35 ಅಲ್ಲ 36 ಪೀಸ್ ಮಾಡ್ಬೋದು, ಶ್ರದ್ಧಾ ಕೊಲೆ ಸಮರ್ಥಿಸಿ ಹೇಳಿಕೆ ನೀಡಿದ ವ್ಯಕ್ತಿ ಅರೆಸ್ಟ್!

Published : Nov 25, 2022, 04:04 PM IST
35 ಅಲ್ಲ 36 ಪೀಸ್ ಮಾಡ್ಬೋದು, ಶ್ರದ್ಧಾ ಕೊಲೆ ಸಮರ್ಥಿಸಿ ಹೇಳಿಕೆ ನೀಡಿದ ವ್ಯಕ್ತಿ ಅರೆಸ್ಟ್!

ಸಾರಾಂಶ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾ ಕೊಲೆ ಸಮರ್ಥಿಸಿ, ಅಫ್ತಾಬ್ ಕ್ರೂರ ಕೃತ್ಯಕ್ಕೆ ಬೆಂಬಲ ನೀಡಿದ ಹೇಳಿಕೆಯೊಂದು ಭಾರಿ ವೈರಲ್ ಆಗಿತ್ತು. ವ್ಯಕ್ತಿಯೊಬ್ಬ ಕ್ಯಾಮೆರಾ ಮುಂದೆ 35 ಅಲ್ಲ 36 ಪೀಸ್ ಬೇಕಾದ್ರೂ ಮಾಡ್ಬೋದು ಎಂದಿದ್ದ. ಆದರೆ ತಾನು ಉತ್ತರ ಪ್ರದೇಶದ ನೆಲದಲ್ಲಿ ನಿಂತು ಈ ಮಾತು ಆಡುತ್ತಿದ್ದೇನೆ ಅನ್ನೋದು ಮರೆತಿದ್ದ. ಇದೀಗ ಈತನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

ಲಖನೌ(ನ.25):  ಉತ್ತರ ಪ್ರದೇಶದಲ್ಲಿ ನಿಂತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೊಲೆಯನ್ನು ಸಮರ್ಥಿಸಿಕೊಳ್ಳುವುದು, ಭಾರತ ವಿರೋಧಿ ಹೇಳಿಕೆ ನೀಡುವುದು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದರೆ ಇದನ್ನು ಮರೆತ ವಿಕಾಸ್ ಕುಮಾರ್ ಅನ್ನೋ ಯುವಕ, ಇತ್ತೀಚೆಗೆ ಮಾಧ್ಯಮದ ಮುಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ಭೀಕರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ. ತಾನು ರಶೀದ್ ಖಾನ್ ಎಂದು ಹೆಸರು ಹೇಳುತ್ತಾ, ದೆಹಲಿಯಲ್ಲಿ ಮಾತನಾಡಿದ್ದ. ಈ ವೇಳೆ ಆಫ್ತಾಬ್ ಕೊಲೆಯನ್ನು ಸಮರ್ಥಿಸಿಕೊಂಡಿದ್ದ. ಇದೇ ವೇಳೆ 35 ಯಾಕೆ? 36 ಪೀಸ್ ಬೇಕಾದರೂ ಮಾಡಬಹುದು ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆ ಭಾರಿ ವೈರಲ್ ಆಗಿತ್ತು. ಭೀಕರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದು ಮಾತ್ರವಲ್ಲ, ದೆಹವನ್ನು ಮತ್ತಷ್ಟು ತುಂಡರಿಸುವ ಹೇಳಿಕೆ ನೀಡಿದ ವಿಕಾಸ್ ಕುಮಾರ್‌ನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಅಫ್ತಾಬ್ ಕೌರ್ಯವನ್ನು ಸಮರ್ಥಿಸಿ ವಿಕಾಸ್ ಕುಮಾರ್ ಹೇಳಿಕೆ ನೀಡಿದ್ದ. ಶ್ರದ್ಧಾಳನ್ನು ಹತ್ಯೆ ಮಾಡಿದ ಅಫ್ತಾಬ್ ನಿರ್ಧಾರ ಸರಿಯಾಗಿದೆ. ಶ್ರದ್ಧಾ ದೇಹವನ್ನು ಇನ್ನಷ್ಟು ತುಂಡು ಮಾಡಬಹುದಿತ್ತು ಎಂದು ಕೌರ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದ. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ನಿವಾಸಿಯಾಗಿರುವ ವಿಕಾಸ್ ಕುಮಾರ್, ತಾನೊಬ್ಬ ಮುಸ್ಲಿಮ್ ಎಂದು ಹೇಳಿ ತಿರುಗಾಡುತ್ತಿದ್ದ. ಮಾಧ್ಯಮದಲ್ಲಿ ಹೇಳಿಕೆ ಸಮರ್ಥಿಸಿಕೊಂಡು ಬೆನ್ನಲ್ಲೇ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಪೊಲೀಸರು ಈತನ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಯುಪಿ ಪೊಲೀಸರು ವಿಕಾಸ್ ಕುಮಾರ್ ಬಂಧಿಸಿ ಜೈಲಿಗಟ್ಟಿದ್ದಾರೆ. ಜೈಲು ಸೇರಿರುವ ವಿಕಾಸ್ ಕುಮಾರ್ ಮೇಲೆ ಈಗಾಗಲೇ ಕಳ್ಳತನ ಸೇರಿದಂತೆ ಇತರ ಕೆಲ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ. 

