ಪಾರ್ಟಿ ನೆಪದಲ್ಲಿ ಕರೆಸಿ ಹುಡುಗಿಯೊಂದಿಗೆ ಬೆತ್ತಲೆ ವಿಡಿಯೋ ಮಾಡಿಕೊಂಡ್ರು!

By Suvarna NewsFirst Published Nov 3, 2021, 4:12 PM IST
Highlights

* ಪಾರ್ಟಿ ಹೆಸರಿನಲ್ಲಿ ಕರೆದು ಅಶ್ಲೀಲ ವಿಡಿಯೋ ರೆಕಾರ್ಡ್
* ಬಲವಂತವಾಗಿ ಬಟ್ಟೆ ಬಿಚ್ಚಿಸಡಿ ಹುಡುಗಿಯೊಂದಿಗೆ ನಿಲ್ಲಿಸಿದ್ರು
* ಹಣ ಕೊಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಬೆದರಿಕೆ

ಮೀರತ್( ನ. 03) ಮೀರತ್ (Meerut) ನಿಂದ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ.   ಉತ್ತರ ಪ್ರದೇಶದ (Uttar Pradesh) ಮೀರತ್ ನಲ್ಲಿ ಇಬ್ಬರು ಯುವಕರನ್ನು ಬೆತ್ತಲೆಗೊಳಿಸಿ ಹುಡುಗಿಯೊಂದಿಗೆ ಅಶ್ಲೀಲ ರೀತಿಯಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ವಿಡಿಯೋ ಇಟ್ಟುಕೊಂಡು ಮೂರು ಲಕ್ಷ ರು. ಗೆ ( Money) ಆರೋಪಿಗಳು ಬೇಡಿಕೆ ಇಡಲು ಮುಂದಾಗಿದ್ದರು.  ಜಿಲ್ಲೆಯ ಖರ್ಖೌಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರು ಮಂದಿ ಯುವಕರು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.

ಗನ್ ತೋರಿಸಿ ಭಯ  ಹುಟ್ಟಿಸಿದ ತಂಡ ಯುವಕರಿಂದ ಮೊಬೈಲ್ ಫೋನ್ ಮತ್ತು 32,000 ರೂ ನಗದು ದೋಚಿದೆ. ಸಂತ್ರಸ್ತರು   ಖರ್ಖೌಡಾ ಪೊಲೀಸರಿಗೆ ದೂರು ನೀಡಿದ್ದು ಭಾನುವಾರ ರಾತ್ರಿ ಲೋಹಿಯಾನಗರ ಮಂಡಿಯಲ್ಲಿ ಪಾರ್ಟಿ ಕೊಡಿಸುವ ನೆಪದಲ್ಲಿ ಆರು ಮಂದಿ ನಮ್ಮನ್ನು ಕರೆದುಕೊಂಡು ಹೋಗಿದ್ದರು ಎಂದು ಜುಬೇರ್ ಮತ್ತು ಆತನ ಸ್ನೇಹಿತ ಶಹಬಾಜ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಪಾರ್ಟಿ ವೇಳೆ ಎರಗಿದ ತಂಡ ಬಲವಂತವಾಗಿ ಬಟ್ಟೆ ಬಿಚ್ಚಿಸಿದೆ.  ಹುಡುಗಿಯೊಂದಿಗೆ ಯುವಕರ ಪೋಟೋ ಮತ್ತು ವಿಡಿಯೋಈ ರೇಕಾರ್ಡ್ ಮಾಡಿಕೊಂಡಿದೆ. ನಂತರ ಅದನ್ನು ತೋರಿಸಿ ಹಣಕ್ಕೆ ಬೇಡಿಕೆ (Blackmail)  ಇಟ್ಟಿದೆ.

