* ನಿಲ್ಲದ ಉದ್ಯಮಿ ಮೊಮ್ಮಗ ಆದಿ ಪುಂಡಾಟ
* ಮತ್ತೆ ಶ್ವಾನದ ಮೇಲೆ ಕಾರು ಹತ್ತಿಸಲು ಯತ್ನ
* ಪ್ರಶ್ನೆ ಮಾಡಿದವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದ
ಬೆಂಗಳೂರು( ಫೆ. 10) ಈ ಉದ್ಯಮಿ ಮಗನ ಪುಂಡಾಟಕ್ಕೆ ಬ್ರೇಕ್ ಇಲ್ಲ. ಬೀದಿ ಬದಿ ನಾಯಿಗಳ (Dog) ಕಂಡರೆ ಈತನಿಗೆ ಏನೂ ಆಗುತ್ತದೆಯೋ ಗೊತ್ತಿಲ್ಲ. ಮತ್ತೆ ರಸ್ತೆಯಲ್ಲಿ ಬೀದಿನಾಯಿಗಳ ಜತೆ ಆದಿಕೇಶವಲು ಮೊಮ್ಮಗ ಆದಿ ಜಗಳ ಕಾದಿದ್ದಾನೆ. ಬೀದಿ ನಾಯಿಗಳ ಮೇಲೆ ಮತ್ತೆ ಕಾರು (Car) ಹತ್ತಿಸಲು ಯತ್ನಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಂಗಳವಾರ ರಾತ್ರಿ ಜಯನಗರ (Jayanagar) ಮೊದಲ ಬ್ಲಾಕ್ ನಲ್ಲಿ ಘಟನೆ ನಡೆದಿದೆ. ಬೀದಿ ನಾಯಿಗಳ ಮೇಲೆ ಹಲ್ಲೆ ಮತ್ತು ಕಾರು ಹತ್ತಿಸಲು ಯತ್ನಿಸಿರುವ ಆರೋಪ ಕೇಳಿಬಂದಿದೆ ಇದನ್ನ ಪ್ರಶ್ನೆ ಮಾಡಿದ ಸ್ಥಳೀಯರ ಮೇಲೂ ಕಾರು ಹತ್ತಿಸಿ ಹಲ್ಲೆ ಮಾಡಲು ಮುಂದಾಗಿದ್ದಾನೆ.
ನಂತರ ಸ್ಥಳೀಯರ ಮೇಲಿನ ಕೋಪಕ್ಕೆ ಕಾರಿನ ಗ್ಲಾಸ್ ಒಡೆದು ಹಾಕಿರುವ ಆರೋಪ ಬಂದಿದೆ ವಿಷಯ ತಿಳಿದು ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಬರುವಷ್ಟರದಲ್ಲಿ ಆರೋಪಿ ಎಸ್ಕೇಪ್ ಆಗಿದ್ದಾನೆ.
ಲಾರಾ ಎಂಬ ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದ ದೃಶ್ಯಾವಳಿ ಸೆರೆಯಾಗಿತ್ತು. ಶ್ವಾನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿತ್ತು. ದೂರು ನೀಡಿದರೂ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆ ಬದಿ ಮಲಗಿದ್ದ ಬೀದಿ ನಾಯಿ (Dog) ಮೇಲೆ ಕಾರು ಹತ್ತಿಸಿ ಸಾಯಿಸಲು ಯತ್ನಿಸಿದ್ದ ಪ್ರಕರಣ ಸಂಬಂಧ ಉದ್ಯಮಿ ದಿವಂಗತ ಆದಿಕೇಶವಲು (Adikesavalu ) ಅವರ ಮೊಮ್ಮಗ ಆದಿಯನ್ನು ಬಂಧಿಸಿದ್ದ ಸಿದ್ದಾಪುರ ಠಾಣೆ (Bengaluru Police) ಪೊಲೀಸರು ವಿಚಾರಣೆ ನಡೆಸಿ ಠಾಣಾ ಬೇಲ್ ಮೇಲೆ ಬಿಡುಗಡೆ ಮಾಡಿದ್ದರು. ಶ್ವಾನ ಸಾವನ್ನಪ್ಪಿದ್ದು ಅಂತ್ಯ ಕ್ರಿಯೆಯಲ್ಲಿ ಮೋಹಕ ತಾರೆ ರಮ್ಯಾ ಪಾಲ್ಗೊಂಡು ಆಕ್ರೋಶ ಹೊರ ಹಾಕಿದ್ದರು.
