ಈ ಹೃದಯ ವಿದ್ರಾವಕ ಘಟನೆಯಿಂದ ನವಜಾತ ಶಿಶು ಮೃತಪಟ್ಟಿದ್ದು ಜನರಲ್ ಆಸ್ಪತ್ರೆಯ ಕ್ಯಾಶುವಾಲಿಟಿ ವಾರ್ಡ್ ಬಳಿಯ ರೋಗಿಯ ಸ್ನಾನಗೃಹದಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಪುಣೆಯ ಸಿನ್ಹಗಢ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, 19 ವರ್ಷದ ಯುವತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪುಣೆ (ಏಪ್ರಿಲ್ 18, 2023): ಮಹಾರಾಷ್ಟ್ರದ ಪುಣೆಯಲ್ಲಿ 19 ವರ್ಷದ ಯುವತಿ ಶೌಚಾಲಯದಲ್ಲಿ ನವಜಾತ ಶಿಶುವಿಗೆ ಜನ್ಮ ನೀಡಿದ್ದು, ನಂತರ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದ ಆಘಾತಕಾರಿ ಘಟನೆ ನಡೆದಿದೆ. ನಗರದ ನವಲೆ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ 10:30ಕ್ಕೆ ಅವಿವಾಹಿತ ಯುವತಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ನವಜಾತ ಶಿಶುವನ್ನು ಸ್ನಾನದ ಕೊಠಡಿಯ ಕಿಟಕಿಯಿಂದ ಎಸೆದಿದ್ದಾಳೆ.
ಇನ್ನು, ಈ ಹೃದಯ ವಿದ್ರಾವಕ ಘಟನೆಯಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ವರದಿಯಾಗಿದೆ. ಶ್ರೀಮತಿ ಕಾಶಿಬಾಯಿ ನವಲೆ ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆಯ ಕ್ಯಾಶುವಾಲಿಟಿ ವಾರ್ಡ್ ಬಳಿಯ ರೋಗಿಯ ಸ್ನಾನಗೃಹದಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಪುಣೆಯ ಸಿನ್ಹಗಢ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, 19 ವರ್ಷದ ಯುವತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿದೆ ಲವ್ ಕಹಾನಿ..!
ನಾರ್ಹೆಯ ಮಾನಾಜಿ ನಗರದ ಹಾಸ್ಟೆಲ್‌ನಲ್ಲಿ ಇರುವ ಯುವತಿ ದೈಹಿಕ ಸಂಬಂಧ ಹೊಂದಿದ್ದ ನಂತರ ಗರ್ಭಿಣಿಯಾಗಿದ್ದಳು. ಈ ಸಂಗತಿಯನ್ನು ಎಲ್ಲರಿಂದ ಮುಚ್ಚಿಟ್ಟ ಆಕೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ನವಲೆ ಆಸ್ಪತ್ರೆಗೆ ಬಂದು ಬೆನ್ನುನೋವು ಕಾಣಿಸಿಕೊಂಡಿದ್ದು, ದೌರ್ಬಲ್ಯ ಕಾಡುತ್ತಿದೆ ಎಂದು 8 ತಿಂಗಳ ಗರ್ಭಿಣಿಯಾಗಿದ್ದ ವೇಳೆ ಆಸ್ಪತ್ರೆಗೆ ಹೋಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ, ಆಕೆ ರೋಗಿಯ ಶೌಚಾಲಯಕ್ಕೆ ಹೋದಳು, ಅಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಮತ್ತು ಶೌಚಾಲಯದ ಕಿಟಕಿಯಿಂದ ಮಗುವನ್ನು ಎಸೆದಿದ್ದು, ಅದರ ಪರಿಣಾಮವಾಗಿ ನವಜಾತ ಶಿಶುವಿನ ಸಾವಿಗೆ ಕಾರಣವಾಯಿತು ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ
ಸುದ್ದಿ ತಿಳಿಯುತ್ತಿದ್ದಂತೆ ಸಿನ್ಹಗಢ ರಸ್ತೆ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ಆದರೆ, ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಹಿನ್ನೆಲೆ ತಕ್ಷಣ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಪೊಲೀಸರು 19 ವರ್ಷದ ಅವಿವಾಹಿತ ಯುವತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 315 (ಮಗು ಜನಿಸುವುದನ್ನು ತಡೆಯುವ ಉದ್ದೇಶ ಅಥವಾ ಹುಟ್ಟಿದ ನಂತರ ಸಾಯುವಂತೆ ಮಾಡುವ ಉದ್ದೇಶದಿಂದ ಮಾಡಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಟ್ವೀಟ್‌ಗೆ ಸ್ಪಂದಿಸಿ ವೈದ್ಯರ ಕಳಿಸಿದ ರೈಲ್ವೆ ಇಲಾಖೆ