ನಾಪತ್ತೆಯಾಗಿರುವ ಕೈದಿಯನ್ನು ಅನಿಲ್ ಎಂದು ಪೊಲೀಸರು ಗುರುತಿಸಿದ್ದು, ಈತ ಮೂಲತಃ ಹರಿಯಾಣದ ಪಲ್ವಾಲ್ ಜಿಲ್ಲೆಯ ಹೊಡಾಲ್ ನಿವಾಸಿ. ಈತನ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕನಿಷ್ಠ 8 ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂಡೀಗಢ (ಜನವರಿ 18, 2024): ಜೈಲಿನಲ್ಲಿರುವ ತನ್ನ ಪತಿಯನ್ನು ಹರಿಯಾಣ ಮಹಿಳೆಯೊಬ್ಬರು ಮೂವರು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಉತ್ತರ ಪ್ರದೇಶದ ಮಥುರಾದ ಪೊಲೀಸರು, ವಿಚಾರಣಾಧೀನ ಕೈದಿಯನ್ನು ಹರ್ಯಾಣಕ್ಕೆ ನ್ಯಾಯಾಲಯದ ವಿಚಾರಣೆಗೆ ಕರೆತಂದಿದ್ದು, ಈ ವೇಳೆ ಮಹಿಳೆ ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ಈ ಸಂಬಂಧ ಮೂವರು ಪೊಲೀಸರು ಈಗ ನಿರ್ಲಕ್ಷ್ಯದ ಪ್ರಕರಣವನ್ನು ಎದುರಿಸುತ್ತಿದ್ದಾರೆ ಮತ್ತು ಪೊಲೀಸರು ವಿಚಾರಣಾಧೀನ ಕೈದಿಯನ್ನು ಪತ್ತೆಹಚ್ಚಲು ಅನೇಕ ತಂಡಗಳನ್ನು ರಚಿಸಿದ್ದಾರೆ. ಹಾಗೂ, ಮಹಿಳೆಯ ಕಾನೂನುಬಾಹಿರ ಕೃತ್ಯಕ್ಕಾಗಿ ಆಕೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಸಚಿವ ರಾಮಲಿಂಗಾ ರೆಡ್ಡಿ ಹೆಸರಿನಲ್ಲಿ ಮೇಲ್ ಐಡಿ ಸೃಷ್ಟಿಸಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ: ಸೈಬರ್ ಠಾಣೆಗೆ ದೂರು
ನಾಪತ್ತೆಯಾಗಿರುವ ಕೈದಿಯನ್ನು ಅನಿಲ್ ಎಂದು ಪೊಲೀಸರು ಗುರುತಿಸಿದ್ದು, ಈತ ಮೂಲತಃ ಹರಿಯಾಣದ ಪಲ್ವಾಲ್ ಜಿಲ್ಲೆಯ ಹೊಡಾಲ್ ನಿವಾಸಿ. ಈತನ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕನಿಷ್ಠ 8 ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಥುರಾ ಜೈಲಿನಲ್ಲಿದ್ದ ಅನಿಲ್‌ನನ್ನು ಇತ್ತೀಚೆಗಷ್ಟೇ ಆತನ ವಿರುದ್ಧ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗಾಗಿ ಹೊಡಾಲ್‌ಗೆ ಕರೆತರಲಾಗಿತ್ತು. ಒಬ್ಬ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್ಸ್ಟೇಬಲ್ ಗಳು ಸೇರಿದಂತೆ ಮೂವರು ಸದಸ್ಯರ ಪೊಲೀಸ್ ತಂಡ ಆತನ ಜೊತೆಗಿತ್ತು.
ನ್ಯಾಯಾಲಯದ ವಿಚಾರಣೆಯು ಮುಗಿದಿದ್ದು, ಬಳಿಕ ಮೂವರು ಪೊಲೀಸರು ಹಾಗೂ ಕೈದಿ ಸೇರಿ ನಾಲ್ವರು ಮಥುರಾಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ಪೊಲೀಸ್ ವ್ಯಾನ್ ಹತ್ತಿದರು. ನಂತರ, ದಬ್ಚಿಕ್‌ನ ರಾಷ್ಟ್ರೀಯ ಹೆದ್ದಾರಿ 19 ರ ಬಳಿ ಅನಿಲ್ ಪತ್ನಿ, ಸ್ಕೂಟಿಯಲ್ಲಿ ಬಂದು ಪತಿಯನ್ನು ಕರೆದೊಯ್ದಿದ್ದಾರೆ.
ಪೊಲೀಸರ ಕಣ್ಣುತಪ್ಪಿಸಿ ಆಕೆ ಹೇಗೆ ಈ ಕೃತ್ಯವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಆಕೆ ಪತಿಯನ್ನು ಕರೆದೊಯ್ದಿರುವುದು ಹಲವರ ಹುಬ್ಬೇರಿಸಿದೆ. ಇನ್ನು, ಘಟನೆಯಿಂದ ಮೂಕವಿಸ್ಮಿತರಾದ ಪೊಲೀಸರು ಈಗ ಡ್ಯಾಮೇಜ್ ಕಂಟ್ರೋಲ್ ಮೋಡ್‌ನಲ್ಲಿದ್ದು ನಾಪತ್ತೆಯಾಗಿರುವ ವಿಚಾರಣಾಧೀನ ಕೈದಿಯನ್ನು ಪತ್ತೆ ಹಚ್ಚಲು ಮತ್ತು ಆತನನ್ನು ಮತ್ತೆ ಜೈಲಿಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ.