ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ತಂದೆಯಿಂದಲೇ ಮದ್ಯಪಾನಕ್ಕೆ ದಿನನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಮಗನ ಹತ್ಯೆಯಾಗಿರುವ ಘಟನೆ ನಡೆದಿದೆ.
ಬೆಳಗಾವಿ (ಫೆ.28): ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ತಂದೆಯಿಂದಲೇ ಮಗನ ಹತ್ಯೆಯಾಗಿರುವ ಘಟನೆ ನಡೆದಿದೆ. ಮದ್ಯಪಾನಕ್ಕೆ ದಿನನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ತಂದೆ ಜಿನ್ನಪ್ಪಾ ಕಾಂಜಿ ಎಂಬುವವರು ತನ್ನ ಪುತ್ರ ಭರತೇಶ ಜಿನ್ನಪ್ಪಾ ಕಾಂಜಿ (30) ಎಂಬಾತನನ್ನು ಕೊಂಡಿದ್ದಾರೆ. ದಿನನಿತ್ಯ ಇವನ ಉಪಟಳ ತಾಳಲಾರದೆ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿದೆ. ತಲೆಯ ಹಿಂಭಾಗಕ್ಕೆ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಭರತೇಶ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದು, ಆರೋಪಿ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆಸ್ತಿಗಾಗಿ .2 ಕೋಟಿ ನೀಡಿ ತಂದೆಯ ಕೊಲ್ಲಿಸಿದ!
ಬೆಂಗಳೂರು: ಕೆಲವು ಆಸ್ತಿಯನ್ನು ಸೊಸೆ ಹೆಸರಿಗೆ ಬರೆದಿದ್ದಕ್ಕೆ ಕೋಪಗೊಂಡು ಸುಪಾರಿ ನೀಡಿ ವೃದ್ಧ ತಂದೆಯನ್ನೇ ಕೊಲೆ ಮಾಡಿಸಿದ್ದ ಪುತ್ರ ಸೇರಿ ಮೂವರನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijayapura: ಭೀಮಾತೀರದ ಹಂತಕರಿಗೆ ಆತಂಕ ದೂರ: 40 ವರ್ಷದ ಗ್ಯಾಂಗ್ ವಾರ್ ಅಂತ್ಯ
ಕಾವೇರಪ್ಪ ಬಡಾವಣೆ 2ನೇ ಕ್ರಾಸ್ ಇಂದ್ರಪ್ರಸ್ಥ ಅಪಾರ್ಚ್‌ಮೆಂಟ್ ನಿವಾಸಿ ಮಣಿಕಂಠ ಅಲಿಯಾಸ್ ಮಣಿ (36), ಈತನ ಸ್ನೇಹಿತರಾದ ಹೊಸಕೋಟೆಯ ದೊಡ್ಡದುನ್ನಸಂದ್ರ ನಿವಾಸಿ ಟಿ.ಆದರ್ಶ ಅಲಿಯಾಸ್ ಬೆಂಕಿ (26) ಮತ್ತು ಹೊಸಕೊಟೆ ತಾಲೂಕು ನಡುವತ್ತಿ ಗ್ರಾಮದ ಎನ್.ಎಂ.ಶಿವಕುಮಾರ್ ಅಲಿಯಾಸ್ ನಡುವತ್ತಿ ಶಿವ (24) ಬಂಧಿತರು. ಆರೋಪಿ ಮಣಿಕಂಠನಿಂದ ಸುಪಾರಿ ಪಡೆದಿದ್ದ ಈ ಇಬ್ಬರು ಆರೋಪಿಗಳು ಫೆ.13ರಂದು ಇಂದ್ರಪ್ರಸ್ಥ ಅಪಾರ್ಚ್‌ಮೆಂಟ್ ಬಳಿ ಮಣಿಕಂಠನ ತಂದೆ ನಾರಾಯಣಸ್ವಾಮಿ (70) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಬಾಣಿ ವೈದ್ಯೆಯನ್ನು ಕೊಂದೇ ಬಿಟ್ಟ ಸೈಫ್ ಎಂಬ ಸೈತಾನ್!
ಕಾವೇರಪ್ಪ ಬಡಾವಣೆಯಲ್ಲಿ ಇಂದ್ರಪ್ರಸ್ಥ ಅಪಾರ್ಚ್‌ಮೆಂಟ್ ಮಾಲಿಕ ನಾರಾಯಣಸ್ವಾಮಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಸೇರಿ ಒಟ್ಟು ಐವರು ಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಹೆಣ್ಣು ಮಕ್ಕಳನ್ನು ಮದುವೆ ಮಾಡಲಾಗಿದೆ. ನಾರಾಯಣಸ್ವಾಮಿ ದಂಪತಿ ಪುತ್ರ ಮಣಿಕಂಠನ ಜತೆಗೆ ನೆಲೆಸಿದ್ದರು. ಮಣಿಕಂಠ ಕೌಟುಂಬಿಕ ಕಲಹದಿಂದ ಮೊದಲ ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ 2013ರಲ್ಲಿ ಜೈಲು ಸೇರಿದ್ದ. ನ್ಯಾಯಾಲಯದಲ್ಲಿ ನಿರಾಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಎಂಟು ವರ್ಷದ ಹಿಂದೆ ಮಾಲೂರು ಮೂಲದ ಅರ್ಚನಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ದಂಪತಿಗೆ ಒಂದು ಹೆಣ್ಣು ಮಗುವಿದೆ. ಆದರೂ ಮಣಿಕಂಠ ಪರಸ್ತ್ರೀ ಜತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ವಿಚಾರ ಅರ್ಚನಾಗೆ ಗೊತ್ತಾಗಿ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.