ಬೆಂಗಳೂರು:  ಅಪ್ಸರೆಯರ ಬಳಿ ಮಸಾಜ್ ಮಾಡಿಸಿಕೊಳ್ಳಲು ಕಳ್ಳತನವೇ ಕುಲಕಸುಬು ಮಾಡಿಕೊಂಡಿದ್ದರು

Published : Feb 10, 2022, 11:53 PM ISTUpdated : Feb 10, 2022, 11:58 PM IST
ಬೆಂಗಳೂರು:  ಅಪ್ಸರೆಯರ ಬಳಿ ಮಸಾಜ್ ಮಾಡಿಸಿಕೊಳ್ಳಲು ಕಳ್ಳತನವೇ ಕುಲಕಸುಬು ಮಾಡಿಕೊಂಡಿದ್ದರು

ಸಾರಾಂಶ

* ಮಸಾಜ್ ಮಾಡಿಸಿಕೊಳ್ಳಲು ಮನೆಗಳ್ಳತನ * ಇವರು  ಕೊಟ್ಟು ಬರುತ್ತಿದ್ದ ಟಿಪ್ಸ್  ಕೇಳಿದರೆ ಶಾಕ್ * ಖತರ್ ನಾಕ್ ಮೊಬೈಲ್ ಕಳ್ಳರ ಸೆರೆ * ಮನೆ ಮಾಲೀಕ ಹಲ್ಲೆ ಮಾಡಿದ್ದಾನೆಂದು ಯುವತಿ ಆರೋಪ

ಬೆಂಗಳೂರು(ಫೆ. 10)  ಮಸಾಜ್ ಪಾರ್ಲರ್ ಗೆ (Massage parlor) ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳು ಬಲೆಗೆ ಬಿದ್ದಿದ್ದಾರೆ. ಮಾಡ್ತಾ ಇದ್ದಿದ್ದು(Robbery) ಕಳ್ಳತನ..ಆದ್ರೆ ಮಾಡ್ತಿದ್ದ ಜೀವನ ಮಾತ್ರ ರಾಯಲ್ ಆಗಿತ್ತು. ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದಿದ್ದರು.

ಹೆಣ್ಣು ಮಕ್ಕಳ ಶೋಕಿಗೆ ಬಿದ್ದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮಸಾಜ್ ಪಾರ್ಲರ್ ಹೋಗೊಕೆ ಅಂತಲೇ ಮನೆ ಬೀಗ ಒಡಿಯುತ್ತಿದ್ದರು. ಇಬ್ಬರು ಖತರ್ನಾಕ್ ಮನೆಗಳ್ಳರನ್ನು ವಿಜಯನಗರ ಠಾಣೆ ಪೊಲೀಸರು (Bengaluru Police)  ಬಂಧಿಸಿದ್ದಾರೆ.

ಜಾನ್ ಮೆಲ್ವಿನ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು . ಮಸಾಜ್ ಪಾರ್ಲರ್ ಗೆ ಹೋಗಿ ಇವ್ರು ಕೊಡ್ತಿದ್ದ ಟಿಪ್ಸ್ ಕೇಳಿದ್ರೆ  ಆಘಾತವಾಗಲೇಬೇಕು.  ಅದು ಬಾರಿ ಮಸಾಜ್ ಪಾರ್ಲರ್ ಹೋಗಿ 10 ರಿಂದ 15 ಸಾವಿರ ಟಿಪ್ಸ್ ಕೊಟ್ಟು ಬರುತ್ತಿದ್ದರು. ಬಂಧಿತರಿಂದ 16 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಜೊತೆ ಬೆಳ್ಳಿಯ ಕಾಲು ಚೈನು, ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ

ಬೀದಿ ನಾಯಿಗಳ ಮೇಲೆ ಕಾರು ಹತ್ತಿಸಲು ಆದಿ ಯತ್ನ

ಕೈಯಲ್ಲಿ ಮೊಬೈಲ್ ಹಿಡಿದು ನಡೆದು ಹೋಗೋರೆ ಇವರ ಟಾರ್ಗೆಟ್:  ಕ್ಷಣಮಾತ್ರದಲ್ಲಿ ಕೈಯಿಂದ ಮೊಬೈಲ್ ಕಿತ್ತು ಎಸ್ಕೇಪ್ ಆಗುತ್ತಿದ್ದ ಕಿಲಾಡಿಗಳ ಕತೆ ಇದು. ಕಾಸ್ಟ್ಲಿ ಮೊಬೈಲ್ ನನ್ನೆ ಟಾರ್ಗೆಟ್ ಮಾಡುತ್ತಿದ್ದ ಕಳ್ಳರುಕ್ಷಣಮಾತ್ರದಲ್ಲಿ ಮಾಯವಾಗುತ್ತಿದ್ದರು. ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರನ್ನ ಬಂಧಿಸಿದ ಜೆಜೆ ನಗರ ಪೊಲೀಸರು ಬಂಧಿತರಿಂದ 13 ಲಕ್ಷ 60 ಸಾವಿರ ಮೌಲ್ಯದ 80 ಮೊಬೈಲ್ ಫೋನ್,  ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ ಮುಜಾಹಿದ್, ಮುಬಾರಕ್ ಪಾಷಾ, ಖಾಸಿಫ್ ಖಾನ್ ಬಂಧಿತ ಆರೋಪಿಗಳು.

