'ಪೊಲೀಸರು ಚರ್ಮ‌ ಸುಲಿಯುತ್ತಾರೆ': ಇನ್ಸಪೆಕ್ಟರ್ ಧಮ್ಕಿಯಿಂದ ಶಾಲೆಗೆ ಹೋಗೋದಿಲ್ಲ ಎಂದ ಬಾಲಕಿ?

By Suvarna News  |  First Published Jun 11, 2022, 11:34 PM IST

ಪೊಲೀಸರು ಚರ್ಮ‌ ಸುಲಿಯುತ್ತಾರೆ ಎಂದು ಹೆದರಿ ಶಾಲೆಗೆ ಹೋಗುವುದಿಲ್ಲ ಎಂದು ಬಾಲಕಿ ಹಠ ಹಿಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ


ಉತ್ತರ ಕನ್ನಡ (ಜೂ. 11): ಪೊಲೀಸರು ಚರ್ಮ‌ ಸುಲಿಯುತ್ತಾರೆ ಎಂದು ಹೆದರಿ ಶಾಲೆಗೆ ಹೋಗುವುದಿಲ್ಲ ಎಂದು ಬಾಲಕಿ ಹಠ ಹಿಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಜಮೀನು ವ್ಯಾಜ್ಯ ವಿಚಾರ ಸಂಬಂಧ ಮುಂಡಗೋಡ ಠಾಣಾ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ಹಾಗೂ ಎಎಸ್‌ಐ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೂರದಲ್ಲಿ ನಿಂತು ಮೊಬೈಲ್‌ನಲ್ಲಿ ಬಾಲಕಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಳು. ಈ ವೇಳೆ ಮೊಬೈಲಿನಲ್ಲಿ ವಿಡಿಯೋ  ರೆಕಾರ್ಡ್ ಮಾಡೋದು ನಿಲ್ಲಿಸುವಂತೆ  ಪೊಲೀಸರು ತಿಳಿಸಿದ್ದಾರೆ. 

ಈ ಬಳಿಕ ಠಾಣೆಗೆ ಬಂದರೆ ಚರ್ಮ ಸುಲಿದು ಬಿಡ್ತಿನಿ ಎಂದು ಬೆದರಿಕೆ ಹಾಕಿರೋದಾಗಿ ಯುವತಿ ಆರೋಪ ಮಾಡಿದ್ದಾಳೆ. ಪೊಲೀಸ್ ಅಧಿಕಾರಿಯ ಬೆದರಿಕೆಯಿಂದಲೇ ತಾನು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕಿ ಪಟ್ಟು ಹಿಡಿದಿದ್ದಾಳೆ.  ಪ್ರಕರಣ ಸಂಬಂಧ ಕ್ರಮ ಕೈಗೊಳ್ಳುವಂತೆ ಬಾಲಕಿ ಪೊಷಕರು ದೂರು ನೀಡಿದ್ದಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪೋಷಕರು ದೂರು ನೀಡಿದ್ದಾರೆ. 

Latest Videos

undefined

ಬಾಲಕಿಯ ಅಜ್ಜ ಈ ಹಿಂದೆ ಮಂಜುನಾಥ ಪಾಂಡುರಂಗ ಎಂಬವರಿಗೆ ಜಮೀನು ಮಾರಾಟ ಮಾಡಿದ್ದರು. ಈ ಜಮೀನಿನಲ್ಲಿ ಬೆಳೆ ಬೆಳೆಯಲು ಮುಂದಾದಾಗ ಪ್ರತೀ ಬಾರಿ ಬಾಲಕಿಯ ಪೋಷಕರು ಅಡ್ಡಗಾಲು ಹಾಕುತ್ತಿದ್ದರು. ಇದೇ ಪ್ರಕರಣ ಸಂಬಂಧಿಸಿ ಬಾಲಕಿಯ ಸಂಬಂಧಿಕರು ಎರಡು ವರ್ಷಗಳ ಹಿಂದೆ ಬಂಧಕ್ಕೊಳಗಾಗಿದ್ದರು.  "ಕಳೆದ ಭಾನುವಾರ ಮತ್ತೆ ಜಮೀನು ವ್ಯಾಜ್ಯ ನಡೆದಾಗ ಸ್ಥಳಕ್ಕೆ ಹೋಗಿ ಭೇಟಿ ನೀಡಿದ್ವಿ, ಬಾಲಕಿ ಮೊಬೈಲ್ ವಿಡಿಯೋ ಮಾಡುತ್ತಿದ್ದದ್ದನ್ನು ನಿಲ್ಲಿಸುವಂತೆ ಹೇಳಿದ್ವಿ ಹೊರತು ಆಕೆಗೆ ಯಾವುದೇ ರೀತಿಯಲ್ಲೂ ಬೈದಿಲ್ಲ. ಪೋಷಕರ ಒತ್ತಾಯದ ಮೇರೆಗೆ ಬಾಲಕಿ ಈ ರೀತಿ ಮಾಡುತ್ತಿದ್ದಾರೆ" ಎಂದು ಮುಂಡಗೋಡದ ಇನ್ಸ್‌ಪೆಕ್ಟರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ

ಇದನ್ನೂ ಓದಿ: ‘ಹೋಟೆಲ್‌ಗೆ ಬಾ’: ನಕಲಿ ಖಾತೆ ತೆರದು ಪತಿಯೊಂದಿಗೇ ಚಾಟ್: ಪತ್ನಿಯ ಖತರ್ನಾಕ್‌ ಐಡಿಯಾಗೆ ದಂಗಾದ ಪೊಲೀಸಪ್ಪ

click me!