
ಲಕ್ನೋ (ಮೇ.26): ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕನ್ ಸಾರು ಮಾಡಿಕೊಡುವಂತೆ ವ್ಯಕ್ತಿ ಪತ್ನಿಗೆ ಕೇಳಿದ್ದಾನೆ. ಆದರೆ, ಈಗಾಗಲೇ ಮನೆಯಲ್ಲಿ ಅಡಿಗೆ ಸಿದ್ಧವಾಗಿದೆ. ಮತ್ತೆ ಚಿಕನ್ ಸಾರು ಮಾಡೋಕೆ ಸಾಧ್ಯವಿಲ್ಲ ಎಂದು ಆಕೆ ನಿರಾಕರಿಸಿದ್ದಾಳೆ. ಇದರ ಬೆನ್ನಲ್ಲಿಯೇ ಇಬ್ಬರ ನಡುವೆ ಸಣ್ಣ ಗಲಾಟೆಯಾಗಿದೆ. ಆದರೆ, ಮನನೊಂದಿದ್ದ ಗಂಡ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಶವವನ್ನು ಕುಣಿಕೆಯಿಂದ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಜಾನ್ಸಿಯ ಪ್ರೇಮನಗರ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪವನ್ ಎಂದು ಗುರುತಿಸಲಾಗಿದ್ದು, ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಾಲ್ಕು ವರ್ಷಗಳ ಹಿಂದೆ ಪ್ರಿಯಾಂಕಾಳನ್ನು ಈತ ಮದುವೆಯಾಗಿದ್ದ. ದಂಪತಿಗಳಿಗೆ 2 ವರ್ಷ ವಯಸ್ಸಿನ ಹೆಣ್ಣು ಮಗುವಿದೆ. ಪ್ರತಿದಿನ ಡ್ರಿಂಕ್ಸ್ ಮಾಡುವ ಅಭ್ಯಾಸ ಹೊಂದಿದ್ದ ಪವನ್ ಜೊತೆ ಇದೇ ವಿಚಾರವಾಗಿ ಪ್ರಿಯಾಂಕಾ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.
ಗುರುವಾರ, ಪವನ್ ತನಗಾಗಿ ಕೋಳಿ ಸಾರು ಮಾಡುವಂತೆ ಹೆಂಡತಿಗೆ ಹೇಳಿದ್ದ. ಅದಕ್ಕೆ ಪ್ರಿಯಾಂಕಾ ನಿರಾಕರಿಸಿದ್ದಳು. ಈಗಾಗಲೇ ಇಡೀ ಕುಟುಂಬಕ್ಕೆ ರಾತ್ರಿಯ ಅಡುಗೆ ಸಿದ್ಧವಾಗಿದೆ. ಈಗ ಮತ್ತೆ ಚಿಕನ್ ಸಾರು ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ದೈಹಿಕ ಹಿಂಸೆ ಕೂಡ ಆಗಿದೆ. ಇದರಿಂದ ಸಿಟ್ಟಾದ ಪ್ರಿಯಾಂಕ ಪ್ರತ್ಯೇಕ ಕೋಣೆಯಲ್ಲಿ ಮಲಗಲು ಹೋಗಿದ್ದರು. ಕೆಲ ಗಂಟೆಗಳ ನಂತರ ಅಣ್ಣ ಪವನ್ ಹೇಗಿದ್ದಾನೆ ಎಂದು ನೋಡಲು ಆತನ ತಮ್ಮ ಕೋಣೆಗೆ ಬಂದಿದ್ದ. ಈ ವೇಳೆ ಪವನ್ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪವನ್ ಅವರ ಸಹೋದರ ಕಮಲೇಶ್ ತಮ್ಮನ ಕೋಣೆಯ ಬಾಗಿಲನ್ನು ಹಲವಾರು ಬಾರಿ ತಟ್ಟಿದ್ದ. ಆದರೆ, ಯಾರೂ ಬಾಗಿಲು ತೆಗೆಯಲಿಲ್ಲ. ನಂತರ ಮಗಳನ್ನು ಎತ್ತ ಹಿಡಿದು ಕಿಟಕಿಯಿಂದ ಕೋಣೆಯೊಳಗೆ ನೋಡುವಂತೆ ಹೇಳಿದ್ದೆ. ಈ ವೇಳೆ ತಮ್ಮ ನೇಣು ಬಿಗಿದುಕೊಂಡಿದ್ದು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದ ಬಳಿಕ ಪವನ್ ಶವ ಪತ್ತೆಯಾಗಿದೆ. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆಶಿಶ್ ವಿದ್ಯಾರ್ಥಿ ಮದುವೆಯಾಗಿರುವ ರೂಪಾಲಿ ಬರುವಾ ಯಾರಿದು?
ಪವನ್ ಅವರ ತಂದೆ ರಘುವೀರ್ ಕೆಲ ವರ್ಷಗಳ ಹಿಂದೆಯೇ ಸಾವು ಕಂಡಿದ್ದರೆ. ಮೂವರು ಮಂದಿ ಸಹೋದರರಲ್ಲಿ ಪವನ್ ಅತ್ಯಂತ ಕಿರಿಯವನಾಗಿದ್ದಾನೆ. ಇನ್ನೊಬ್ಬ ಸಹೋದರ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬಳು ಸಹೋದರಿಗೆ ಮದುವೆಯಾಗಿದೆ.
ಮಾಜಿ ಮಿಸ್ ಇಂಡಿಯಾ ಆದಿತಿ ಆರ್ಯಾ ಜೊತೆ ಬಿಲಿಯನೇರ್ ಉದಯ್ ಕೋಟಕ್ ಪುತ್ರನ ನಿಶ್ಚಿತಾರ್ಥ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