'ಟ್ರಾನ್ಸ್‌ಫರ್ ಬೇಕಿದ್ರೆ ಒಂದು ರಾತ್ರಿ ಹೆಂಡತಿ ಕಳಿಸು' ನೊಂದ ಉದ್ಯೋಗಿ ಬೆಂಕಿ ಹಚ್ಚಿಕೊಂಡ್ರು!

Published : Apr 11, 2022, 11:35 PM IST
'ಟ್ರಾನ್ಸ್‌ಫರ್ ಬೇಕಿದ್ರೆ ಒಂದು ರಾತ್ರಿ ಹೆಂಡತಿ ಕಳಿಸು' ನೊಂದ ಉದ್ಯೋಗಿ ಬೆಂಕಿ ಹಚ್ಚಿಕೊಂಡ್ರು!

ಸಾರಾಂಶ

* ವರ್ಗಾವಣೆ ಬೇಕು ಎಂದರೆ ನಿನ್ನ ಹೆಂಡತಿಯನ್ನು ಒಂದು ರಾತ್ರಿ ಕಳಿಸು! * ಇಂಜಿನಿಯರ್ ಕಿರುಕುಳಕ್ಕೆ ಬೇಸತ್ತು ಸಿಬ್ಬಂದಿ ಆತ್ಮಹತ್ಯೆ * ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಸಾವು * ಎರಡೂ ಕೋನಗಳಿಂದ ಪ್ರಕರಣ ವಿಚಾರಣೆ

ಲಕ್ನೋ (ಏ. 11)  ಕಿಚ್ಚ ಸುದೀಪ್ (Kiccha Sudeep) ಅವರ ಕೆಂಪೇಗೌಡ ಸಿನಿಮಾದಲ್ಲಿನ ಒಂದು ದೃಶ್ಯದಂತೆ ಇದೆ ಈ ಸುದ್ದಿ.  ವರ್ಗಾವಣೆ (Transfer)ಬೇಕಿದ್ದರೆ ಪತ್ನಿಯನ್ನು ಒಂದು ರಾತ್ರಿಗೆ ಕಳುಹಿಸಿ ಎಂದು ಹಿರಿಯ ಅಧಿಕಾರಿಯೊಬ್ಬರು ಕೇಳಿದ್ದಕ್ಕೆ ಉತ್ತರ ಪ್ರದೇಶದ ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.

45 ವರ್ಷ್ ಗೋಕುಲ್ ಪ್ರಸಾದ್  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಬಾಸ್ ಮಾತಿಗೆ ಮನನೊಂದ ಗೋಕುಲ್ ಪ್ರಸಾದ್ ಲಖೀಂಪುರದ ಜೂನಿಯರ್ ಇಂಜಿನಿಯರ್ ಕಚೇರಿಯ ಹೊರಗೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಜೂನಿಯರ್ ಇಂಜಿನಿಯರ್ ನಾಗೇಂದ್ರ ಕುಮಾರ್ ಹಾಗೂ ಗುಮಾಸ್ತರನ್ನು ಅಮಾನತು ಮಾಡಲಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗೋಕುಲ್ ಪ್ರಸಾದ್ ಅವರು ಬೆಂಕಿ ಹಚ್ಚಿಕೊಂಡ ನಂತರ ತಮಗಾದ ದುರಂತದ  ಕತೆಯನ್ನು ಹೇಳುತ್ತಾ ಹೋಗುತ್ತಾರೆ.   ಜೂನಿಯರ್ ಇಂಜಿನಿಯರ್ ಮತ್ತು ಅವರ ಸಹಾಯಕರು ತನಗೆ ಕಿರುಕುಳ ನೀಡುತ್ತಿದ್ದರು ಮತ್ತು ಪೊಲೀಸರನ್ನು ಸಂಪರ್ಕಿಸಿದರೂ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಅಳುತ್ತಲೆ ಬೆಂಕಿಯಲ್ಲಿ ಬೆಂದಿದ್ದಾರೆ.

ಇನ್ನೊಂದು ವಿಡಿಯೋ ಸಹ ಬಹಿರಂಗವಾಗಿದ್ದು ಮೂರು ವರ್ಷಗಳಿಂದ ಗೋಕುಲ್‌ಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆತನ ಪತ್ನಿ ಆರೋಪಿಸಿದ್ದಾರೆ. "ಅವರು ಖಿನ್ನತೆಗೆ ಒಳಗಾಗಿದ್ದರು. ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದು.  ಅವರನ್ನು ಅಲಿಗಂಜ್‌ಗೆ ವರ್ಗಾಯಿಸಲಾಯಿತು. ಪ್ರಯಾಣಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಅವರು ಮನೆಗೆ ವರ್ಗಾಯಿಸಲು ಕೇಳಿದ್ದರು.

ಗೆಳತಿ ಕೈ ಕೊಟ್ಟ ಸೇಡಿಗೆ ಲ್ಯಾಪ್‌ಟಾಪ್‌ ಕದಿಯಲು ಶುರು ಮಾಡಿದ ಯುವಕ

ವರ್ಗಾವಣೆ ಬೇಕು ಎಂದರೆ ನಿನ್ನ ಹೆಂಡತಿಯನ್ನಿ ಒಂದು ರಾತ್ರಿ ಕಳಿಸಿ ಕೊಡು, ಆಗ ವರ್ಗಾವಣೆ ಮಾಡುತ್ತೇವೆ ಎಂದಿದ್ದರು. ಇದರಿಂದ ಅವರು ಪ್ರತಿದಿನ ನೋವು ಅನುಭವಿಸುತ್ತುದ್ದು ಈಗ ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪತ್ನಿ ಹೇಳಿದ್ದಾರೆ.

