ಸೊಸೆ ತಂದ ಸೌಭಾಗ್ಯ, ಗಂಡನ ಇಡೀ ಕುಟುಂಬಕ್ಕೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್‌!

Published : Jun 12, 2023, 07:17 PM ISTUpdated : Jun 12, 2023, 07:18 PM IST
ಸೊಸೆ ತಂದ ಸೌಭಾಗ್ಯ, ಗಂಡನ ಇಡೀ ಕುಟುಂಬಕ್ಕೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್‌!

ಸಾರಾಂಶ

Rajasthan: ಮದುವೆಯಾದ ಎರಡೇ ತಿಂಗಳಿಗೆ ಯುವತಿಯೊಬ್ಬಳು ಗಂಡನ ಇಡೀ ಕುಟುಂಬದವರಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್‌ ಆಗಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ.  

ನವದೆಹಲಿ (ಜೂ.12): ಸಾಮಾನ್ಯವಾಗಿ ಕುಟುಂಬದಲ್ಲಿ ವಿವಾಹವಾದಾಗ, ಬಂದ ಹೊಸ ಸೊಸೆ ಯಾವ ರೀತಿ ಅಡುಗೆ ಮಾಡ್ತಾಳೆ ಅನ್ನೋ ಕುತೂಹಲ ಎಲ್ಲರಲ್ಲಿರುತ್ತದೆ. ಕುಟುಂಬದವರು ಕೂಡ ಹೊಸ ಸೊಸೆ ಮಾಡಿದ ಅಡುಗೆಯನ್ನು ಸವಿಯಬೇಕು ಎನ್ನುವ ಹಂಬದಲ್ಲಿರುತ್ತಾರೆ. ಆದರೆ, ರಾಜಸ್ಥಾನದಲ್ಲಿ ಇದೇ ಆಸೆ ಇಡೀ ಕುಟುಂಬದ ಮೇಲೆ ಮಾರಣಾಂತಿಕವಾಗಿ ಪರಿಣಮಿಸಿದೆ. ತನ್ನ ಅತ್ತೆ, ಮಾವ, ಮೈದುನ, ಅತ್ತಿಗೆ, ನಾದಿನಿಯರಿಗೆ ಮಾಡಿ ಬಡಿಸಿದ ಆಹಾರದಲ್ಲಿ ಹೊಸ ಸೊಸೆ ನಿದ್ರೆ ಮಾತ್ರೆ ಹಾಕಿದ್ದಾಳೆ. ಊಟ ಮಾಡಿ ಇಡೀ ಕುಟುಂಬ ನಿದ್ರೆ ಮಂಪರಿಗೆ ಜಾರಿದ ಬಳಿಕ ಮನೆಯಿಂದ ಎಸ್ಕೇಪ್‌ ಆಗಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ. ಬೆಳಗ್ಗೆ ಸೂರ್ಯ ನೆತ್ತಿ ಮೇಲೆ ಬಂದರೂ ಇಡೀ ಕುಟುಂಬದಲ್ಲಿ ಯಾರೊಬ್ಬರೂ ಮನೆಯಿಂದ ಹೊರಬರದ ಹಿನ್ನಲೆಯಲ್ಲಿ ಅಕ್ಕಪಕ್ಕದ ಮನೆಯವರು ಬಂದು ಗಮನಿಸಿದಾಗ ಕುಟುಂಬದ ಇಡೀ ಸದಸ್ಯರು ಅರೆಪ್ರಜ್ಞಾವಸ್ಥೆಯಲ್ಲಿರೋದು ಕಂಡು ಬಂದಿದೆ. ಭರತ್‌ಪುರದ ನಿವಾಸಿಯಾಗಿರುವ ಕಾಳಿಚರಣ್‌ ಎರಡು ತಿಂಗಳ ಹಿಂದೆ ತಮ್ಮ ಪುತ್ರ ಕೃಷ್ಣನ ಮದುವೆಯನ್ನು ಚಿಕ್ಸಾನಾ ಗ್ರಾಮದ ಸುಮನ್‌ ಎನ್ನುವ ಹುಡುಗಿಯ ಜೊತೆ ಎರಡು ತಿಂಗಳ ಹಿಂದೆ ಮಾಡಿದ್ದರು. ಮದುವೆಯಾದ ಬಳಿಕ ಹೊಸ ಸೊಸೆ ಎಲ್ಲರ ಜೊತೆಗೂ ಹೊಂದಿಕೊಂಡು ಸುಖವಾಗಿ ಬದುಕು ಸಾಗಿಸುತ್ತಿದ್ದಳು.