ಜ.26ರಂದು ಸಂಜೆ 6.15ರಲ್ಲಿ ಜಯನಗರ 1ನೇ ಬ್ಲಾಕ್ 10ನೇ ‘ಬಿ’ ಮುಖ್ಯರಸ್ತೆಯ ಮನೆ ಎದುರಿನ ಪಾದಚಾರಿ ಮಾರ್ಗದ ಪಕ್ಕದಲ್ಲಿ ಬೀದಿ ನಾಯಿ ಮಲಗಿತ್ತು. ಈ ವೇಳೆ ಆದಿ ಐಷಾರಾಮಿ ಬಿಳಿ ಬಣ್ಣದ ಆಡಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಮಲಗಿದ್ದ ಬೀದಿ ನಾಯಿ ಮೇಲೆ ಹತ್ತಿಸಿ ಸಾಯಿಸಲು ಯತ್ನಿಸಿದ್ದ. ಕಾರು ನಾಯಿಯ ಮೇಲೆ ಹರಿದ ಪರಿಣಾಮ ನಾಯಿ ಗಾಯಗೊಂಡಿತ್ತು.
Animal Cruelty : ಶ್ವಾನದ ಮೇಲೆ ಕಾರು ಹತ್ತಿಸಿದ ಆದಿ ಬಂಧನ, ಕೆಲ ಹೊತ್ತಲ್ಲೆ ಬಿಡುಗಡೆ
ಮೊಬೈಲ್ ನೋಡ್ತಿದ್ದೆ: ಕಾರು ಚಲಾಯಿಸುವಾಗ ಮೊಬೈಲ್ ನೋಡುತ್ತಿದ್ದೆ. ಈ ವೇಳೆ ಕಾರಿನ ಚಕ್ರ ನಾಯಿ ಮೇಲೆ ಹರಿದಿದೆ ಎಂದು ಆರೋಪಿ ಆದಿ ವಿಚಾರಣೆ ವೇಳೆ ಹೇಳಿದ್ದ.
Cynophobia (ಶ್ವಾನಗಳ ಕಂಡರೆ ಭಯ): ಕೆಲವರು ಈ ಫೋಬಿಯಾವನ್ನು ಅನುಭವಿಸುತ್ತಾರೆ. ನಾಯಿಗಳನ್ನು ಕಂಡಾಗ ಭಯ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ನಾಯಿಗಳು ಇರುವ ಜಾಗದಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಲು ನೋಡುತ್ತಾರೆ.
ನಾಯಿಗಳು ಬೊಗಳುವುದನ್ನು ಕೇಳಿದರೆ, ನಾಯಿಗಳನ್ನು ನೋಡುವುದರಿಂದ, ಶ್ವಾನದ ಚಿತ್ರ ನೋಡುವುದರಿಂದ..ಅವುಗಳಿಗೆ ಸಂಬಂಧಿಸಿದ ಸಿನಿಮಾ ನೋಡುವುದರಿಂದ, ನಾಯಿಗಳ ಬಗ್ಗೆ ಆಲೋಚನೆ ಮಾಡುವುದರಿಂದ ಈ ಫೋಬಿಯಾ ಜಾಗೃತವಾಗಬಹುದು.
ಈ ಫೋಬಿಯಾಕ್ಕೆ ಒಳಗಾದವರು ಕೂಗುವುದು, ಅರಚಾಡುವುದು ಮಾಡಬಹುದು. ತಲೆ ನೋವು ಅನುಭವಿಸಬಹುದು. ಮೈ ಬೆವರುವಿಕೆ ಉಂಟಾಗಬಹುದು. ಹೃದಯ ಸಂಬಂಧಿ ತೊಂದರೆ ಅಪರೂಪದ ಸಂದರ್ಭ ಕಾಣಿಸಿಕೊಳ್ಳಬಹುದು. ಉಸಿರಾಟ ಸಮಸ್ಯೆ, ವಾಂತಿ ಕಾಣಿಸಿಕೊಳ್ಳಬಹುದು.
ನಾಯಿಗಳ ಬಗ್ಗೆ ಪ್ರೀತಿಯ ಭಾವನೆ ಬೆಳೆಸಿಕೊಳ್ಳುವುದುದು, ಮನಸಿನಲ್ಲಿಯೇ ಕಲ್ಪನೆ ಮಾಡಿಕೊಂಡು ಅವುಗಳೊಂದಿಗೆ ಆಡುವುದು.. ಶ್ವಾನಗಳ ಆಟವನ್ನು ದೂರದಿಂದ ನಿಂತು ನೋಡುವುದು.. ಶ್ವಾನಗಳಿಗೆ ಹತ್ತಿರವಾಗಲು ಬಯಸುವುದು ಪರಿಹಾರದ ಒಂದು ಥೆರಫಿಯಾಗಿದೆ .