂಭೀರ ಆರೋಪ. ಇದೆಲ್ಲವನ್ನು ಗಮನಿಸಿದರೆ ಪ್ಲಾನ್ ಮಾಡಿಯೇ ನನ್ನ ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ನಿಶ್ಚಿತಾರ್ಥ ಮುಗಿಯುತ್ತಿದ್ದಂತೆ ನನ್ನನ್ನು ಮತ್ತು ನನ್ನ ತಮ್ಮನ್ನು ಪ್ರಕಾಶ್ ತನ್ನ ಊರಾದ ಹಮ್ಮಿಯಾಲಕ್ಕೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿದ್ದ. ಅಲ್ಲಿ ನಡೆಯುತ್ತಿದ್ದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ನಮ್ಮನ್ನು ಬಿಟ್ಟು ವ್ಯಕ್ತಿಯೊಬ್ಬರೊಂದಿಗೆ ಪಿಕಪ್ ಏರಿ ನಮ್ಮೂರು ಕುಂಬಾರಗಡಿಗೆಗೆ ಬಂದು ಈ ಕೃತ್ಯ ಎಸಗಿದ್ದಾನೆ. ಇದೆಲ್ಲವನ್ನು ನೋಡಿದರೆ ಪೂರ್ವ ಯೋಜಿತವಾಗಿ ಪ್ಲಾನ್ ಮಾಡಿ ಮತ್ತು ಉದ್ದೇಶಪೂರ್ವಕವಾಗಿ ಈ ಹತ್ಯೆ ಮಾಡಿದ್ದಾನೆ. ಜೊತೆಗೆ ಇವನ ಈ ಕೃತ್ಯಕ್ಕೆ ಮತ್ತಿಬ್ಬರ ಸಹಕಾರವೂ ಇದೆ ಎಂದು ಬಾಲಕಿಯ ಅಣ್ಣ ದಿಲೀಪ್ ಮತ್ತು ಆಕೆಯ ಚಿಕ್ಕಪ್ಪ ರಘು ಪೂಣಚ್ಚ ಹೇಳಿದ್ದಾರೆ.
ಆನ್‌ಲೈನ್ ವಂಚಕರಿಗೆ ನಕಲಿ ಸಿಮ್ ಮಾರಾಟ; ಮಡಿಕೇರಿಯಲ್ಲಿ ಓರ್ವನ ಬಂಧನ
ನೋಡಿದ್ರಲಾ ಇನ್ನೂ ಓದಿ ಒಳ್ಳೆಯ ಬದುಕು ಕಟ್ಟಿಕೊಂಡು ಬಾಳಬೇಕಾಗಿದ್ದ ಬಾಲಕಿಯ ಹಿಂದೆ ಬಿದ್ದಿದ್ದ ಪಾಪಿ, ಆ ಬಾಲಕಿಯನ್ನು ಇಷ್ಟು ಕ್ರೂರವಾಗಿ ಕೊಂದಿದ್ದೇಕೆ ಅಂತ. ಸದ್ಯ ಆತನನ್ನು ಕೊಡಗು ಪೊಲೀಸರು ಹೆಡೆಮುರಿ ಕಟ್ಟಿದ್ದು ಆತನಿಗೆ ಮರಣದಂಡನೆ ಶಿಕ್ಷೆಯೇ ಆಗಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.