Kolar Crime: ಉದ್ಯೋಗ, ಹಣದ ಆಮಿಷೆ ತೋರಿಸಿ ನಿರುದ್ಯೋಗಿ ಯುವಕ-ಯುವತಿಯರಿಗೆ ಮೋಸ

Published : Sep 13, 2022, 11:33 PM IST
Kolar Crime: ಉದ್ಯೋಗ, ಹಣದ ಆಮಿಷೆ ತೋರಿಸಿ ನಿರುದ್ಯೋಗಿ ಯುವಕ-ಯುವತಿಯರಿಗೆ ಮೋಸ

ಸಾರಾಂಶ

ಅಮಾಯಕ ನಿರುದ್ಯೋಗಿ ಯುವಕ-ಯುವತಿಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಚೈನ್ ಲಿಂಕ್ ಸಂಸ್ಥೆಗಳು.ಡಬಲ್ ಹಣ, ಉದ್ಯೋಗ ಆಮೀಷ ನೀಡಿ ಚೈನ್‌ಲಿಂಕ್ ಮಾರ್ಕೆಟಿಂಗ್ ಮಾಡುತ್ತಿದ್ದ ಕಂಪನಿಗಳ ಮೇಲೆ ಪೊಲೀಸರು ದಾಳಿ 

ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

 ಕೋಲಾರ (ಸೆ.13) : ಅಮಾಯಕ ನಿರುದ್ಯೋಗಿ ಯುವಕ-ಯುವತಿಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಚೈನ್ ಲಿಂಕ್ ಸಂಸ್ಥೆಗಳು.ಡಬಲ್ ಹಣ, ಉದ್ಯೋಗ ಆಮೀಷ ನೀಡಿ ಚೈನ್‌ಲಿಂಕ್ ಮಾರ್ಕೆಟಿಂಗ್ ಮಾಡುತ್ತಿದ್ದ ಕಂಪನಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬಡಪಾಯಿ ನಿರುದ್ಯೋಗಿ ಯುವಕರನ್ನು ಬಳಸಿಕೊಂಡು ಚೈನ್ ಲಿಂಕ್ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿದ್ದ ಕೃತ್ಯಗಳಿಗೆ ಬ್ರೇಕ್ ಹಾಕಿದ ಪೊಲೀಸರು.

Chain-Link Scam: ಚೈನ್ ಲಿಂಕ್ ನಂಬಿ ಸೇರಿಕೊಂಡ ಮಹಿಳೆ ಈಗ ಪರದಾಟ!

ಒಂದೆಡೆ ಉದ್ಯೋಗದ ಆಸೆಯಲ್ಲಿ ಬಂದಿರುವ ನೂರಾರು ಯುವಕ ಯುವತಿಯರು, ಮತ್ತೊಂದೆಡೆ ಕಂಪನಿಯ ಮ್ಯಾನೇಜ್ಮೆಂಟ್‌(Management)ನವರನ್ನ ವಿಚಾರಣೆ ಮಾಡುತ್ತಿರುವ ಪೋಲೀಸರು ಇದು ಕೋಲಾರ(Kolar) ನಗರದ ಮೂರು ಕಡೆ ಏಕಕಾಲದಲ್ಲಿ ಪೋಲೀಸರು ಈ ಕಛೇರಿಗಳಿಗೆ ದಾಳಿ ನಡೆಸಿ ಕಚೇರಿಯಲ್ಲಿ ಮ್ಯಾನೇಜ್ಮೆಂಟ್ ನವರ ವಿಚಾರಣೆ ನಡೆಸಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಹಾಗೂ ಹಣ ಮಾಡುವ ಆಸೆ ನೀಡಿ ವಿಶಿನರಿ ಬುಸಿನೆಸ್  ಟ್ರೈನಿಂಗ್ ಸೆಂಟರ್ (Visionary Business Training centre) ಖುಷಿ ಸಂಪದ, ಮಾಡ್ರನ್ ಸೋಲ್ಸ್(Modern Souls) ಎಂಬ ವಿವಿಧ ಕಂಪನಿಗಳು ಯುವಕರಿಗೆ ವಂಚನೆ ಮಾಡುತ್ತಿದ್ದವು. ಅದರಂತೆ ದಾಳಿ ಮಾಡಿದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು 2 ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಗೂ 9 ಜನರನ್ನ ಪೊಲೀಸರು ಬಂಧಿಸಿದ್ದಾರೆ.

ಆಕರ್ಷಕ ಹೆಸರುಗಳನ್ನು ಇಟ್ಟು ಯುವಕರನ್ನ ತನ್ನತ್ತ ಸೆಳೆಯುವ ನೀಡುವ ಸೆಂಟರ್, ಟ್ರೈನಿಂಗ್ ನೀಡಿ 38 ಸಾವಿರ ರೂಪಾಯಿ ಕಟ್ಟಿಸಿಕೊಂಡು ಕೆಲವು ಬಟ್ಟೆಗಳನ್ನು ನೀಡುತ್ತಿದ್ದಾರೆ. ಆ ಬಟ್ಟೆಗಳನ್ನು ಅವರು ಮೂರು ಮಂದಿಗೆ ಮಾರುವ ಮೂಲಕ ಅವರನ್ನ ಈ ಕಂಪನಿಗೆ ಸೇರಿಸಬೇಕು. ಮೂರು ಮಂದಿಗೆ ಸೇರಿಸಿದವರಿಗೆ ಸಂಬಳ ನೀಡುತ್ತೇವೆ ಎಂದು ಹೇಳಿ, ಹೀಗೆ ಕೆಲಸ, ಸಂಬಳ ತೆಗೋಬಹುದು ಅನ್ನೋ ನಿರೀಕ್ಷೆಗಳೊಂದಿಗೆ ಮೋಸ ಹೋಗಿದ್ದಾರೆ. ಕಳೆದ ಹಲವು ದಿನಗಳಿಂದ ನಿರುದ್ಯೋಗಿಗಳಿಂದ 37 ಸಾವಿರ ರೂಪಾಯಿ ಪಡೆದು ಚೈನ್‌ಲಿಂಕ್ ಮಾರ್ಕೆಟಿಂಗ್‌ಗೆ ದೂಡಲಾಗಿದೆ. 

