ವಯಸ್ಸು 23, ಆದರೆ 14ರ ಬಾಲೆಯಂತೆ ಪೋಸ್. ಈ ಮೂಲಕ 12ರಿಂದ 14 ವರ್ಷದ ಅಪ್ರಾಪ್ತ ಬಾಲಕರನ್ನು ಸೆಕ್ಸ್‌ಗೆ ಬಳಸಿಕೊಳ್ಳವುದೇ ಈಕೆಯ ಖಯಾಲಿ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಹಾಕುವ ಮೂಲಕ ಬಾಲಕರನ್ನು ಸೆಕ್ಸ್‌ಗೆ ಸೆಳೆಯುತ್ತಿದ್ದಳು. ಇದೀಗ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಫ್ಲೋರಿಡಾ(ಏ.07) ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿ ತಾನು 14ರ ಹರೆಯದ ಸ್ಕೂಲ್ ಗರ್ಲ್ ಎಂದು ಪೋಸ್ ನೀಡಿದ್ದಾಳೆ. ಶಾಲಾ ಯೂನಿಫಾರ್ಮ್‌ನಲ್ಲಿ ಶಾಲಾ ಆವರಣದಲ್ಲಿ ಹಲವು ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡಿದ್ದಾಳೆ. 23ರ ಹರೆಯದ ಈಕೆಗೆ 12 ರಿಂದ 14 ವರ್ಷದ ಅಪ್ರಾಪ್ತ ಬಾಲಕರೇ ಟಾರ್ಗೆಟ್, ತನ್ನ ಸೆಕ್ಸ್ ಚಟಕ್ಕೆ ಅಪ್ರಾಪ್ತ ಬಾಲಕರನ್ನು ಬಳಸಿಕೊಳ್ಳುತ್ತಿದ್ದ ಅಮೆರಿಕಾದ ಆ್ಯಲಿಸಾ ಆ್ಯನ್ ಜಿಂಗರ್ ಇದೀಗ ಪೊಲೀಸರು ಬಲೆಗೆ ಬಿದ್ದಿದ್ದಾಳೆ.
ತಂಪಾ ನಿವಾಸಿಯಾಗಿರುವ ಈಕೆಗೆ ಅಪ್ರಾಪ್ತರ ಜೊತೆ ಸೆಕ್ಸ್ ಸುಖ ಕಂಡುಕೊಳ್ಳುವುದು ಮಾತ್ರವಲ್ಲ, ಈ ವಿಡಿಯೋಗಳನ್ನು ಚಿತ್ರೀಕರಿಸಿ ಹಣ ಮಾಡುತ್ತಿದ್ದಳು. ಸ್ನಾಪ್‌ಚಾಟ್ ಮೂಲಕ ಅಪ್ರಾಪ್ತ ಬಾಲಕರು, ಶಾಲಾ ವಿದ್ಯಾರ್ಥಿಗಳನ್ನು ಈಕೆ ಟಾರ್ಗೆಟ್ ಮಾಡುತ್ತಿದ್ದಳು. ತಾನು ಶಾಲೆಯ ಟಾಪರ್ ಎಂದು ಗುರುತಿಸಿಕೊಳ್ಳುತ್ತಿದ್ದ ಆಕೆ, ಇತರ ವಿದ್ಯಾರ್ಥಿಗಳಿಗೆ ಪಠ್ಯದ ಕುರಿತು ವಿಸ್ತಾರವಾಗಿ ಹೇಳಿಕೊಡುವುವುದಾಗಿಯೂ ಹೇಳಿಕೊಂಡಿದ್ದಾಳೆ.
ನಟ ಧನುಶ್ ಸಿನಿಮಾ ಕಾರ್ಯಕ್ರಮದಲ್ಲಿ ನಿರೂಪಕಿಗೆ ಕಿರುಕುಳ, ಕಾಮುಕನಿಗೆ ಬಿತ್ತು ಗೂಸಾ!