 

ಶ್ರದ್ಧಾ ಹತ್ಯೆ ಆಕಸ್ಮಿಕವಾಗಿ ನಡೆದ ಘಟನೆ, ಇದು ಸಾಮಾನ್ಯ, ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ!

ಶ್ರದ್ಧಾ ದೇಹ ಕತ್ತರಿಸಲು ಅಫ್ತಾಬ್‌ ಬಳಸಿದ 5 ಚಾಕು ವಶಕ್ಕೆ
ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಕರ್‌ ಕೊಲೆ ಪ್ರಕರಣಲ್ಲಿ ಶ್ರದ್ಧಾರನ್ನು 35 ತುಂಡಾಗಿಸಲು ಪ್ರಿಯಕರ ಅಫ್ತಾಬ್‌ ಪೂನಾವಾಲಾ ಬಳಸಿದ್ದ 5 ಚಾಕುಗಳು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿಲ್ಲಿಯ ಛತರ್‌ಪುರದಲ್ಲಿನ ಅಫ್ತಾಬ್‌ ಫ್ಲಾಟ್‌ನಲ್ಲೇ ತಪಾಸಣೆ ವೇಳೆ ಚಾಕುಗಳು ಲಭಿಸಿವೆ. ವಶಪಡಿಸಿಕೊಂಡಿರುವ ಚಾಕುಗಳು 5-6 ಇಂಚು ಉದ್ದವಿದ್ದು ಇವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆಕೆಯ ದೇಹ ಕತ್ತರಿಸಲು ಬಳಸಿದ ಗರಗಸ ಇನ್ನೂ ಲಭಿಸಿಲ್ಲ. ಇದಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಸುಳ್ಳುಪತ್ತೆ ಪರೀಕ್ಷೆ:
ಈ ನಡುವೆ ಅಫ್ತಾಬ್‌ನ ಎರಡನೇ ಹಂತದ ಸುಳ್ಳು ಪತ್ತೆ ಪರೀಕ್ಷೆ ಇಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಗುರುವಾರ ನಡೆದಿದೆ. ಬುಧವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಫ್ತಾಬ್‌ ಸುಳ್ಳು ಪತ್ತೆ ಪರೀಕ್ಷೆ ನಡೆದಿರಲಿಲ್ಲ.

ಶ್ರದ್ಧಾಳ ಮದುವೆಗೂ ಒಪ್ಪಿದ್ದ ಪಾಲಕರು: ಆದರೆ ಅಫ್ತಾಬ್‌ ಮನೆಯವರಿಂದಲೇ ಅಸಮ್ಮತಿ

ಅಫ್ತಾಬ್‌ ನನ್ನನ್ನು ಕತ್ತರಿಸಿಬಿಡ್ತಾನೆ: 2020ರಲ್ಲೇ ದೂರಿದ್ದಳು ಶ್ರದ್ಧಾ!
‘ಅಫ್ತಾಬ್‌ ಪೂನಾವಾಲಾ ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ. ಆತ ನನ್ನನ್ನು ಕೊಂದು ತುಂಡುತುಂಡಾಗಿ ಕತ್ತರಿಸಿ ಎಸೆಯುವ ಆತಂಕ ಕಾಡುತ್ತಿದೆ’ ಎಂದು ದೆಹಲಿಯಲ್ಲಿ ತನ್ನ ಪ್ರಿಯಕರನಿಂದಲೇ ಹತ್ಯೆಗೀಡಾಗಿ 35 ತುಂಡುಗಳಾಗಿ ಕತ್ತರಿಸಲ್ಪಟ್ಟಯುವತಿ ಶ್ರದ್ಧಾ ಎರಡು ವರ್ಷಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದಳು ಎಂಬ ಸಂಗತಿ ಪತ್ತೆಯಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!