Gold Smuggling case; ವರ್ಷದ ನಂತರ ಸ್ವಪ್ನ ಸುರೇಶ್‌ಗೆ ಜಾಮೀನು! ಯಾವ ಗ್ರೌಂಡ್ಸ್!

By Suvarna NewsFirst Published Nov 3, 2021, 12:31 AM IST
Highlights

*ಬಹುಕೋಟಿ ಚಿನ್ನದ ಸ್ಮಗ್ಲಿಂಗ್ ಕೇಸ್
* ಕೊನೆಗೂ ಆರೋಪಿ ಸ್ವಪ್ನ ಸುರೇಶ್ ಗೆ ಜಾಮೀನು
*  ಕೇರಳ ಮಾತ್ರವಲ್ಲದೇ ಇಡೀ ಭಾರತದ ಗಮನ ಸೆಳೆದಿದ್ದ ಪ್ರಕರಣ
* ರಾಜತಾಂತ್ರಿಕ ಹುದ್ದೆಯಲ್ಲಿದ್ದ ಸ್ವಪ್ನಾ

ತಿರುವನಂತಪುರ( ನ. 02)  ಕೇರಳ (Kerala)  ಮಾತ್ರವಲ್ಲದೆ ಇಡೀ ಭಾರತದಲ್ಲಿ (India) ಹಲ್ ಚಲ್ ಎಬ್ಬಿಸಿದ್ದ ಚಿನ್ನದ ಸ್ಮಗ್ಲಿಂಗ್ (Gold Smuggling case) ಕೇಸ್ ನಲ್ಲಿ ಮಹತ್ವದ ಬೆಳವಣಿಗೆ ಆಗಿದೆ.  ಪ್ರಮುಖ ಆರೋಪಿ ಸ್ವಪ್ನ ಸುರೇಶ್‌ (Swapna Suresh) ಅವರಿಗೆ ಕೇರಳ ಹೈಕೋರ್ಟ್‌ (Kerala High Court) ಜಾಮೀನು ನೀಡಿದೆ.

ಕೇರಳ ಹೈಕೋರ್ಟ್ ವಿಭಾಗೀಯ ಪೀಠವು ಮಂಗಳವಾರ ಸ್ವಪ್ನ ಸುರೇಶ್ ಹಾಗೂ ಇನ್ನಿತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿ, ಏಳು ಮಂದಿಗೆ ಜಾಮೀನು ಮಂಜೂರು ಮಾಡಿದೆ.  ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್, ಜಸ್ಟೀಸ್ ಕೆ ಜಯ ಚಂದ್ರನ್ ಅವರಿದ್ದ ನ್ಯಾಯಪೀಠವು ಎರ್ನಾಕುಲಂ ಎನ್ಐಎ ಪೀಠವು ಜಾಮೀನು ಅರ್ಜಿ ತಿರಸ್ಕರಿಸಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ಜಾಮೀನು ನೀಡಿದೆ.

ಸ್ವಪ್ನ ಸುರೇಶ್, ಸರೀತ್ ಪಿ.ಎಸ್ ಅಲ್ಲದೆ ಮೊಹಮ್ಮದ್ ಶಫಿ ಪಿ, ಜಲಾಲ್ ಎ. ಎಂ ಹಮ್ಮದ್, ರಮೀಸ್ ಕೆ.ಟಿ, ಶರಾಫುದ್ದೀನ್ ಕೆ, ಮೊಹಮ್ಮದ್ ಅಲಿ ಎಂಬುವರಿಗೂ ಜಾಮೀನು ಸಿಕ್ಕಿದೆ.  25 ಲಕ್ಷ ರು ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಲು ತಿಳಿಸಲಾಗಿದೆ.  ಪಾಸ್ ಪೋರ್ಟ್ ತನಿಖಾಧಿಕಾರಿಗಳ ವಶಕ್ಕೆ ನೀಡಬೇಕು, ಸಾಕ್ಷಿ ನಾಶ ಪಡಿಸುವಂತಿಲ್ಲ, ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಜಾಮೀನಿಗಾಗಿ  ಸ್ವಪ್ನ ಸುರೇಶ್‌ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ಅಕ್ರಮ ಹಣವರ್ಗಾವಣೆ, ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆ, ಕಾನೂನು ಬಾಹಿರ ಆರ್ಥಿಕ ವ್ಯವಹಾರ ಮುಂತಾದ ಆರೋಪ ಎದುರಿಸುತ್ತಿದ್ದಾರೆ. ಸ್ವಪ್ನ ಸುರೇಶ್ ಹಾಗೂ ಇತರೆ ಆರೋಪಿಗಳನ್ನು ಜಾರಿ ನಿರ್ದೇಶನಾಲಯವು ಕಳೆದ ವರ್ಷ ಜುಲೈನಲ್ಲಿ ಬಂಧಿಸಲಾಗಿತ್ತು.

ಕೇರಳ ಸಿಎಂರೊಂದಿಗೆ ನಿಕಟ ಸಂಪರ್ಕ ಒಪ್ಪಿಕೊಂಡ್ರಾ ಸ್ವಪ್ನ

ಎನ್ಐಎ ತನಿಖೆ ಮುಂದುವರೆಸಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ವಪ್ನ ಸುರೇಶ್ ಅವರಿಗೆ ಕೇರಳದ ಸಿಎಂ ಸಚಿವಾಲಯದೊಂದಿಗೂ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಬೆಂಗಳೂರಿನಲ್ಲಿ ಬಲೆಗೆ ಬಿದ್ದಿದ್ದಳು; ಕೇರಳದ ಬಹುಕೋಟಿ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ರನ್ನು  ಎನ್ ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದರು..

ಕುಟುಂಬ ಸಮೇತ ವಶಕ್ಕೆ ಪಡೆದು ಕರೆದೊಯ್ಯಲಾಗುತ್ತಿದೆ. ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ಸರ್ಕಾರಿ ಸಿಬ್ಬಂದಿ ಸ್ವಪ್ನ ಸುರೇಶ್  ಆಗಿದ್ದರು.

ಯೋನಿ ಮತ್ತು ಗುದದ್ವಾರದಲ್ಲಿ 17 ತುಂಡು ಚಿನ್ನ ಬಚ್ಚಿಟ್ಟಿದ್ದ 3 ಮಹಿಳೆಯರು!

ಸರಿತ್, ಸ್ವಪ್ನ ಪ್ರಭ ಸುರೇಶ್, ಫೈಜಲ್ ಫರೀದ್ ಮತ್ತು ಸಂದೀಪ್ ನಾಯರ್ ವಿರುದ್ಧ ಪ್ರಕರಣ ದಾಖಲಾಗಿತ್ತು.  ಕೇರಳ ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಸ್ವಪ್ನ ಸುರೇಶ್ ಕೆಲಸ ಮಾಡುತ್ತಿದ್ದರು.  ಯುಎಇ ರಾಯಭಾರ ಕಚೇರಿಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸರಿತ್ ಕುಮಾರ್ ಬಂಧನ ಮಾಡಿದಾಗ ಅನೇಕರ ಹೆಸರುಗಳು ಹೊರಗೆ ಬಂದಿದ್ದವು. ಕೇರಳದ ಸಿಎಂ ಪಿಣರಾಯಿ ವಿಜಯನ್ ಹೆಸರು ಕೇಳಿ ಬಂದಿತ್ತು. 

click me!