ರುಂಡವಿಲ್ಲದ ಯುವತಿ ದೇಹ ನಗ್ನವಾಗಿ ಬಿದ್ದಿತ್ತು, ವರ್ಷದ ನಂತ್ರ ಆರೋಪಿ ಸಿಕ್ಕಿದ್ದೆ ರೋಚಕ!

By Suvarna NewsFirst Published Jun 3, 2020, 4:22 PM IST
Highlights

ಬರೋಬ್ಬರಿ ಒಂದು ವರ್ಷದ ನಂತರ ಪತ್ತೆಯಾದ ಕೊಲೆ ಪ್ರಕರಣ/ ಚಾಲಾಕಿ ಆರೋಪಿ ಕೊನೆಗೂ ಪೊಲೀಸರ ಬಲೆಗೆ/ ಎರಡು ರಾಜ್ಯಗಳ ನಡುವಿನ ಪ್ರೇಮ ಕಹಾನಿ/ ಪೊಲೀಸರು ತನಿಖೆ ಮಾಡಿದ್ದೆ ರೋಚಕ

ಮೀರತ್(ಜೂ.03) ಕಳೆದ ವರ್ಷದ ಜೂನ್ ನಲ್ಲಿ ಏಕ್ತಾ ಜಸ್ವಾಲ್ ಎಂಬ 19  ವರ್ಷದೆ ಹುಡುಗಿಯ ಶವ ಹೊಲವೊಂದರಲ್ಲಿ ಸಿಗುತ್ತದೆ. ಒಂದು ಕಡೆ ತೋಳಿನಲ್ಲಿ ಆಕೆ ತನ್ನ ಹೆಸರು ಬರೆದುಕೊಂಡಿದ್ದರೆ ಇನ್ನೊಂದು ಕಡೆ ತನ್ನ ಪ್ರಿಯಕರನ ಹೆಸರು ಬರೆದುಕೊಂಡಿದ್ದಳು. ಇದು ಆಕೆಯ ಗುರುತು ಪತ್ತೆ ಮಾಡಲು ನೆರವಾಗಿತ್ತು.

ಆಕೆಯ ರುಂಡವನ್ನು ಬೇರ್ಪಡಿಸಲಾಗಿತ್ತು. ಮೈಮೇಲೆ ಬಟ್ಟೆ ಇರಲಿಲ್ಲ. ಲೂಧಿಯಾನದ ಬಿಕಾಂ ಗ್ಯಾಜ್ಯುವೇಟ್ ಎನ್ನುವ ಬಗ್ಗೆ ಯಾವ ಸುಳಿವು ಆ ಕ್ಷಣಕ್ಕೆ ಇರಲಿಲ್ಲ.

ಬರೋಬ್ಬರಿ ಒಂದು ವರ್ಷದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.  ಎರಡು ರಾಜ್ಯಗಳ ನಡುವಿನ ಹತ್ಯೆ ಕತೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಂಜಾಬ್ ಮತ್ತು ಉತ್ತರ ಪ್ರದೇಶದ ನಡುವಿನ ಕತೆ!  ಇದೊಂದು ಪ್ರೇಮ ಕತೆ, ದುರಂತ ಅಂತ್ಯವಾದ ಕತೆ. ಅಮಾನ್ ಅಲಿಯಾಸ್ ಸಾಕ್ಯೂಬ್ ಎನ್ನುವ ಮಾಡಿದ ಪಾತಕದ ಕತೆ.

ಜಗಳದ ನಡುವೆ ಪ್ರೇಯಸಿಯ ರುಂಡ ಕಡಿದು ರಸ್ತೆಯೆಲ್ಲಾ ಓಡಾಡಿದ

ಕಳೆದು ಜೂನ್ 13 ರಂದು ಲೋಹಿಯಾ ವಿಲೇಜ್ ಬಳಿ ಯುವತಿಯ ಶವ ಮೇಲಕ್ಕೆ ತೆಗೆಯಲಾಗುತ್ತದೆ. ನಾಯಿಯೊಂದು ಮನುಷ್ಯನ ಕೈ ಹೋಲುವುದನ್ನು  ಎತ್ತಿಕೊಂಡು ಬರುತ್ತಿರುವುದನ್ನು ರೈತರೊಬ್ಬರು ಗಮನಿಸಿದ್ದಾರೆ.  ನಮಗೆ ವ್ಯಕ್ತಿಯ ಗುರುತು ಮಾಡಲು ಯಾವ ದಾಖಲೆಗಳು ಇರಲಿಲ್ಲ. ಈ ಕಾರಣಕ್ಕೆ ಆ ಭಾಗದ ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಲು ಆರಂಭಿಸಿದೆವು. ಒಂದು ಮೊಬೈಲ್ ಸಂಖ್ಯೆ ಪಂಜಾಬ್ ನ ಲೂಧಿಯಾನದಲ್ಲಿ ನೋಂದಣಿಯಾಗಿ ಇಲ್ಲಿ ಕೆಲಸ ಮಾಡಿರುವ ಸಂಗತಿ ಗೊತ್ತಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸುತ್ತಾರೆ.