ಸ್ನಾಪ್‌ಚಾಟ್ ಮೂಲಕವೇ ಅಪ್ರಾಪ್ತರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈಕೆ, ಬಳಿಕ ಅವರನ್ನು ಸಂಪರ್ಕಿಸಿ ಪಠ್ಯ ಸೇರಿದಂತೆ ಇತರ ಕಾರಣಗಳನ್ನು ನೀಡಿ ಭೇಟಿಯಾಗುತ್ತಿದ್ದಳು. ಹಂತ ಹಂತವಾಗಿ ಸೆಕ್ಸ್ ಬಲೆಗೆ ಸಿಲುಕಿಸಿ ತನ್ನ ನವರಂಗಿ ಆಟ ತೋರಿಸುತ್ತಿದ್ದಳು. ಈಗಾಗಲೇ ಹಲವು ಅಪ್ರಾಪ್ತ ಬಾಲಕರನ್ನು ಈಕೆ ಸೆಕ್ಸ್‌ಗೆ ಬಳಸಿಕೊಂಡಿದ್ದಾಳೆ.
NEW: 23-year-old Alyssa Ann Zinger hit with s*x charges for posing as a teenager to have s*x with 12-15 year old boys.
Zinger was arrested last November for allegedly engaging in at least 30 s*xual acts with a middle school student.
The woman would pretend to be a homeschooled,… pic.twitter.com/KsNtnFmtrs
ಬಾಲಕರ ಜೊತೆಗಿನ ಲೈಂಗಿಕತೆಯನ್ನು ಚಿತ್ರೀಕರಿಸಿಕೊಂಡು ಪೋರ್ನ್ ಸೈಟ್‌ಗಳಿಗೆ ಮಾರಾಟ ಮಾಡಿದ್ದಾಳೆ. ಈ ಕುರಿತು ಸಂತ್ರಸ್ತ ಬಾಲಕನ ಪೋಷಕರು ದಾಖಲಿಸಿದ ದೂರಿನ ಅನ್ವಯ ಫ್ಲೋರಿಡಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈಕೆಯನ್ನು ಸಂಪರ್ಕಿಸಿದ ಪೊಲೀಸರು ತಂತ್ರ ಉಪಯೋಗಿಸಿ ಬಂಧಿಸಿದ್ದಾರೆ. ಲೈಂಗಿಕ ಕಿರುಕುಳ, ಸೈಬರ್ ಸೆಕ್ಸ್ ಕಿರುಕುಳ, ಅಪ್ರಾಪ್ತರ ಕಾಮತೃಷೆಗೆ ಬಳಕೆ ಸೇರಿದಂತೆ ಹಲವು ಪ್ರಕರಣಗಳು ಈಕೆ ವಿರುದ್ಧ ದಾಖಲಾಗಿದೆ.
ಕಚೇರಿಯಲ್ಲಿ ಸಿಕ್ ಲೀವ್, ಕ್ಲಬ್‌ನಲ್ಲಿ ಪಾರ್ಟಿ..ಎಣ್ಣೆ ಏಟಿನಲ್ಲಿ ಯುವತಿಗೆ ಕಿರುಕುಳ ನೀಡಿದ ಗೋವಾ ಡಿಐಜಿ!
ಈಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಮತ್ತೊಂದು ಅಚ್ಚರಿ ಕಾದಿತ್ತು. ನವೆಂಬರ್ ತಿಂಗಳಲ್ಲಿ ಈಕೆಯನ್ನು ಪೊಲೀಸರು ಬಂಧಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಬಾಲಕರ ಜೊತೆಗಿನ ಸಂಬಂಧ ಸೇರಿದಂತೆ ಸೆಕ್ಸ್ ಕುರಿತು ಹಲವು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಈಕೆ 7,500 ಅಮೆರಿಕನ್ ಡಾಲರ್ ಮೊತ್ತವನ್ನು ದಂಡದ ರೂಪದಲ್ಲಿ ಕಟ್ಟಿ ಬಿಡುಗಡೆಯಾಗಿದ್ದಳು.