ಇನ್ನೂ ಕಂಪನಿ ನಿಯಮದಂತೆ ತಲಾ ಮೂವರನ್ನು ಸೇರಿಸಿ ಅವರಿಗೂ ಗೊತ್ತಿಲ್ಲದಂತೆ ಚೈನ್‌ಲಿಂಕ್ ಮಾರ್ಕೆಟಿಂಗ್‌(Chainlink Marketing)ಗೆ ದೂಡಿದ್ದಾರೆ. ಈ ಉದ್ಯೋಗಿಗಳು ಮಾಡಬೇಕಾದ ಕೆಲಸವೇನೆಂದರೆ ಆ ಮೂರು ಜೊತೆ ಬಟ್ಟೆ ಬೇರೆಯವರಿಗೆ ಕೊಟ್ಟು ಕೆಲಸಕ್ಕೆ ಸೇರಿಸುವುದು, ಇದರಿಂದ ಕೆಲವರಿಗೆ ಈ ಚೈನ್ ಲಿಂಕ್ ಮೋಸ ಗೊತ್ತಾಗಿದ್ದು ತಮ್ಮ ಹಣ ವಾಪಸ್ ಕೇಳುತ್ತಿದ್ದಾರೆ. ಕೆಲವರು ತಮ್ಮ ಪೋಷಕರ ಕಣ್ಣು ತಪ್ಪಿಸಿ ಸೇರ್ಪಡೆಯಾಗಿದ್ದಾರೆ. ಅಂತಹ ಯುವಕನೊಬ್ಬ ಈಗ ಹಣ ವಾಪಾಸು ಕೊಡಲಾಗದೆ ಮನೆ ಬಿಟ್ಟು ಓಡಿಹೋಗಿದ್ದಾನೆ. ಇನ್ನೂ ಈ ಸಂಬಂಧ ಯಾವುದೇ ನಿಯಂತ್ರಿತ ಪ್ರಾಧಿಕಾರದ ಅನುಮತಿ ಪಡೆಯದೆ ಕೋಟ್ಯಂತರ ರೂಪಾಯಿ ಸಾರ್ವಜನಿಕರಿಂದ ಹಣವನ್ನ ಠೇವಣಿಯನ್ನಾಗಿ ಸ್ವೀಕರಿಸಿದ್ದಾರೆ.

ಈ ಸಂಬಂಧ 8 ಜನರನ್ನ ಬಂಧಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ. ಖುಷಿ ಸಂಪದ ಹಾಗೂ ವಿಷನರಿ ಬಿಸಿನೆಸ್ ಟ್ರೈನಿಂಗ್ ಸೆಂಟರ್ ವಿರುದ್ದ ಅನ್ ಎಕ್ಸ್ ಪ್ಲೈನಡ್ ಡೆಪಾಸಿಟ್(Unexplained Deposit) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಖುಷಿ ಸಂಪದ ನಟರಾಜ್, ಮಧುಕಿರಣ್, ವರಲಕ್ಷ್ಮೀ ಎಂಬುವವರನ್ನು ಬಂಧಿಸಲಾಗಿದ್ದು ಇವರಿಂದ 5.7 ಲಕ್ಷ  ಹಣ ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹಿಮಾಚಲ ಪ್ರದೇಶದ ರಾಹುಲ್ ಠಾಕೂರ್ ಮಾಡ್ರನ್ ಸೇಲ್ಸ್ ಪ್ರವೇಟ್ ಲಿಮಿಟೆಡ್ ಕಂಪನಿಯ ಗಂಗರಾಜು, ಕೃಷ್ಣ, ಜ್ಯೋತಿ ಎಂಬ ನಾಲ್ಕು ಜನರನ್ನ ಬಂಧಿಸಲಾಗಿದೆ. 

ತುಮಕೂರಿನಲ್ಲಿ ತಲೆಎತ್ತಿದೆ ನಕಲಿ ಚೈನ್ ಲಿಂಕ್ ಕಂಪನಿ, ಉದ್ಯೋಗದ ಹುಡುಕಾಟದಲ್ಲಿರುವವರೇ ಟಾರ್ಗೆಟ್‌!

ಒಟ್ಟಿನಲ್ಲಿ ಉತ್ತರ ಭಾರತದಿಂದ ಕೋಲಾರದ ವರೆಗೂ ಲಿಂಕ್ ಇರುವ ಇರುವ ಈ ಚೈನ್ ಲಿಂಕ್ ಮಾರ್ಕೆಟಿಂಗ್ ಕಂಪನಿಗಳಿಂದ ಸಾವಿರಾರು ಯುವಕರು ಮೋಸ ಹೋಗುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಅಮಾಯಕ ಯುವಕ ಯುವತಿಯವರು ಇಂಥ ಚೈನ್ ಲಿಂಕ್ ಕೈಗಳಿಗೆ ಸಿಲುಕಿ ದಿನನಿತ್ಯ ಸಾವಿರಾರು ಜನ ನರಳುತ್ತಿರುವುದು ದುರಂತವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್