ಮಾಲೀಕನಿಂದ ಹಲ್ಲೆ ಆರೋಪ:  ಮನೆ ಮಾಲೀಕ ಯುವತಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಮಾಲೀಕ ಅರುಣ್ ಕುಮಾರ್ ಎಂಬಾತ ಸ್ನಿಗ್ಧ ಎಂಬಾಕೆ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನುವುದು ಆರೋಪ.

ಬೆಳಗಿನ ಜಾವ 4 ಗಂಟೆಗೆ ಮನೆಗೆ ಬಂದು ಹಲ್ಲೆ ಮಾಡಿದ್ದಾನೆಂದು ಆರೋಪವನ್ನು ಯುವತಿ ಮಾಡಿದ್ದಾಖೆ. ನನಗೆ ಹಾಗೂ ನನ್ನ ಸ್ನೇಹಿತ ಪ್ರಿಯಮ್ ಎಂಬುವರಿಗೆ ಹಲ್ಲೆ ಮಾಡಿದ್ದಾರೆಂದು ಯುವತಿ  ಹೇಳಿದ್ದಾಳೆ. ಮುಂಜಾನೆ 4 ಗಂಟೆಗೆ ಮಾಲೀಕ ಮನೆ ಬಾಗಿಲು ಬಡಿದು ನನ್ನ ಹೆಸರಿಟ್ಟು ಕರೆದಿದ್ದಾನೆ. ಡೋರ್ ಓಪನ್ ಮಾಡ್ತಿದ್ದಂತೆ ಮುಖಕ್ಕೆ ಪಂಚ್ ಮಾಡಿದ್ದಾನೆ. ಏಕಾಏಕಿ ಹೊಡೆದಿದ್ದಾನೆಂದು ವಿಡಿಯೋ ಮಾಡಿ ಟ್ವೀಟ್ ಮಾಡಿದ್ದಾಳೆ.  ಹುಳಿಮಾವು ಠಾಣಾ ವ್ಯಾಪ್ತಿಯ ಕೆಂಪಮ್ಮ ಲೇಔಟ್ ನಲ್ಲಿ ಘಟನೆ ನಡೆದಿದೆ. 

ಇಂಜಿನ್ ಆಯಿಲ್ ಸೋರುತ್ತಿದೆ ಎಂದು ನಂಬಿಸಿದರು:  ವ್ಯಕ್ತಿಯ ಗಮನ ಬೇರೆಡೆ ಸೆಳೆದು .10 ಲಕ್ಷ ಕಳ್ಳತನ ಮಾಡಿದ್ದರು.  ವಿಜಯಪುರದ ಬಿಎಲ್‌ಡಿಇ ರಸ್ತೆಯ ಎಕ್ಸಿಸ್‌ ಬ್ಯಾಂಕ್‌ ಬಳಿ  ಘಟನೆ ನಡೆದಿತ್ತು.

ನಿಂಗರಾಜ ನಾಶಿ ಹಣ ಕಳೆದುಕೊಂಡವರು. ನಿಂಗರಾಜ ಅವರು ಎಕ್ಸಿಸ್‌ ಬ್ಯಾಂಕ್‌ನಿಂದ .10 ಲಕ್ಷ ತೆಗೆದುಕೊಂಡು ಕಾರ್‌ನಲ್ಲಿ  ಇಟ್ಟುಕೊಂಡು ತೆರಳಲು ಅಣಿಯಾಗಿದ್ದರು. ಆಗ ಕಾರ್‌ನ ಎಂಜಿನ್‌ನಿಂದ ಆಯಿಲ್‌ ಸೋರುತ್ತಿದೆ ಎಂದು ಗಮನ ಸೆಳೆದರು. ಆಗ ಆಯಿಲ್‌ ನೋಡಲು ಹಣದ ಬ್ಯಾಗ್‌ ಕಾರಿನ ಸೀಟಿನಲ್ಲಿಟ್ಟು ನಿಂಗರಾಜ ಕಾರಿನಿಂದ ಕೆಳಗಿಳಿದು ನೋಡಲು ಹೋದಾಗ ಕಾರಿನ ಸೀಟಿನಲ್ಲಿದ್ದ .10 ಲಕ್ಷ ಕಳ್ಳತನ ಮನಾಡಿ ಪರಾರಿಯಾಗಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