ಕೇವಲ ಎರಡೇ ತಿಂಗಳಲ್ಲಿ ಸುಮನ್‌ ಇಡೀ ಮನೆಯವರ ನೆಚ್ಚಿನ ಸೊಸೆಯಾಗಿದ್ದಳು. ಮನೆಯ ಎಲ್ಲಾ ವಿಚಾರಗಳಿಗೂ ಸುಮನ್‌ರನ್ನೇ ಕೇಳೋದು ನಡೆದಿತ್ತು. ಅದರಲ್ಲೂ ಆಕೆ ಮಾಡೋ ಅಡುಗೆ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇದಕ್ಕಾಗಿ ಕುಟುಂಬದ ಸದಸ್ಯರು, ಸುಮನ್‌ಗೆ ಕೋಫ್ತಾ ಕರಿ ಮಾಡುವಂತೆ ಹೇಳಿದ್ದರು. ಸುಮನ್‌ ಮಾಡಿದ್ದ ಕೋಫ್ತಾ ಕರಿಯನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂದಿದ್ದರು. ಆದರೆ, ಸ್ವತಃ ಸುಮನ್‌ ಮಾತ್ರವೇ ಈ ಆಹಾರ ಸೇವಿಸಿರಲಿಲ್ಲ. ಊಟ ಮಾಡಿದ ಬಳಿಕ ಎಲ್ಲರಿಗೂ ಗಡದ್ದಾಗಿ ನಿದ್ರೆ ಬಂದಿದೆ.

ಬೆಳಗ್ಗೆ ಸೂರ್ಯ ನೆತ್ತಿ ಮೇಲೆ ಬಂದಿದ್ದರೂ ಯಾರೊಬ್ಬರೂ ಕೂಡ ಎದ್ದಿರಲಿಲ್ಲ. ಅಕ್ಕಪಕ್ಕದ ಮನೆಯವರು ಮನೆಗೆ ಹೋದಾಗ, ಇಡೀ ಕುಟುಂಬದವರು ಪ್ರಜ್ಞೆಯಿಲ್ಲದೆ ಮಲಗಿಕೊಂಡಿರುವುದು ಗೊತ್ತಾಗಿದೆ. ಮನೆಯ ಬಾಗಿಲನ್ನು ಒಡೆದು ಒಳಹೊಕ್ಕಿದ್ದಲ್ಲದೆ, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಕೇಳಿದಾಗ, ರಾತ್ರಿ ಸೊಸೆ ಮಾಡಿದ್ದ ಅಡುಗೆಯನ್ನು ತಿಂದ ಬಳಿಕ ಎಲ್ಲರಿಗೂ ಚೆನ್ನಾಗಿ ನಿದ್ರೆ ಬಂದಿದೆ ಎಂದು ತಿಳಿಸಿದ್ದಾರೆ. ಆದರೆ, ಸುಮನ್‌ ಮಾತ್ರ ಪತ್ತೆಯಿರಲಿಲ್ಲ. ರಾತ್ರಿಯೇ ಆಕೆ ಮನೆಯಿಂದ ಎಸ್ಕೇಪ್‌ ಆಗಿದ್ದಾರೆ. ಇನ್ನೂ ಕೂಡ ಸುಮನ್‌ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಕುಟುಂಬಕ್ಕೆ ಗೊತ್ತಾಗಿಲ್ಲ.

ಹನಿಮೂನ್‌ ಮೂಡ್‌ನಲ್ಲಿದ್ದ ಹುಡುಗ ರಾತ್ರಿ ಬೆಳಗಾಗುವಷ್ಟರಲ್ಲಿ ಅಣ್ಣನಾಗಿ ಹೋದ!

ರಾಜಸ್ಥಾನದಲ್ಲಿ ದರೋಡೆಕೋರ ವಧು ಈ ರೀತಿ ತನ್ನ ಗಂಡನ ಮನೆಯಿಂದ ಪರಾರಿಯಾಗಿರುವುದು ಇದೇ ಮೊದಲಲ್ಲ. ಪೊಲೀಸ್ ಅಂಕಿಅಂಶಗಳ ಪ್ರಕಾರ, ರಾಜಸ್ಥಾನದಲ್ಲಿ ಪ್ರತಿ ತಿಂಗಳು ಸರಾಸರಿ 4 ಇಂತಹ ಪ್ರಕರಣಗಳು ವರದಿಯಾಗುತ್ತವೆ. 

ಮಾವನ 3 ಕಂಡೀಷನ್‌ ಕೇಳಿ, 'ನಿನ್‌ ಮಗಳೇ ಬೇಡ..' ಎಂದು ಎಸ್ಕೇಪ್‌ ಆದ ವರ!

ಕಾಳಿಚರಣ್‌ ಜಾತವ್‌ ಅವರ ಪುತ್ರ ಕೃಷ್ಣ ಹಾಗೂ ಸುಮನ್‌ ಅವರ ವಿವಾಹ ಏಪ್ರಿಲ್‌ 24 ರಂದು ನಡೆದಿತ್ತು. ಕುಟುಂಬದವರು ಮಾತ್ರವಲ್ಲದೆ, ಸ್ವತಃ ತನ್ನ ಪತಿಗೂ ಕೂಡ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಾಳೆ. ಮನೆಯವರೆಲ್ಲರೂ ಪ್ರಜ್ಞೆ ತಪ್ಪಿರುಉದನ್ನು ಗಮನಿಸಿದ  ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯೇ ಅವರೆಲ್ಲರ ಚಿಕಿತ್ಸೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