ತನ್ನದೇ ಆಸ್ಪತ್ರೆ ನರ್ಸ್ ವಿಡಿಯೋ ಮಾಡಿಕೊಂಡ ಡಾಕ್ಟರ್

ಮೂರು ಲಕ್ಷ ರು. ನೀಡಲು ಒಪ್ಪಿಕೊಂಡ ಮೇಲೆ ತಂಡ ಅಲ್ಲಿಂದ ಜಾಗ ಖಾಲಿ ಮಾಡಿದೆ.  ಮೊಲದಲಿಗೆ ಪೊಲೀಸರ ಬಳಿ ಹೋದಾಗ ಪೊಲೀಸರೇ  ಆರೋಪಿಗಳ ಪರ ನಿಂತು ಕಾಂಪ್ರಮೈಸ್ ಮಾಡಿಕೊಂಡಿ ಎಂದಿದ್ದಾರೆ ಎನ್ನುವ ಆರೋಪವನ್ನು ಸಂತ್ರಸ್ತರು ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದ ಯಾವ ತಪ್ಪು ಹೆಜ್ಜೆಯೂ ಆಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಇನ್ಸ್ ಪೆಕ್ಟರ್ ಸಂಜಯ್ ಶರ್ಮಾ ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದೆ ಗಜಿಯಾಬಾದ್ ಪೊಲೀಸರು  ಆನ್ ಲೈನ್ (Sextortion Racket) ಸೆಕ್ಸ್ ರಾಕೆಟ್ ಪ್ರಕರಣದ ಮೂಲ ಪತ್ತೆ ಮಾಡಿದ್ದು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನ ಬಂಧನವಾಗಿತ್ತು.

ಆನ್ ಲೈನ್ (Online) ಫ್ಲಾಟ್ ಫಾರ್ಮ್ ನಲ್ಲಿ 'ಸ್ಟ್ರಿಪ್ ಚಾಟ್' ಎಂಬ ಹೆಸರಿನಲ್ಲಿ ಅಶ್ಲೀಲ ಚಿತ್ರ ಪ್ರದರ್ಶನ ಮಾಡಲಾಗುತ್ತಿತ್ತು. ಬೆತ್ತಲೆ (Nude) ವಿಡಿಯೋಗಳನ್ನು ಕಳಿಸಿ, ಲೈವ್ ನಲ್ಲಿ ತೋರಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದರು.  ವ್ಯಕ್ತಿಯೊಬ್ಬ ಎಂಭತ್ತು ಲಕ್ಷ ಕಳೆದುಕೊಂಡು ದೂರು ನೀಡಿದ್ದ. ಸೈಬರ್ ದಳ ಮತ್ತು ನಂದಗ್ರಾಮ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ವಂಚಕರು ಸಿಕ್ಕಿಬಿದ್ದಿದ್ದರು.

ಪ್ರೇಮಿಗಳ ಟಾರ್ಗೆಟ್ ತಂಡ;  ಹೊಸಕೋಟೆ ತಾ. ಹಂದೇನಹಳ್ಳಿಯ ಲೇಔಟ್‌ನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳನ್ನು ಕಾಡುತ್ತಿದ್ದ ತಂಡದ ಕೃತ್ಯವೂ ವರದಿಯಾಗಿತ್ತು. ಏಕಾಂತದಲ್ಲಿದ್ದ ಯುವಕ-ಯುವತಿಯ ವಿಡಿಯೋ ಮಾಡಿ, 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದು ಪ್ರಕರಣ ದಾಖಲಾಗಿತ್ತು.

ಎಚ್ಚರಿಕೆ: ಆನ್ ಲೈನ್ ಅಪ್ಲಿಕೇಶನ್  ಮೂಲಕ  ಗಾಳ ಹಾಕುವ ವಂಚಕರ ಜಾಲ  ನೇರವಾಗಿ ವಿಡಿಯೋ ಕರೆ ಮಾಡುತ್ತೇವೆ.. ಮಾತನಾಡುತ್ತೇವೆ ಎಂದು ನಂಬಿಸುತ್ತದೆ. ಮಾತಿಗೆ ಮರುಳಾಗಿ ಕರೆ ಸ್ವೀಕಾರ ಮಾಡಿದರೆ ಅದನ್ನು ತಮಗೆ ಬೇಕಾದಂತೆ ರೆಕಾರ್ಡ್ ಮಾಡಿಕೊಂಡು ಹಣ ಪೀಕುವ ಜಾಲ ದೊಡ್ಡದಾಗಿದೆ. ಸ್ಮಾರ್ಟ್ ಪೋನ್ ನಲ್ಲಿ ಪ್ರತಿಯೊಂದು ಅಪ್ಲಿಕೇಶನ್ ತುಂಬಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. 

click me!