ಕೊಪ್ಪಳ: ಪೊಲೀಸ್ ಅಧಿಕಾರಿಗಳೆಂದು ಹೇಳಿ ಹಣ ವಸೂಲಿ, ಇಬ್ಬರು ಯುವಕರ ಬಂಧನ

By Suvarna News  |  First Published Oct 3, 2021, 3:40 PM IST

*  ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರಿಂದ ಇಬ್ಬರು ಯವಕರ ಬಂಧನ
*  ಸಂಜಯ ಕೊಪ್ಪದ ಹಾಗೂ ಸಂಜು ಛಲವಾದಿ ಬಂಧಿತ ಯುವಕರು
*  ಬಂಧಿತ ಯುವಕರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲು 
 


ಕೊಪ್ಪಳ(ಅ.03): ಪೊಲೀಸ್(Police) ಅಧಿಕಾರಿಗಳೆಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಯುವಕರನ್ನ ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಗದಗ(Gadag) ಮೂಲದ ಸಂಜಯ ಕೊಪ್ಪದ ಹಾಗೂ ನರಗುಂದ(Nargund) ಪಟ್ಟಣದ ಸಂಜು ಛಲವಾದಿ ಬಂಧಿತ ಯುವಕರಾಗಿದ್ದಾರೆ. 

ಇಬ್ಬರೂ ಆಗಸ್ಟ್‌ 15 ರಂದು ಯಲಬುರ್ಗಾದ ಭೀಮೇಶ ಎಂಬುವವರಿಂದ ಬಂಧಿತ ಯುವಕರು ಹಣ ವಸೂಲಿ ಮಾಡಿದ್ದರು. ಭೀಮೇಶ ಅವರು ಬೈಕ್‌ನಲ್ಲಿ ಮುನಿರಾಬಾದ್‌ಗೆ ಹೊರಟಾಗ ಕೊಪ್ಪಳ(Koppal) ಹೊರವಲಯದಲ್ಲಿ ಘಟನೆ ನಡೆದಿದೆ. ತಾವು ಪೊಲೀಸ್ ಅಧಿಕಾರಿಗಳೆಂದು ಸುಳ್ಳು ಹೇಳಿ ವಾಹನ ತಪಾಸಣೆ ಮಾಡಿ ಹಣ ವಸೂಲಿ ಮಾಡಿದ್ದರು.  ಭೀಮೇಶ ಅವರ ಪರ್ಸ್‌ನಲ್ಲಿದ್ದ 1000 ರೂಪಾಯಿ ತೆಗೆದುಕೊಂಡು ಜೊತೆಗೆ ಎಟಿಎಂ ಕಾರ್ಡ್ ಪಿನ್  ಪಡೆದು 1500 ರೂಪಾಯಿ ಡ್ರಾ ಮಾಡಿದ್ದರು ಬಂಧಿತ ಯುವಕರು. 

Latest Videos

undefined

ಹಾವೇರಿ: ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು

ಈ ಕುರಿತು ಭೀಮೇಶ್ ಅವರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಸಂಬಂಧ ತನಿಖೆ ನಡೆಸಿ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂಧಿತ ಯುವಕರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಅಂತ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.
 

click me!