ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿ ಹತ್ಯೆ| ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಿನಸಿ ತಾಂಡಾದಲ್ಲಿ ನಡೆದ ಘಟನೆ| ದ್ವೇಷದಿಂದ ಕೊಲೆ ಮಾಡಿರುವ ಶಂಕೆ| ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಕಲಬುರಗಿ(ಅ.03): ಮನೆಗೆ ನುಗ್ಗಿದ ದುಷ್ಕರ್ಮಿಗಳು ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದ ಜಿಲ್ಲೆಯ ಕಮಲಾಪುರ ತಾಲೂಕಿನ ದಿನಸಿ ತಾಂಡಾದಲ್ಲಿ ನಿನ್ನೆ(ಶುಕ್ರವಾರ) ತಡರಾತ್ರಿ ನಡೆದಿದೆ. ಮಾರುತಿ ದೇವಲಾ ಜಾಧವ್ (45), ಪತ್ನಿ ಶಾರದಾಬಾಯಿ (35) ಎಂಬುವವರೇ ಕೊಲೆಯಾದ ನತದೃಷ್ಟ ದಂಪತಿಗಳಾಗಿದ್ದಾರೆ.
ಮೃತ ದಂಪತಿಗೆ ಆರು ಜನ ಪುತ್ರಿಯರು, ಓರ್ವ ಪುತ್ರನಿದ್ದಾನೆ. ಕೆಲ ದಿನಗಳ ಹಿಂದೆ ಇವರ ಓರ್ವ ಪುತ್ರಿಯೊಂದಿಗೆ ತಾಂಡಾದ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಯುವಕನ ವಿರುದ್ಧ ಮಾರುತಿ ದೇವಲಾ ಪೊಲೀಸರಿಗೆ ದೂರು ಸಹ ನೀಡಿದ್ದರು ಎನ್ನಲಾಗಿದೆ.
ಡ್ರಗ್ಸ್ ನಶೆಯಲ್ಲಿ ಪತ್ನಿ-ನಾದಿನಿ ಕೊಂದು ಶವಸಂಭೋಗ ಮಾಡಿದ!
ಇದೇ ದ್ವೇಷದಿಂದ ತಂದೆ-ತಾಯಿ ಇಬ್ಬರನ್ನೂ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಭೇಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.