ರಸ್ತೆ ಅಪಘಾತದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಸಹೋದರ ಸಾವು

By Suvarna News  |  First Published Apr 11, 2022, 3:26 PM IST

ಸಂಸದ ಸಂಗಣ್ಣ ಕರಡಿ ಅವರ ಸಹೋದರ ಬಸಣ್ಣ ಕರಡಿ ಸಾವು
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬಸಣ್ಣ ಕರಡಿ 
ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರ


ಕೊಪ್ಪಳ, (ಏ.11): ರಸ್ತೆಅಪಘಾತದಲ್ಲಿ ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರ ಸಹೋದರ ಬಸಣ್ಣ ಕರಡಿ ಮೃತಪಟ್ಟಿದ್ದಾರೆ. 

ಕೊಪ್ಪಳ ತಾಲೂಕಿನ ಟನಕನಕಲ್ ಬಳಿ  ಬಸಣ್ಣ ಕರಡಿ  ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬಸಣ್ಣ ಕರಡಿ (68)  ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Tap to resize

Latest Videos

ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗಿದ್ದು, ಇಂದು(ಸೋಮವಾರ)  ಸಂಜೆ 5 ಗಂಟೆಗೆ ಹನುಮನಹಳ್ಳಿ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ. 

ಮೃತ ಬಸಣ್ಣ ಕರಡಿ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಇನ್ನು ಸಂಸದ ಸಂಗಣ್ಣ ಕರಡಿ ಸಂತಾಪ ಸೂಚಿಸಿದ್ದಾರೆ. ನನ್ನ ಸಹೋದರ ಬಸಣ್ಣ ಅಮರಪ್ಪ ಕರಡಿ ಅವರು ಇಂದು(ಸೋಮವಾರ) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಟಣಕನಕಲ್ ಗ್ರಾಮ ಅವರ ನಿವಾಸ ದಲ್ಲಿ ಅಂತಿಮ ದರ್ಶನ ಇರುತ್ತದೆ. ಶ್ರೀಯುತರ ಅಂತ್ಯಕ್ರಿಯೆಯನ್ನು ಸಂಜೆ 5 ಗಂಟೆಗೆ ಹನುಮನಹಳ್ಳಿ ಗ್ರಾಮದ ತೋಟದಲ್ಲಿ ನೆರವೇರಿಸಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

click me!