ಬೆಂಕಿ ಹಚ್ಚಿಕೊಂಡಿದ್ದರೂ ಅವರ ನೆರವಿಗೆ ಯಾರೂ ಧಾವಿಸಲೇ ಇಲ್ಲ.  ಎಲ್ಲರೂ ನಿಂತು ನೋಡುತ್ತಿದ್ದಂತೆ ನನ್ನ ಗಂಡನ ಪ್ರಾಣ ಹೋಯಿತು ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರರುವ  ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಸುಮನ್ 'ಜೂನಿಯರ್ ಇಂಜಿನಿಯರ್ ವರ್ಗಾವಣೆಗೆ ಕೋರಿದಾಗ ಲೈನ್‌ಮ್ಯಾನ್ ಹಣದ ಬೇಡಿಕೆ ಮತ್ತು ಅಸಭ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟು ಎಲ್ಲ ಕೋನಗಳಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. 

ಟ್ರಾವೆಲ್ ಬ್ಯಾಗ್ ನಲ್ಲಿ ಪತ್ನಿ ಕರೆದೊಯ್ದ:  ಸುರಸುಂದರಾಂಗನ ಕರಾಮತ್ತು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಗೆಳತಿಯನ್ನು ಹಾಸ್ಟೇಲ್ (Hostal) ಒಳಕ್ಕೆ ಕರೆದೊಯ್ಯಲು ಈತ ಮಾಡಿದ ಮಾಸ್ಟರ್ ಪ್ಲಾನ್ ನೋಡಿದ್ರೆ ಬೆಚ್ಚಿ ಬೀಳಲೇಬೇಕು  ಟ್ರಾವೆಲ್ ಬ್ಯಾಗ್ ತೆಗೆದುಕೊಂಡು ಯುವಕ ಓಡಲು  ಮುಂದಾಗಿದ್ದ  ವೇಳೆ ಅನುಮಾನಗೊಂಡು ಚೆಕ್ ಮಾಡಿದಾಗ ಒಳಗಿನಿಂದ ಯುವತಿ ಎದ್ದು ಬಂದಿದ್ದಾಳೆ.  

ಪ್ರಿಯಕರನ ಖಾಸಗಿ ಅಂಗ ಕಟ್ : ಕೋಪದಲ್ಲಿ ಮಹಿಳೆ, ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ್ದಾಳೆ. ಅಷ್ಟೇ ಅಲ್ಲ ಗುಪ್ತಾಂಗವನ್ನು ಕತ್ತರಿಸಿ ಬಕೆಟ್ ನಲ್ಲಿ ಹಾಕಿದ್ದಾಳೆ. ಬರೀ ಖಾಸಗಿ ಅಂಗ ಕತ್ತರಿಸಿದ್ದರೆ ವಿಷ್ಯ ಬೇರೆಯಿತ್ತು. ಆದ್ರೆ ಈ ಮಹಾನ್ ಮಹಿಳೆ ಇಡೀ ದೇಹವನ್ನೇ ತುಂಡು ತುಂಡಾಗಿ ಕತ್ತರಿಸಿದ್ದಾಳೆ. ಈ ಕೆಲಸ ಮಾಡಿದ ಮಹಿಳೆ ವಯಸ್ಸು 24 ವರ್ಷ.ಈ ಮಹಿಳೆ ಅಮೆರಿಕದ ವಿಸ್ಕಾನ್ಸಿನ್ ಮೂಲದವಳು. ಆಕೆಯ ಹೆಸರು ಟೇಲರ್ ಡಿ. ಶಾಬ್ಯುಸಿನೆಸ್. ಈಕೆ ಸದ್ಯ ಗ್ರೀನ್ ಬೇ ಪ್ರದೇಶದಲ್ಲಿ ವಾಸಿಸುತ್ತಾಳೆ. ಪೊಲೀಸರಿ ಹೋಗಿತ್ತು ದೂರು : ಪೊಲೀಸರಿಗೆ ಫೆಬ್ರವರಿ 23ರ ಬೆಳಿಗ್ಗೆ ಅಪರಿಚಿತರಿಂದ ಕರೆ ಬಂದಿತ್ತಂತೆ. ಬೇಸ್ಮೆಂಟ್ ನ ಬಕೆಟ್ ಒಂದರಲ್ಲಿ ವಿಚಿತ್ರ ವಸ್ತುವಿದೆ ಎಂದು ದೂರಿದ್ದರಂತೆ. ಬಕೆಟ್ ಮೇಲೆ ಟವೆಲ್ ಕೂಡ ಇಡಲಾಗಿತ್ತಂತೆ. ಅದ್ರ ಮೇಲೆ ಟೇಲರ್ ಬಾಯ್ ಫ್ರೆಂಡ್ ತಲೆಯಿತ್ತು ಎಂದೂ ಪೊಲೀಸರು ಹೇಳಿದ್ದಾರೆ. ದೂರು ಸಿಕ್ಕ ತಕ್ಷಣ ಪೊಲೀಸರು ಅಪಾರ್ಟ್ಮೆಂಟ್ ಗೆ ಹೋಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ದಂಪತಿ, ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಟೆಕ್ಕಿ ದುರಂತ ಸಾವು, ಡೆಟ್‌ನೋಟ್‌ನಲ್ಲಿ ಶಾಕಿಂಗ್ ಮಾಹಿತಿ!