ಪತ್ನಿಯ ಮೂಗು ಕಚ್ಚಿದ ಪತಿ ಮತ್ತೊಂದೆಡೆ ಪತ್ನಿ ಪ್ರಿಯಕರನ ಜೊತೆ ಓಡಿದ ನಂತರ ನಿಟ್ಟುಸಿರುಬಿಟ್ಟ ಗಂಡ

Published : Jun 19, 2025, 11:36 AM IST
Nose Ring

ಸಾರಾಂಶ

ಪ್ರೇಮಿಯ ಜೊತೆ ಸಿಕ್ಕಿಬಿದ್ದ ಪತ್ನಿಯ ಮೂಗನ್ನು ಪತಿ ಕಚ್ಚಿ ತುಂಡರಿಸಿದ ಘಟನೆ ಹರ್ದೋಯ್‌ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ 

ಹರ್ದೋಯ್: ತನ್ನ ಪ್ರೇಮಿಯ ಜೊತೆ ಸಿಕ್ಕಿಬಿದ್ದ ಪತ್ನಿಯ ಮೂಗನ್ನು ಪತಿ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರ್ದೋಯ್ ಜಿಲ್ಲೆಯ ಹರಿಯಾವನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಪತ್ನಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆ ಪತಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಈ ವೇಳೆ ಆಕೆ ತನ್ನ ಪ್ರೇಮಿಯ ಮನೆಗೆ ಹೋಗಿದ್ದು, ಇಬ್ಬರೂ ಅಲ್ಲಿ ಪತಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಗಂಡ ಆಕೆಯ ಪ್ರೇಮಿಯ ಎದುರೇ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯ ಮೂಗನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಘಟನೆಯಲ್ಲಿ ಆಕೆಗೆ ಗಂಭೀರವಾಗಿ ಗಾಯವಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಮಹಿಳೆಯನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಗಿನ ಗಾಯ ಗಂಭೀರವಾಗಿರುವುದನ್ನು ಗಮನಿಸಿ ಆಕೆಗೆ ವಿಶೇಷ ಚಿಕಿತ್ಸೆಗಾಗಿ ಲಕ್ನೋದ ಆಸ್ಪತ್ರೆಗೆ ಕಳುಹಿಸಲಾಗಿದೆ. ಹೀಗೆ ಪತ್ನಿಯ ಮೂಗು ಕತ್ತರಿಸಿ ವ್ಯಕ್ತಿಯನ್ನು ರಾಮ್ ಖಿಲಾವನ್ ಎಂದು ಗುರುತಿಸಲಾಗಿದೆ. ಆತ ತನ್ನ ಪತ್ನಿಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆ ಆಕೆಯ ಪ್ರೇಮಿಯ ಜೊತೆ ಇರುವುದನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದ. ಈ ವೇಳೆ ಅಲ್ಲಿ ಗಂಡ ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಸಮಯದಲ್ಲಿ ಆತನ ಆಕೆಯ ಪ್ರೇಮಿ ಜೊತೆಯಲ್ಲಿರುವಾಗಲೇ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯ ಮೂಗನ್ನು ಕತ್ತರಿಸಿದ್ದಾನೆ. ಪರಿಣಾಮ ಆಕೆಗೆ ತೀವ್ರ ರಕ್ತಸ್ರಾವ ಆಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಖಿಲಾವನ್‌ನನ್ನು ವಶಕ್ಕೆ ಪಡೆದು ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ವಿಷಯ ತನಿಖೆಯಲ್ಲಿದೆ ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಕುಮಾರ್ ಹೇಳಿದ್ದಾರೆ.

ಪತ್ನಿ ಓಡಿಹೋದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟ ಉತ್ತರ ಪ್ರದೇಶದ ವ್ಯಕ್ತಿ

ಹಾಗೆಯೇ ಉತ್ತರ ಪ್ರದೇಶದಲ್ಲಿ ನಡೆದ ಮತ್ತೊಂದು ವಿಚಿತ್ರ ಘಟನೆಯಲ್ಲಿ, ತನ್ನ ನವವಿವಾಹಿತ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋದ ನಂತರ ವ್ಯಕ್ತಿಯೊಬ್ಬ ಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸದ್ಯ ತನಗೆ ಮೇಘಾಲಯದಲ್ಲಿ ತಮ್ಮ ಹನಿಮೂನ್‌ ಸಮಯದಲ್ಲಿ ತನ್ನ ಹೆಂಡತಿಯಿಂದಲೇ ಕೊಲೆಯಾದ ಇಂದೋರ್ ವ್ಯಕ್ತಿ ರಾಜಾ ರಘುವಂಶಿಯಂತಹ ಗತಿ ತನಗೆ ಎದುರಾಗಲಿಲ್ಲ ಎಂದು ಆತ ಕೃತಜ್ಞತೆ ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.

23 ವರ್ಷದ ಸುನಿಲ್ ಎಂಬಾತ ಮೇ 17 ರಂದು 20 ವರ್ಷದ ಮಹಿಳೆಯನ್ನು ಮದುವೆಯಾಗಿದ್ದ ಮದುವೆಯ ನಂತರ ತನ್ನ ಅತ್ತೆಯ ಮನೆಯಲ್ಲಿ ಕೇವಲ ಒಂಬತ್ತು ದಿನಗಳನ್ನು ಕಳೆದ ಮಹಿಳೆ ನಂತರ ತನ್ನ ಪೋಷಕರ ಮನೆಗೆ ತೆರಳಿ ನಾಪತ್ತೆಯಾಗಿದ್ದಳು. ಸುನಿಲ್ ನಾಪತ್ತೆ ದೂರು ದಾಖಲಿಸಿದ ಹತ್ತು ದಿನಗಳ ನಂತರ, ಅವಳು ಪೊಲೀಸ್ ಠಾಣೆಗೆ ಬಂದು ತಾನು ತನ್ನ ಪ್ರಿಯಕರನೊಂದಿಗೆ ವಾಸಿಸಲು ಬಯಸುವುದಾಗಿ ಹೇಳಿದ್ದಾಳೆ ಎಂದು ವರದಿಯಾಗಿದೆ.

ಆದರೆ ಪತಿ ಪತ್ನಿ ಪ್ರೇಮಿಯ ಜೊತೆ ಹೋದಳೆಂದು ದುಃಖಿಸುವ ಬದಲು, ಇತ್ತೀಚೆಗೆ ಮೇಘಾಲಯದಲ್ಲಿ ಹನಿಮೂನ್ ವೇಳೆಯೇ ಪತ್ನಿಯಿಂದ ಕೊಲೆಯಾದ ರಾಜ ರಘುವಂಶಿ ಸ್ಥಿತಿ ತನಗೆ ಬಂದಿಲ್ಲವಲ್ಲ ಎಂದು ಸಮಾಧಾನ ಪಟ್ಟಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಭಾರತದ 'ಭೀಮ' ಪಾತ್ರದ ನಟ ಸೌರವ್ ಗುರ್ಜರ್ ಬಂಧನ.. ಅಷ್ಟಕ್ಕೂ ಆಗಿದ್ದೇನು?
ಕೃಷಿ ಮಾಡುತ್ತಿದ್ದ 39 ವರ್ಷದ ಯುವಕನಿಗೆ ಸಿಗದ ಕನ್ಯೆ?: ಮನನೊಂದು ವಿಷ ಸೇವಿಸಿ ಆತ್ಮ*ತ್ಯೆ!