ಲೂಧಿಯಾನಕ್ಕೆ ತೆರಳಿ ಅಲ್ಲಿ ನಾಪತ್ತೆಯಾದ ಪ್ರಕರಣಗಳ ತನಿಖೆ ಆರಂಭಮಾಡುತ್ತೇವೆ. ಅಲ್ಲಿ ಕುಟುಂಬವೊಂದರ ಹೆಣ್ಣು ಮಗಳು ನಾಪತ್ತೆಯಾಗಿರುತ್ತಾಳೆ. ಜತೆಗೆ 25 ಲಕ್ಷ ಬೆಲೆ ಬಾಳುವ ಆಭರಣಗಳು ನಾಪತ್ತೆಯಾಗಿರುತ್ತದೆ.

ಕುಟುಂಬವನ್ನು ಭೇಟಿ ಮಾಡಿದ ಪೊಲೀಸರು ಪ್ರಶ್ನೆ ಮಾಡುತ್ತಾರೆ. ಆಕೆ ತನ್ನ ಲವರ್ ನೊಂದಿಗೆ ಹೋಗಿದ್ದಾರೆ. ಆದರೆ ಆಕೆ ಬದುಕಿದ್ದು ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ತನ್ನ ಪೋಟೋ ಅಪ್ ಲೋಡ್ ಮಾಡುತ್ತಿರುವ ಮಾಹಿತಿ ಗೊತ್ತಾಗುತ್ತದೆ.

ಆದರೆ ಅಸಲಿ ಕತೆ ಬೇರೆಯೇ ಇತ್ತು. ಸಾಕ್ಯೂಬ್ ಏಕ್ತಾ ಖಾತೆಯಿಂದ ಪೋಟೋ ಅಪ್ ಲೋಡ್ ಮಾಡುತ್ತಿದ್ದ. ಒಂದು ವಾರದ ಹಿಂದಷ್ಟೆ ಹೊಸ ಪೋಟೋ ಹಾಕಿದ್ದ!

ಶಿಕ್ಷಣ ಪಡೆದುಕೊಂಡಿದ್ದಸ ಏಕ್ತಾ ಸರಕಾರಿ ಹುದ್ದೆ ನಿರೀಕ್ಷೆಯಲ್ಲಿ ಇದ್ದವರು. ಈ ಸಾಕ್ಯೂಬ್ ಯಾವುದೋ ಕಾಲದಲ್ಲಿ ಶಾಲೆ ತೊರೆದವನು ಲೂಧಿಯಾನದ ಹರಳುಗಳ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇವೆಂಟ್ ಮ್ಯಾನೇಜ್ ಮೆಂಟ್ ಸಂಬಂಧ ಏಕ್ತಾ ಮತ್ತು ಸಾಕ್ಯೂಬ್ ಭೇಟಿಯಾಗಿರುತ್ತದೆ. 2019 ಆರಂಭದಲ್ಲಿ ಈ ಎಲ್ಲ ಘಟನೆ ನಡೆದಿದ್ದು ಸಾಕ್ಯೂಬ್ ತನ್ನನ್ನು ತಾನು ಅಮಾನ್ ಎಂದು ಪರಿಚಯ ಮಾಡಿಕೊಂಡಿರುತ್ತಾನೆ.

ಸಾಕ್ಯೂಬ್ ಮೀರತ್ ನಲ್ಲರುವ ತನ್ನ ಮನೆಗೆ ಮೊಟ್ಟ ಬದಲ ಸಾರಿ ಏಕ್ತಾರನ್ನು ಕರೆದುಕೊಂಡು ಬರುತ್ತಾನೆ. ಈ ವೇಳೆ ಆಕೆಗೆ ಈತ ಬೇರೆ ಸಮುದಾಯಕ್ಕೆ ಸೇರಿದವನು ಎಂಬ ಸಂಗತಿ ಗೊತ್ತಾಗುತ್ತದೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಏಕ್ತಾ ಕೊಲೆಯಾಗಿ ಹೋಗುತ್ತಾಳೆ. ಸಾಕ್ಯೂಬ್ ಜತೆ ಆತನ ಕುಟುಂಬದ ಐವರು ಅಂದರೆ ತಂದೆ,  ಸಹೋದರ, ಅತ್ತಿಗೆ ಸಹ ಹತ್ಯೆಯಲ್ಲಿ ಪಾಲುದಾರರಾಗಿ ಇದೀಗ ಪೊಲೀಸರ ಆತಿಥ್ಯದಲ್ಲಿ ಇದ್ದಾರೆ. 

 

click me!