
ಪ್ರಯಾಗರಾಜ್(ಏ.18): ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಹತ್ಯೆ ಬಳಿಕ ಉತ್ತರ ಪ್ರದೇಶದಲ್ಲಿ ಬೂದಿಮುಚ್ಚಿದ ಕೆಂಡದ ವಾತಾವರಣವಿದೆ. ಒಂದೆಡೆ ಸರ್ಕಾರ ಎನ್‌ಕೌಂಟರ್ ಮೂಲಕ ಮಾಫಿಯಾ ಗ್ಯಾಂಗ್ ಮುಗಿಸುತ್ತಿದ್ದರೆ, ಇತ್ತ ಸೇಡಿನ ಸಮರಕ್ಕೆ ಒಂದೊಂದೆ ಹೆಣಗಳು ಉರುಳುತ್ತಿದೆ. ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರನ ಅಶ್ರಫ್ ಅಹಮ್ಮದ್ ಹತ್ಯೆ ಬಳಿಕ ಇದೀಗ ಅತೀಕ್ ಪರ ವಾದ ಮಂಡಿಸುತ್ತಿದ್ದ ವಕೀಲ ದಯಾಶಂಕರ್ ಮಿಶ್ರಾ ಮನೆ ಮೇಲೆ ಬಾಂಬ್ ಎಸೆಯಲಾಗಿದೆ. ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳ ಸೇಡಿನ ಸಮರ ಶುರುವಾಗಿರುವ ಮುನ್ಸೂಚನೆ ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಸಿಸಿಟಿವಿ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸುತ್ತಿದ್ದಾರೆ.
ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮಮದ್‌ನನ್ನು ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಮಾಫಿಯಾ ಮೂಲಕ ನಡುಗಿಸಿದ್ದ ಅತೀಕ್ ಮಾಧ್ಯಮಗಳ ಕ್ಯಾಮಾರ ಮುಂದೆ ಹತ್ಯೆಯಾಗಿದ್ದು. ಸುತ್ತ ಪೊಲೀಸರ ಇದ್ದರೂ ರಕ್ಷಣೆ ಸಾಧ್ಯವಾಗಲಿಲ್ಲ.ಈ ಘಟನೆ ಬಳಿಕ ಅತೀಕ್ ಗ್ಯಾಂಗ್ ಹತ್ಯೆಗೆ ಗ್ಯಾಂಗ್ ಒಂದು ಸಜ್ಜಾಗಿದೆ ಅನ್ನೋದು ಬಹಿರಂಗವಾಗಿತ್ತು. ಅತೀಕ್ ಸಹಚರರು, ಕುಟುಂಬಸ್ಥರು, ಆಪ್ತರನ್ನು ಟಾರ್ಗೆಟ್ ಮಾಡಿರುವ ಈ ಗ್ಯಾಂಗ್ ಇದೀಗ ಅತೀಕ್ ಅಹಮ್ಮದ್ ವಕೀಲನನ್ನೂ ಟಾರ್ಗೆಟ್ ಮಾಡಿದೆ. ಆದರೆ ವಕೀಲನ ಮನೆ ಮೇಲೆ ಬಾಂಬ್ ಎಸೆದ ಪ್ರಕರಣಕ್ಕೂ ಅತೀಕ್ ಅಹಮ್ಮದ್ ಹತ್ಯೆಗೂ ಸಂಬಂಧವಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಮಾಫಿಯಾ , ಕ್ರಿಮಿನಲ್ಸ್ ಕೆಮ್ಮಿದ್ರೆ...ಸರಣಿ ಎನ್‌ಕೌಂಟರ್ ಬಳಿಕ ಯೋಗಿ ಮತ್ತೊಂದು ವಾರ್ನಿಂಗ್!
ಇಬ್ಬರು ವ್ಯಕ್ತಿಗಳು ನಡುವಿನ ಮೈಮನಸ್ಸಿನಿಂದ ಜಟಾಪಟಿ ಶುರುವಾಗಿದೆ. ಈ ವೇಳೆ ಎಸೆದ ಬಾಂಬ್ ಅತೀಕ್ ಅಹಮ್ಮದ್ ಮನೆ ಮೇಲೆ ಬಿದ್ದಿದೆ.ಈ ಬಾಂಬ್ ಎಸೆತದಲ್ಲಿ ಯಾವುದೇ ಹಾನಿಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವ್ಯಕ್ತಿಗಳಿಗೆ ಬಾಂಬ್ ಸಿಕ್ಕಿದ್ದು ಹೇಗೆ? ಇವರ ಹಿಂದಿನ ಕ್ರಿಮಿನಲ್ ರೆಕಾರ್ಡ್, ಬಾಂಬ್ ಪಡೆದ ಮಾರ್ಗ ಸೇರಿದಂತೆ ಹಲವು ವಿಚಾರಗಳ ಕುರಿತು ತನಿಖೆಯಾಗಲಿದೆ ಎಂದು ಪ್ರಯಾಗರಾಜ್ ಪೊಲೀಸ್ ಹೇಳಿದ್ದಾರೆ.
ಅತೀಕ್ ಹಾಗೂ ಆತನ ಸೋದರ ಅಶ್ರಫ್ ಹತ್ಯೆಯ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚನೆ ಮಾಡಿದೆ. ಈ ತಂಡವನ್ನುಕ್ರಿಮಿನಲ್ ವಿಭಾಗದ ಹೆಚ್ಚುವರಿ ಉಪ ಪೊಲೀಸ್ ಅಧೀಕ್ಷಕರು ಸತೀಶ್ ಚಂದ್ರ ಮುನ್ನಡೆಸಲಿದ್ದು, ಇದರಲ್ಲಿ ಎಸಿಪಿ ಸತ್ಯೇಂದ್ರ ಪ್ರಸಾದ್ ತಿವಾರಿ, ಅಪರಾಧ ವಿಭಾಗದ ತನಿಖಾ ಸೆಲ್‌ನ ಅಧಿಕಾರಿ ಓಂಪ್ರಕಾಶ್ ಇರಲಿದ್ದಾರೆ. ಇದನ್ನು ಮೇಲ್ವಿಚಾರಣೆ ಮಾಡಲು ಮತ್ತೊಂದು ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಈ ನಡುವೆ ಅತೀಕ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಪ್ರಯಾಗ್‌ರಾಜ್ ನಿಂದ ಪ್ರತಾಪ್‌ಗಢದ ಜೈಲಿಗೆ ವರ್ಗಾವಣೆ ಮಾಡಲಾಗಿದೆ.
ಅತೀಕ್ ಹತ್ಯೆ ತನಿಖೆ ಕೋರಿ ಸುಪ್ರೀಂಗೆ ಅರ್ಜಿ: ರೌಡಿಯನ್ನು ಅತೀಕ್‌ಜೀ ಎಂದು ಕರೆದ ಬಿಹಾರ ಡಿಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