* ಪ್ರೀತಿಸಿ ಮದುವೆಯಾಗಿದ್ದ ಜೋಡಿ
* ಗಂಡ ಮದ್ಯಪಾನ ಮಾಡುತ್ತಾನೆ ಎಂಬ ಕಾರಣಕ್ಕೆ ತೊರೆದಳು
* ಗಂಡನ ಬಿಟ್ಟು ಆತನ ತಂದೆಯೊಂದಿಗೆ ಮರು ಮದುವೆ
ಲಕ್ನೋ(ಜು. 04) ಇದೊಂದು ವಿಚಿತ್ರ ಪ್ರಕರಣ. ಮದುವೆಯಾದವ ಬಿಟ್ಟು ಹೋದವಳು ಗಂಡನ ತಂದೆಯನ್ನೇ ಮದುವೆಯಾಗಿದ್ದಾಳೆ. ಮಾಹಿತಿ ಹಕ್ಕು ಆಧಾರದಲ್ಲಿ ಸಿಕ್ಕ ಮಾಹಿತಿ ಹೆಂಡತಿ ಕಳೆದುಕೊಂಡ ಯುವಕನಿಗೆ ದೊಡ್ಡ ಆಘಾತ ನೀಡಿದೆ.
2016 ರಲ್ಲಿ ಯುವಕ ಗೆಳತಿಯನ್ನು ಮದುವೆಯಾಗಿದ್ದ. ಆದರೆ ಆ ವೇಳೆ ಇಬ್ಬರು ಅಪ್ರಾಪ್ತರಾಗಿದ್ದರು. ಆರು ತಿಂಗಳ ಕಾಲ ಸಂಸಾರ ನಡೆಸಿದ್ದರು. ಗಂಡ ಮದ್ಯಪಾನ ಮಾಡುತ್ತಾನೆ ಎನ್ನುವ ಕಾರಣಕ್ಕೆ ಹೆಂಡತಿ ಯುವಕನನ್ನು ತೊರೆದಿದ್ದಳು. ಎಷ್ಟೆ ಕೇಳಿಕೊಂಡರೂ ಪತ್ನಿ ಮನೆ ಬಿಒಟ್ಟು ಹೊರಟು ಹೋಗಿದ್ದಳು .
ಪ್ರೀತಿಸಿ ಮದುವೆಯಾದವಳನ್ನೇ ಕೊಂದ ಪಾಪಿ ಗಂಡ
ಹೆಂಡತಿ ವಿಚಾರವನ್ನು ಬಿಟ್ಟು 48 ವರ್ಷದ ಅಪ್ಪನೊಂದಿಗೆ ಜೀವನ ನಡೆಸುತ್ತಿದ್ದ. ಈತನ ಖರ್ಚು ವೆಚ್ಚವನ್ನು ಅಪ್ಪನೇ ನೋಡಿಕೊಳ್ಳುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಅಪ್ಪ ಮನೆ ಬಿಟ್ಟು ಹೋಗಿದ್ದಾನೆ. ಬೇಸರಗೊಂಡ ಮಗ ಅಪ್ಪನ ಹುಡುಕಾಟಕ್ಕೆ ಯತ್ನ ನಡೆಸಿ ಆರ್ ಟಿಐ ಅರ್ಜಿ ಸಲ್ಲಿಸಿದ್ದಾನೆ.
ಸಿಕ್ಕ ಮಾಹಿತಿ ಯುವಕನ ಬೆಚ್ಚಿ ಬೀಳಿಸಿದೆ. ಅಪ್ಪ ಎರಡನೇ ಮದುವೆಯಾಗಿದ್ದು ಗೊತ್ತಾಗಿದ್ದು ಈ ಹಿಂದೆ ತನ್ನ ಜತೆ ಸಂಸಾರ ನಡೆಸಿದ್ದ ಯುವತಿಯೇ ಅಪ್ಪನ ಮದುವೆಯಾಗಿರುವುದು ಗೊತ್ತಾಗಿದೆ. ಇದಾದ ಮೇಲೆ ಪೊಲೀಸರು ಮೂವರನ್ನು ಕರೆಸಿ ಮಾತನಾಡಿದ್ದಾರೆ. ಆದರೆ ಮಹಿಳೆ ತಾನು ಈಗ ಸಂತಸದಿಂದ ಇದ್ದೇನೆ. ಮೊದಲನೆ ಮದುವೆಯಾದಾಗ ತಾನು ಅಪ್ರಾಪ್ತೆಯಾಗಿದ್ದು ಅದು ಅಸಿಂಧು ಆಗಿದೆ. ಈಗ ಮದುವೆಯಾಗಿರುವನೊಂದಿಗೆ ಸಂಸಾರ ನಡೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾಳೆ.