ಸ್ನಾನ ಮಾಡಲೆಂದು ನದಿಗೆ ತೆರಳಿದ್ದ ಇಬ್ಬರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ. ಕಾರಜೋಳ ಗ್ರಾಮದ ಸುದೀಪ(ಪಪ್ಪು)ದೊಡ್ಡಮನಿ(12), ಶ್ರೀಧರ ದೊಡ್ಡಮನಿ (10) ಎಂದು ಬಾಲಕರು ನದಿಪಾಲಾದ ಬಾಲಕರು.
ವಿಜಯಪುರ (ಏ.8): ಸ್ನಾನ ಮಾಡಲೆಂದು ನದಿಗೆ ತೆರಳಿದ್ದ ಇಬ್ಬರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ.
ಕಾರಜೋಳ ಗ್ರಾಮದ ಸುದೀಪ(ಪಪ್ಪು)ದೊಡ್ಡಮನಿ(12), ಶ್ರೀಧರ ದೊಡ್ಡಮನಿ (10) ಎಂದು ಬಾಲಕರು ನದಿಪಾಲಾದ ಬಾಲಕರು.
ಯುಗಾದಿ ಅಮಾವಾಸ್ಯೆ ಹಿನ್ನೆಲೆ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ನಡೆದಿತ್ತು. ಕಾರಜೋಳ ಗ್ರಾಮದಿಂದ ಕೃಷ್ಣಾ ನದಿಗೆ ದೇವಿಯ ಪಲ್ಲಕ್ಕಿ ಹೊತ್ತು, ದೇವಿಯ ಸ್ನಾನ ಮಾಡಿಸಿಕೊಂಡು ಬರಲು ತೆರಳಿದ್ದ ಗ್ರಾಮಸ್ಥರು. ಈ ವೇಳೆ ಪಲ್ಲಕ್ಕಿಯ ಹಿಂದೆ ತಂದೆ-ತಾಯಿ ಹಿಂದೆ ತೆರಳಿದ್ದ ಮೃತ ಬಾಲಕರು. ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಸ್ನಾನ ಮಾಡಲು ಇಳಿದು ನದಿ ಪಾಲಾಗಿರುವ ಬಾಲಕರು.
ಕಲಬುರಗಿ: ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ನಡೆಸಿದ ಪುಂಡರು!
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಬಾಲಕರ ಶವ ಹೊರಕ್ಕೆ ತೆಗೆದಿದ್ದಾರೆ.ಕೊಲ್ಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ.