ಮತ್ತೆ ಮುಂಬೈ ಮೇಲೆ ಉಗ್ರರು ದಾಳಿ ಆತಂಕ ಶುರುವಾಗಿದೆ. 25 ಶಸ್ತ್ರಸಜ್ಜಿತ ಉಗ್ರರು ಮುಂಬೈ ದಾಳಿಗೆ ಈಗಾಗಲೇ ನಗರ ಸೇರಿಕೊಂಡಿದ್ದಾರೆ. ಇದರ ಜೊತೆ ಮುಖೇಶ್ ಅಂಬಾನಿ, ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರ ಮನೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆಯೊಂದು ಬಂದಿದೆ.
ನಾಗ್ಪುರ(ಫೆ.28): ಮುಂಬೈ ಮಹಾನಗರ ಮೇಲೆ ಮತ್ತೊಂದು ಭಯೋತ್ಪಾದ ದಾಳಿ ಸೂಚನೆ ಸಿಕ್ಕಿದೆ. ಇದಕ್ಕಾಗಿ ಭಾರಿ ಶಸ್ತ್ರಾಸ್ತ್ರದೊಂದಿಗೆ 25 ಉಗ್ರರು ಮುಂಬೈ ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತ ಉದ್ಯಮಿ ಮುಕೇಶ್ ಅಂಬಾನಿ, ನಟ ಅಮಿತಾಬ್ ಬಚ್ಚನ್, ಮತ್ತೊರ್ವ ಬಾಲಿವುಡ್ ನಟ ಧರ್ಮೇಂದ್ರ ಮನೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆಯೊಂದು ಬಂದಿದೆ. ನಾಗ್ಪುರ ಪೊಲೀಸರಿಗೆ ಈ ಬೆದರಿಕೆ ಕರೆ ಬಂದಿದೆ. ತಕ್ಷಣ ನಾಗ್ಪುರ ಪೊಲೀಸರು ಮುಂಬೈ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇತ್ತ ಸೈಬರ್ ಕ್ರೈಮ್ ವಿಭಾಗ ಈ ಕರೆ ಬಂದಿರುವ ಐಪಿಎ ಅಡ್ರೆಸ್ ಹಾಗೂ ಆರೋಪಿಗಳ ಜಾಡು ಪತ್ತೆ ಆರಂಭಿಸಿದೆ.
ಇತ್ತೀಚೆಗೆ ಹಲವು ಬಾರಿ ಮುಕೇಶ್ ಅಂಬಾನಿ ಮನೆ ಸ್ಫೋಟಿಸುವುದಾಗಿ ಮುಂಬೈ ಹಾಗೂ ನಾಗ್ಪುರ ಪೊಲೀಸರು ಹುಸಿ ಬೆದರಿಕೆ ಕರೆ ಸ್ವೀಕರಿಸಿದ್ದಾರೆ. ಮುಂಬೈ ಮೇಲೆ ಬಾಂಬ್ ಸ್ಫೋಟ ಸೇರಿದಂತೆ ಹಲವು ರೀತಿ ಉಗ್ರ ದಾಳಿ ಹುಸಿ ಬೆದರಿಕೆ ಕರೆಗಳು ಸ್ವೀಕರಿಸಿದ್ದಾರೆ. ಆದರೆ ಈ ರೀತಿಯ ಕರೆಗಳ ಬೆನ್ನಲ್ಲೇ ಮುಂಬೈ ಪೊಲೀಸರು ಅಲರ್ಟ್ ಸಂದೇಶ ನೀಡಿ ಭದ್ರತೆ ಹೆಚ್ಚಿಸಿದ್ದಾರೆ. ಜೊತೆಗೆ ಜೊತೆಗೆ ತನಿಖೆಯನ್ನೂ ನಡೆಸಿ ಸತ್ಯ ಬಯಲಿಗೆಳೆದಿದ್ದಾರೆ. ಇತ್ತೀಚೆಗೆ ಈ ರೀತಿ ಕರೆಗಳು ಹೆಚ್ಚಾಗುತ್ತಿದೆ.
