* ಲಾರಿ- ಕಾರು ನಡುವೆ ಭೀಕರ ಅಪಘಾತ
* ಒಂದೇ ಕುಟುಂಬದ ಮೂವರು ಬಲಿ
* ರಂಜಾನ್ ಹಬ್ಬದ ದಿನವೇ ದುರಂತ ಕಂಡ ಕುಟುಂಬ
ತುಮಕೂರು, (ಮೇ.03): : ಲಾರಿ- ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನಪ್ಪಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬಿಸೇಗೌಡನದೊಡ್ಡಿಯಲ್ಲಿ ನಡೆದಿದೆ.
ರಂಜಾನ್ ದಿನವೇ ಮುಸ್ಲಿಂ ಕುಟುಂಬದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚನ್ನಪಟ್ಟಣ ಮೂಲದ ಸೈಯದ್ ಮೊಹಮ್ಮದ್ ನಜ್ಮಿ (42) ನಾಜೀಯಾ (30), ಸೈಯದ್ ಹಸ್ಸಿ (8) ಮೃತ ದುರ್ದೈವಿಗಳು. ಮತ್ತೊಂದು ಮಗು ಕಾಸಿ (6) ಗಂಭೀರ ಗಾಯಗೊಂಡಿದೆ. ಗಾಯಾಳು ಕಾಸಿಯನ್ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದ ಗಂಡನ ಮರ್ಡರ್: ಕೊಲೆ ಮಾಡಿ ನಾಟಕ ಮಾಡಿದ್ದಳು ದಿಲ್ಲಿ ರಾಣಿ
ಸೈಯದ್ ಮೊಹಮ್ಮದ್ ನಜ್ಮಿ ರಂಜಾನ್ ಹಬ್ಬ ಮುಗಿಸಿ ಕುಟುಂಬ ಸಮೇತ ತನ್ನ ಪತ್ನಿಯ ತವರೂರು ಭದ್ರಾವತಿಗೆ ಕಾರಿನಲ್ಲಿ ತೆರಳುತ್ತಿದ್ರು. ಈ ವೇಳೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಬಿಸೇಗೌಡನ ದೊಡ್ಡಿ ಬಳಿ ಬರುತ್ತಿದ್ದಂತೆ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸ್ಥಳಕ್ಕೆ ಅಮೃತೂರು ಸಿಪಿಐ ಹಾಗೂ ಹುಲಿಯೂರುದುರ್ಗ ಪಿಎಸ್ ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.