ಮೈಸೂರಿನಲ್ಲಿ ನಡೆದಿದ್ದ ಅಂಗನವಾಡಿ ಕಾರ್ಯಕರ್ತೆ ಹತ್ಯೆ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದೆ. ಗಂಡನನ್ನು ಬಿಟ್ಟು ಸೋಷಿಯಲ್ ಮೀಡಿಯಾ ಸ್ನೇಹಿತನನ್ನ ನಂಬಿ ಹೋದವಳು ಮಸಣ ಸೇರಿದ್ದಾಳೆ.
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಮೇ.26): ನೀವು ಸೋಷಿಯಲ್ ಮೀಡಿಯಾ ಬಳಕೆದಾರರೇ, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದೀರಾ..? ನೀವು ಈ ಸ್ಟೋರಿ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ. ಹೀಗೆ ಗಂಡನ್ನ ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವನನ್ನು ನಂಬಿ, ಸ್ನೇಹ ಬೆಳೆಸಿ ಆತನ ಹಿಂದೆ ಹೋದವಳು ಈಗ ಈ ಲೋಕವೇ ಬಿಟ್ಟು ಹೋಗಿದ್ದಾಳೆ.
ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿ ನಡೆದಿದ್ದ ಅಂಗನವಾಡಿ ಕಾರ್ಯಕರ್ತೆ ಹತ್ಯೆ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆರೆತಣ್ಣೂರು ಗ್ರಾಮದ ಮಮತ, ಮದುವೆಯಾಗಿದ್ರೂ ಗಂಡನ ಜೊತೆ ವಾಸ ಮಾಡದೆ ಕೆರೆ ತಣ್ಣೂರಿನಲ್ಲೇ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ಲು, ಯಾವಾಗಲೂ ಮೊಬೈಲ್ ನಲ್ಲೇ ಮುಳುಗಿದ್ದ ಮಮತಾಗೆ ಫೆಸ್ ಬುಕ್ ನಲ್ಲಿ ಈ ಅಸಾಮಿ ಮೋಹನ್ ಕುಮಾರ್ ಪರಿಚಯವಾಗಿದ್ದಾನೆ. ಹಾಸನ ಮೂಲಕ ಈ ಮೋಹನ್ ಗೋವಾದಲ್ಲಿ ಬೇಕರಿ ಇಟ್ಟುಕೊಂಡಿದ್ನಂತೆ, ಮೂರು ವರ್ಷಗಳ ಹಿಂದಷ್ಟೇ ಮಮತ, ಮೋಹನ್ ನಡುವೆ ಸ್ನೇಹ ಬೆಳೆದಿದೆ.
ಇನ್ನೂ, ಅದಾಗ್ಲೆ ಗಂಡನನ್ನ ಬಿಟ್ಟಿದ್ದ ಮಮತಾಗೆ ಒಂಟಿ ಜೀವನ ಬೇಸತ್ತಿತ್ತು ಅನ್ನಿಸುತ್ತೆ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಜೊತೆಯಾದ ಗೆಳೆಯ ಮೋಹನ್ ಜೊತೆ ಅತಿ ಸಲುಗೆ ಬೆಳೆಸಿಕೊಂಡಳು ಜೊತೆಗೆ ಅನೈತಿಕ ಸಂಬಂಧ ಬೆಳೆದಿತ್ತು. ಈ ಕಾರಣಕ್ಕಾಗಿಯೇ ಈ ಮಮತ ಆಗಾಗ ಪ್ರಿಯಕರ ಇದ್ದ ದೂರದ ಗೋವಾಕ್ಕೆ ಹೋಗಿ ಬರ್ತಾ ಇದ್ಲು. ಗೋವಾ ಅದ್ಯಾಕೋ ದೂರ ಅನಿಸಿರಬೇಕು ಅದಕ್ಕಾಗಿಯೇ ಏನೋ ಗೋವಾದಲ್ಲಿದ್ದ ಮೋಹನ ಕುಮಾರನಿಗೆ ಬ್ಯುಸಿನೆಸ್ ನಲ್ಲಿ ಸಾಥ್ ನೀಡಿ ಸಿದ್ದಲಿಂಗಪುರಕ್ಕೆ ಬೇಕರಿ ಶಿಫ್ಟ್ ಮಾಡಿಸಿದ್ಲು. ಹೀಗಾಗಿಯೇ ಗೋವಾದಲ್ಲಿದ್ದ ಮೋಹನ ಕುಮಾರ ಕಳೆದ ಮೂರು ತಿಂಗಳ ಹಿಂದಷ್ಟೇ ಮೈಸೂರು- ಬೆಂಗಳೂರು ಹೈವೇ ಸಮೀಪವೇ ಶ್ರೀ ರಾಘವೇಂದ್ರ ಬೇಕರಿ ಅಂಡ್ ಸ್ವೀಟ್ಸ್ ಹೆಸ್ರಲ್ಲಿ ಬೇಕರಿ ಮಾಡಿದ್ದ. ಈ ಬೇಕರಿ ಮಾಡೋಕೆ ಮಮತ ಕೂಡ ಸುಮಾರು 5 ರಿಂದ 6 ಲಕ್ಷ ರೂಪಾಯಿ ನೀಡಿದ್ಲು ಎನ್ನಲಾಗಿದೆ.
