ಅಂಕೋಲಾ;  ಮದುಮಗಳ ಮೇಲೆಯೇ ಗುಂಡಿನ ದಾಳಿ ಮಾಡಿದ!

Published : Jan 09, 2021, 02:37 PM ISTUpdated : Jan 09, 2021, 03:12 PM IST
ಅಂಕೋಲಾ;  ಮದುಮಗಳ ಮೇಲೆಯೇ ಗುಂಡಿನ ದಾಳಿ ಮಾಡಿದ!

ಸಾರಾಂಶ

ಮದುವೆ ಮನೆಯಲ್ಲಿ ಮದುಮಗಳ ಮೇಲೆ ಬುಲೆಟ್ ಫೈರ್/ ಅದೃಷ್ಟವಶಾತ್ ಪಾರಾದ ಮದು ಮಗಳು/ ಅಂಕೋಲಾ ತಾಲೂಕಿನ ಆವರ್ಸಾದ ಸಕಲಬೇಣದಲ್ಲಿ ಘಟನೆ/ ಸುಂಕಸಾಳದ ದುರ್ಗನಬೈಲ್ ನಿವಾಸಿ ದಿವ್ಯಾ ಗಾಂವಕರ್ ಅವರ/ ಮದುವೆ ನಿಗದಿಯಾಗಿತ್ತು

ಕಾರವಾರ(ಜ. 09)  ಮದುವೆ ಮನೆಯಲ್ಲಿ ಮದುಮಗಳ ಮೇಲೆ ಗುಂಡು ಹಾರಿಸಲಾಗಿದೆ. ಅದೃಷ್ಟವಶಾತ್  ಮದುಮಗಳು ಪಾರಾಗಿದ್ದಾಳೆ. ಅಂಕೋಲಾ ತಾಲೂಕಿನ 
ಆವರ್ಸಾದ ಸಕಲಬೇಣದಲ್ಲಿ ಘಟನೆ ನಡೆದಿದೆ.

ಸುಂಕಸಾಳದ ದುರ್ಗನಬೈಲ್ ನಿವಾಸಿ ದಿವ್ಯಾ ಗಾಂವಕರ್ ಅವರ ಮದುವೆ  ನಿಗದಿಯಾಗಿತ್ತು. ಸಂಬಂಧಿಕರ ಮನೆ ಹತ್ತಿರವಾದ್ದರಿಂದ ಸಕಲಬೇಣದಲ್ಲಿರುವ ಮನೆಯಲ್ಲಿ ಮದುವೆ ತಯಾರಿ ನಡೆದಿತ್ತು. ಮದುಮಗಳು ಬೆಳಗ್ಗೆ 4 ಗಂಟೆ  ಎದ್ದು ಕೆಲಸ ಮಾಡುತ್ತಿದ್ದಳು. ಡೈನಿಂಗ್ ಹಾಲಿನ ಕಿಟಕಿ ಸ್ವಲ್ಪ ತೆರೆದಿದ್ದದಿಂದ ನಾಡಬಂದೂಕಿನಿಂದ  ಬುಲೆಟ್ ತೂರಿಬಂದಿದೆ.

ಶ್ವಾನದ ಮಾಲೀಕತ್ವಕ್ಕೆ ಜಗಳ.. ಗುಂಡು ಹಾರಿಸಿಬಿಟ್ಟ!

 ಗುಂಡು ಗೋಡೆಗೆ ಹೊಡೆದದ್ದರಿಂದ ಯುವತಿ ಪಾರಾಗಿದ್ದಾಳೆ. ಘಟನೆ ಬಗ್ಗೆ ಅಂಕೋಲಾ ಠಾಣೆಯಲ್ಲಿ ಯುವತಿ ಅಣ್ಣ ಅಣ್ಣ ಸಂದೀಪ್ ಉಮೇಶ್  ದೂರು ನೀಡಿದ್ದಾರೆ.  ವಜ್ರಳ್ಳಿಯ ರಾಜೇಶ್ ಗಣಪತಿ ಗಾಂವಕರ್ ಮೇಲೆ ದೂರು  ನೀಡಲಾಗಿದೆ.

ಲವ್ ಮಾಡ್ತೇನೆಂತ ಹೇಳಿ ಯುವತಿಯನ್ನು ರಾಜೇಶ್ ಕಾಡುತ್ತಿದ್ದ. ಅದೇ ಕಾರಣದಿಂದ ಬುಲೆಟ್ ಫೈರ್ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ವಜ್ರಳ್ಳಿಯ ರಾಜೇಶ್ ಗಣಪತಿ ಗಾಂವಕರ್  ಮೇಲಲೆ ಯಪ್ಪಾಪುರದಲ್ಲೊಂದು ಮರ್ಡರ್ ಪ್ರಕರಣ  ಇದೆ. ಅಲ್ಲದೇ, 2017ರಲ್ಲಿ ಅಂಕೋಲಾದಲ್ಲಿ ಅರಣ್ಯ ಇಲಾಖೆ ವಾಹನದ ಮೇಲೆ 8 ಸುತ್ತಿನ ಬುಲೆಟ್ ಫೈರ್ ಮಾಡಿದ್ದ. ಅರಣ್ಯ ಕಳ್ಳತನ ಸಂಬಂಧಿಸಿ ಈಗಾಗಲೇ 7-8 ಕೇಸ್ ರಾಜೇಶ್ ಮೇಲಿದೆ.ಜನವರಿ 6ರಂದು ರಾಜೇಶ್ ತಮ್ಮ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಣ್ಣ ಮಿಸ್ಸಿಂಗ್ ಎಂದು ದೂರು ನೀಡಿದ್ದ. ಕಳೆದ ನಾಲ್ಕು ದಿನದಿಂದ ಮಿಸ್ಸಿಂಗ್ ಆಗಿರುವ ರಾಜೇಶನೇ ಕೃತ್ಯ ಎಸಗಿರುವ ಸಂಶಯ ಮೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