ಮೋದಿ, ಯೋಗಿ ಆದಿತ್ಯನಾಥ್‌ ಬೆಂಬಲಿಸಿದ್ದಕ್ಕಾಗಿ ಕ್ಯಾಬ್‌ ಚಾಲಕನಿಂದ ಪ್ರಯಾಣಿಕನ ಕೊಲೆ!

By Santosh NaikFirst Published Jun 13, 2023, 1:38 PM IST
Highlights

ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಬೆಂಬಲಿಸಿ ಮಾತನಾಡಿದ್ದಕ್ಕಾಗಿ ಉತ್ತರ ಪ್ರದೇಶದಲ್ಲಿ ಕ್ಯಾಬ್‌ ಚಾಲಕನೊಬ್ಬ ತನ್ನ ಪ್ರಯಾಣಿಕನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
 

ನವದೆಹಲಿ (ಜೂ.13): ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ಕಾಲಹರಣಕ್ಕೆಂದು ಮಾಡಿದ ಪುಟ್ಟ ರಾಜಕೀಯ ಚರ್ಚೆ ಮಾರಣಾಂತಿಕವಾಗಿ ಪರಿಣಮಿಸಿದೆ. ಕ್ಯಾಬ್‌ನಲ್ಲಿ ಕುಳಿತ ಪ್ರಯಾಣಿಕ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಹೊಗಳಿದ್ದಕ್ಕಾಗಿ ಸಿಟ್ಟಾಗಿದ್ದ ಕ್ಯಾಬ್‌ ಚಾಲಕ ಪ್ರಯಾಣಿಕನನ್ನು ಕೊಂದು ಪರಾರಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, 52 ವರ್ಷದ ರಾಜೇಶ್‌ ದುಬೆ ಮದುವೆ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸಾಗಲು ಕ್ಯಾಬ್‌ ಹತ್ತಿದ್ದರು. ಈ ವೇಳೆ ಕ್ಯಾಬ್‌ ಚಾಲಕನಾಗಿದ್ದ ಅಮ್ಜದ್‌ ಜೊತೆ ಬಿಸಿ ಬಿಸಿಯಾದ ರಾಜಕೀಯ ಚರ್ಚೆ ನಡೆಸಿದ್ದರು. ಇವರ ಜೊತೆ ಮಹೋಖರ್‌ ಗ್ರಾಮದ ಮಾಜಿ ಮುಖ್ಯಸ್ಥರಾಗಿದ್ದ ಧೀರೇಂದ್ರ ಪ್ರತಾಪ್‌ ಕೂಡ ಇದ್ದರು.  ಚರ್ಚೆಯ ವೇಳೆ ಆರೋಪಿ ಚಾಲಕ ಅಮ್ಜಾದ್ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಲು ಆರಂಭಿಸಿದ್ದಾನೆ ಎಂದು ವರದಿಯಾಗಿದೆ, ಈ ಬಗ್ಗೆ ರಾಜೇಶ್ ದುಬೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ರಾಜೇಶ್‌ ದುಬೆ ವಿರುದ್ಧ ಸಿಟ್ಟಾಗಿದ್ದ ಅಮ್ಜದ್‌ ಅವರ ಜೊತೆ ವಾಗ್ವಾದಕ್ಕೂ ಇಳಿದಿದ್ದರು.

ಈ ವೇಳೆ ಕಾರಿನಲ್ಲಿ ಕುಳಿತಿದ್ದ ಧೀರೇಂದ್ರ ಪ್ರತಾಪ್‌ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ. ಈ ಹಂತದಲ್ಲಿ ವಿವಾದ ತಣ್ಣಗಾಯಿತು ಎಂದು ಅಂದುಕೊಳ್ಳುವ ಹೊತ್ತಿಗಾಗಲೇ ಅಮ್ಜದ್‌ ಬೇರೆಯದೇ ರೀತಿಯ ಪ್ಲ್ಯಾನ್‌ ಮಾಡುತ್ತಿದ್ದ. ರಾಜೇಶ್‌ ದುಬೆ ಇಳಿಯುವ ಸ್ಥಳ ಬಂದಾಗ, ಕ್ಯಾಬ್‌ ಚಾಲಕ ಅಮ್ಜದ್‌ ಆತನನ್ನುಮನೆಯ ಬಾಗಿಲಿನವರೆಗೆ ಬಿಡದೇ, ಮನೆಯಿಂದ ಸ್ವಲ್ಪ ದೂರದ ರಸ್ತೆಯಲ್ಲಿಯೇ ಬಿಟ್ಟಿದ್ದ.

ಆದರೆ, ಹೆಚ್ಚೇನೂ ಮಾತನಾಡದೇ ಕಾರ್‌ನಿಂದ ಇಳಿದಿದ್ದ ರಾಜೇಶ್‌ ದುಬೆ ಮನೆಯ ದಾರಿಯಲ್ಲಿ ನಡೆದುಕೊಂಡು ಹೋಗಲು ಆರಂಭಿಸಿದ್ದ. ಈ ವೇಳೆ ಬೊಲೆರೋ ಕಾರ್‌ನ ಚಾಲಕನಾಗಿದ್ದ ಅಮ್ಜದ್‌, ಉದ್ದೇಶಪೂರ್ವಕವಾಗಿ ಕಾರ್‌ಅನ್ನು ರಾಜೇಶ್‌ ದುಬೆ ಮೇಲೆ ಹರಿಸಿ ಕೊಲೆ ಮಾಡಿದ್ದಾರೆ. ಅಂದಾಜು 200 ಮೀಟರ್‌ವರೆಗೆ ರಾಜೇಶ್‌ ದುಬೆಯನ್ನೂ ಎಳೆದುಕೊಂಡು ಹೋಗಿದ್ದಾರೆ. ಘಟನೆಯ ಬೆನ್ನಲ್ಲಿಯೇ ರಾಜೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Latest Videos

ನರ್ಸಿಂಗ್‌ ವಿದ್ಯಾರ್ಥಿಯ ಕೊಲೆ ಮಾಡಿ ಕಣ್ಣು ಕಿತ್ತ ಸೋದರ ಮಾವ?

ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಾಗಿದ್ದರೂ, ಯುಪಿ ಪೊಲೀಸರು ಚಾಲಕ ಅಮ್ಜದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಚಾಲಕ ಅಮ್ಜದ್‌ ಪರಾರಿಯಾಗಿದ್ದಾರೆ. ಈ ನಡುವೆ, ರಾಜೇಶ್‌ ದುಬೆ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದು, ಮಿರ್ಜಾಪುರ-ಪ್ರಯಾಗರಾಜ್ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಮಿರ್ಜಾಪುರ ಪೊಲೀಸರು ಮಂಗಳವಾರದ ವೇಳೆಗೆ ಕ್ಯಾಬ್‌ ಚಾಲಕ ಅಮ್ಜದ್‌ನಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ.

ಸೊಸೆ ತಂದ ಸೌಭಾಗ್ಯ, ಗಂಡನ ಇಡೀ ಕುಟುಂಬಕ್ಕೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್‌!

click me!