Bengaluru: ಎಣ್ಣೆ ಪಾರ್ಟಿಯಲ್ಲಿ ಗುರಾಯಿಸಿದ್ದಕ್ಕೆ ಕಲ್ಲು ಎತ್ತಿ ಹಾಕಿ ಗೆಳೆಯರಿಂದಲೇ ಚಾಲಕನ ಕೊಲೆ
ಸಿದ್ದಲಿಂಪುರದಲ್ಲಿದ್ದ ಬೇಕರಿಗೆ ಬರ್ತಿದ್ದ ಮಮತಳನ್ನ ಸ್ಥಳೀಯರಿಗೆ ಈಕೆ ನನ್ನ ಅಕ್ಕ ಅಂತಾ ಪರಿಚಯ ಮಾಡಿಕೊಟ್ಟಿದ್ದ. ಆಕೆ ಕೂಡ ಪ್ರಿಯತಮನನ್ನ ತಮ್ಮ ತಮ್ಮ ಅಂತಾ ಜನರೆದುರಿಗೆ ಕರಿತಾ ಇದ್ಲು. ಎಂದಿನಂತೆ ಮೇ.24 ಕ್ಕೆ ಬಂದಿದ್ದ ಮಮತ ಜೊತೆ ಬೇಕರಿಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಜೋರಾಗಿ ಗಲಾಟೆಯಾಗಿದೆ. ಮಳೆ ಇದ್ದ ಕಾರಣ ಗಿರಾಕಿಗಳು ಕೂಡ ಯಾರೂ ಇರಲಿಲ್ಲ. ಹೀಗಾಗಿ ಗಲಾಟೆ ವಿಕೋಪಕ್ಕೆ ತಿರುಗಿದ್ದು ಕುಪಿತಗೊಂಡಿದ್ದ ಮೋಹನ್ ಕುಮಾರ್ ಬೇಕರಿಯಲ್ಲೇ ಇದ್ದ ರಾಡ್ ನಿಂದ ಮಮತ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ತಲೆಗೆ ಬಲವಾಗಿ ಏಟು ಬಿದ್ದ ಕಾರಣ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
BENGALURU: ಬಾಡಿಗೆ ಮನೆ ಮಾಲೀಕರೇ ಹುಷಾರ್, ತಲೆ ಒಡೆಯುವ ಗ್ಯಾಂಗ್ ಬಂದಿದೆ ಎಚ್ಚರ!
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೇಟಗಳ್ಳಿ ಪೊಲೀಸರು ದೂರು ದಾಖಲು ಮಾಡಿಕೊಂಡು, ಆರೋಪಿ ಪತ್ತೆಗೆ ಜಾಲ ಬೀಸಿದ್ರು, ಪ್ರಕರಣ ನಡೆದ 24 ಗಂಟೆ ಒಳಗೆ ಆರೋಪಿ ಮೋಹನ್ ಕುಮಾರ್ ನನ್ನ ಬಂಧಿಸಿದ್ದಾರೆ. ವಿಚಾರಣೆಗೆ ಆರೋಪಿಯನ್ನ ಒಳಪಡಿಸಿರೋ ಪೊಲೀಸ್ರು ಘಟನೆಗೆ ನಿಖರ ಕಾರಣ ಹುಡುಕಲು ಹೊರಟಿದ್ದಾರೆ. ಅದೇನೇ ಇರ್ಲಿ ಗುರುತು ಪರಿಚಯ ಇಲ್ದೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವ್ನ ನಂಬಿ ಹೋದ ಮಮತ ಮಸಣ ಸೇರಿಬಿಟ್ಟಿದ್ದಾಳೆ. ಇನ್ನಾದ್ರೂ ಸೋಷಿಯಲ್ ಮೀಡಿಯಾ ಬಳಸೋ ಹೆಣ್ಮಕ್ಕಳು ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.