ಮೋರಿಯಲ್ಲಿ ಸಿಲುಕಿ ಕಾರ್ಮಿಕ ಸಾವು, 9 ದಿನಗಳ ಬಳಿಕ ಶವ ತೆಗೆಯಲು ಮುಂದಾದ ಬಿಬಿಎಂಪಿ

By Gowthami K  |  First Published Feb 28, 2023, 8:18 PM IST

ಮೋರಿ ಸೆಂಟ್ರಿಂಗ್ ಕೆಲಸ ಮಾಡ್ತಿದ್ದ ಕೂಲಿ‌ ಕಾರ್ಮಿಕ ಮೋರಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಬಿನ್ನಿಮಿಲ್ ಸಮೀಪದ ಮಾರ್ಕಂಡೇಯ ಲೇಔಟ್ ನಲ್ಲಿ ನಡೆದಿದ್ದು, 9 ದಿನಗಳ ಬಳಿಕ ಮೋರಿಯಲ್ಲಿರುವ ಶವವನ್ನು ಹೊರತೆಗೆಯಲಾಗಿದೆ.


ಬೆಂಗಳೂರು (ಫೆ.28): ಮೋರಿ ಸೆಂಟ್ರಿಂಗ್ ಕೆಲಸ ಮಾಡ್ತಿದ್ದ ಕೂಲಿ‌ ಕಾರ್ಮಿಕ ಮೋರಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಬಿನ್ನಿಮಿಲ್ ಸಮೀಪದ ಮಾರ್ಕಂಡೇಯ ಲೇಔಟ್ ನಲ್ಲಿ ನಡೆದಿದೆ. ಫೆಬ್ರವರಿ 19 ರಂದು ಮೋರಿ ಕೆಲಸ ಮಾಡಲು ವ್ಯಕ್ತಿಯನ್ನು  ಮೇಸ್ತ್ರಿ ನೇಮಿಸಿಕೊಂಡಿದ್ದ. ಬಿಬಿಎಂಪಿ ಮೋರಿ ಸೆಂಟ್ರಿಂಗ್ ಕಾಮಗಾರಿ ನಡೆಸಲು ಕೂಲಿ ಕಾರ್ಮಿಕನ ನೇಮಕ ಮಾಡಿಕೊಳ್ಳಲಾಗಿತ್ತು. 9 ದಿನಗಳ ಬಳಿಕ ಮೋರಿಯಲ್ಲಿರುವ ಶವವನ್ನು ಹೊರ ತೆಗೆಯಲು ಪೊಲೀಸರು ಮುಂದಾಗಿದ್ದು, ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದರ್ಗಾ ಕಟ್ಟಡ ತೆರವುಗೊಳಿಸುವ ವೇಳೆ ಗೋಡೆ ಕುಸಿದು ಕೂಲಿ ಕಾರ್ಮಿಕ ಬಲಿ
ದರ್ಗಾ ಕಟ್ಟಡ ತೆರವುಗೊಳಿಸುವ ವೇಳೆ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೆ.ಆರ್.ಮಾರ್ಕೇಟ್ ಸಮೀಪದ ಹಜರತ್ ದರ್ಗಾ ಬಳಿ ನಡೆದಿದೆ. ಹಜರ್ ಉಲ್ ಹಕ್(25) ಸಾವನ್ನಪ್ಪಿದ ಕಾರ್ಮಿಕ. 85 ವರ್ಷದ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಈ ದುರ್ಘಟನೆ ನಡೆದಿದೆ. ಗಾಯಗೊಂಡವರನ್ನು ವಿಕ್ಟೋರಿಯಾದಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tap to resize

Latest Videos

ಸಾಕ್ಷಿಯನ್ನು ಕೊಂದ ಆರೋಪಿ ಎನ್‌ಕೌಂಟರ್‌ಗೆ ಬಲಿ
ಪ್ರಯಾಗ್‌ರಾಜ್‌ (ಉ.ಪ್ರ.): ಬಿಎಸ್‌ಪಿಯ ಶಾಸಕ ರಾಜು ಪಾಲ್‌ ಹತ್ಯೆ ಕೇಸಿನ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ನ ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಸೋಮವಾರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

BELAGAVI: ಉಪಟಳ ತಾಳಲಾರದೆ ಆಯುಧದಿಂದ ಹೊಡೆದು ಮಗನನ್ನೇ ಕೊಂದ ತಂದೆ!

ಸಾಕ್ಷಿಯಾದ ಉಮೇಶ್‌ ಮೇಲೆ ದಾಳಿ ಮಾಡಲು ಬಳಕೆ ಮಾಡಿದ ಎಸ್‌ಯುವಿಯನ್ನು ಚಾಲನೆ ಮಾಡುತ್ತಿದ್ದ ಆರೋಪಿ ಅರ್ಬಾಜ್‌ನನ್ನು ಬಂಧಿಸಲು ಪೊಲೀಸರು ಸುತ್ತುವರೆದ ಸಮಯದಲ್ಲಿ ಆತನ ಗುಂಡಿನ ದಾಳಿ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಸಹ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅರ್ಬಾಜ್‌ ಜೊತೆಗ ಇನ್ನೂ ಇಬ್ಬರಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಡಿಸಿಪಿ ನವೇಂದು ಕುಮಾರ್‌ ಹೇಳಿದ್ದಾರೆ.

ಲಂಬಾಣಿ ವೈದ್ಯೆಯನ್ನು ಕೊಂದೇ ಬಿಟ್ಟ ಸೈಫ್​ ಎಂಬ ಸೈತಾನ್​!

2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾದ ಉಮೇಶ್‌ ಪಾಲ್‌ನನ್ನು ಫೆ.24ರಂದು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ. ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ಕ್ರಿಮಿನಲ್‌ಗಳನ್ನು ಮಣ್ಣಲ್ಲಿ ಮಣ್ಣು ಮಾಡುತ್ತೇವೆ ಎಂದು ಎಚ್ಚರಿಸಿದ್ದರು.

click me!