ಆಸ್ಪ್ರೇಲಿಯಾದ ಹಿಂದೂ ದೇಗುಲಕ್ಕೆ ಕರೆ ಮಾಡಿ ಭಜನೆ ನಿಲ್ಲಿಸಲು ಬೆದರಿಕೆ
ಮುಕೇಶ್ ಅಂಬಾನಿ ಕುಟುಂಬ ಕುಟುಂಬದ ಆಸ್ಪತ್ರೆ ಸ್ಫೋಟ: ಅನಾಮಿಕರಿಂದ ಬೆದರಿಕೆ ಕರೆ
ಮುಕೇಶ್ ಅಂಬಾನಿ ಕುಟುಂಬ ಮತ್ತು ಅವರ ಒಡೆತನದ ಸರ್ ಎಚ್‌ಎನ್ ರಿಲಯನ್ಸ್ ¶ೌಂಡೇಶನ್ ಆಸ್ಪತ್ರೆಯನ್ನು ಸ್ಪೋಟಿಸುವುದಾಗಿ ಬುಧವಾರ ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾನೆ. ಆಸ್ಪತ್ರೆಗೆ ಲ್ಯಾಂಡ್‌ಲೈನ್‌ಗೆ ಬುಧವಾರ ಮಧ್ಯಾಹ್ನ 12.57ರ ಸುಮಾರಿಗೆ ಕರೆ ಮಾಡಿದ ಅನಾಮಧೇಯ, ಆಸ್ಪತ್ರೆಯನ್ನು ಸ್ಪೋಟಿಸುವುದಾಗಿ ಹೇಳಿದ್ದಾನೆ. ಈ ಕುರಿತಾಗಿ ಡಿಬಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ಆಸ್ಪತ್ರೆ ಸ್ಪೋಟಿಸುವುದಾಗಿ ಆ.15ರಂದು ಸಹ ಬೆದರಿಕೆ ಕರೆ ಮಾಡಲಾಗಿತ್ತು. ಈ 8 ಕರೆಗಳನ್ನು ಮಾಡಿದ್ದ ವ್ಯಕ್ತಿಯನ್ನು ಗುರುತಿಸಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು.
ರಾಮ ಮಂದಿರ ಸ್ಫೋಟಿಸಿ ಬಾಬ್ರಿ ಮಸೀದಿ ಕಟ್ಟಲು ಸಂಚು, ನಿಷೇಧಿತ PFI ಸಂಘಟನೆ ಸದಸ್ಯರ ಬಂಧನ!
ಉ.ಪ್ರ. ಸಿಎಂ ಯೋಗಿ ಮನೆ ಎದುರು ಬಾಂಬ್ ಭೀತಿ ಹುಸಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಲಖನೌ ಮನೆಯ ಹೊರಗೆ ಬಾಂಬ್ ಪತ್ತೆಯಾಗಿದೆ ಎಂಬ ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚು ಮಾಡಲಾಗಿತ್ತು. ಯೋಗಿ ಅವರ ಮನೆಯ ಬಳಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಕರೆ ದೆಹಲಿಯ ಪೊಲೀಸ್ ಕಂಟ್ರೋಲ್ ರೂಂಗೆ ಬಂದಿತ್ತು. ತಕ್ಷಣವೇ ಪೊಲೀಸ್ ಸಿಬ್ಬಂದಿ, ಬಾಂಬ್ ನಿಷ್ಕಿ್ರಯ ದಳ ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಸಿಎಂ ಮನೆಯ ಸುತ್ತಾಮುತ್ತಾ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಬೆದರಿಕೆ ಹಿನ್ನೆಲೆಯಲ್ಲಿ ಮನೆಯ ಸುತ್ತಾಮುತ್ತಾ ರಕ್ಷಣಾ ಸಿಬ್ಬಂದಿಗಳನ್ನು ಹೆಚ್ಚಿಸಲಾಗಿತ್ತು. ಬಳಿಕ ಇದು ಹುಸಿ ಕರೆ ಎಂಬುದು ಬಯಲಾಗಿದೆ