Koppal: ವಿದ್ಯುತ್ ಅವಘಡಕ್ಕೆ ತಾಯಿ, ಮಕ್ಕಳು ಸೇರಿ ಮೂವರ ಬಲಿ

By Govindaraj S  |  First Published May 6, 2022, 8:31 PM IST

ಅದೊಂದು ಮೂರು‌ ಮಕ್ಕಳಿದ್ದ ಮುದ್ದಾದ ಕುಟುಂಬ. ಆದರೆ ಇಂದು ವಿಧಿ ಆಟದಿಂದಾಗಿ ಆ ಕುಟುಂಬದಲ್ಲಿ ತಾಯಿ ಸೇರಿ ಇಬ್ಬರು ಮಕ್ಕಳು ಹೆಣವಾಗಿದ್ದಾರೆ.‌ ಅಷ್ಟಕ್ಕೂ ಏನಿದು ತಾಯಿ ಮಕ್ಕಳ ಸಾವಿನ ಕಥೆ? ಎಲ್ಲಿ ನಡೆದಿರೋದು ಈ ಘಟನೆ ಅಂತೀರಾ?


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಮೇ.06): ಅದೊಂದು ಮೂರು‌ ಮಕ್ಕಳಿದ್ದ ಮುದ್ದಾದ ಕುಟುಂಬ. ಆದರೆ ಇಂದು ವಿಧಿ ಆಟದಿಂದಾಗಿ ಆ ಕುಟುಂಬದಲ್ಲಿ (Family) ತಾಯಿ ಸೇರಿ ಇಬ್ಬರು ಮಕ್ಕಳು ಹೆಣವಾಗಿದ್ದಾರೆ.‌ ಅಷ್ಟಕ್ಕೂ ಏನಿದು ತಾಯಿ ಮಕ್ಕಳ ಸಾವಿನ ಕಥೆ? ಎಲ್ಲಿ ನಡೆದಿರೋದು ಈ ಘಟನೆ ಅಂತೀರಾ? ಹಾಗಾದರೆಈ ರಿಪೋರ್ಟ್ ನೋಡಿ.

Tap to resize

Latest Videos

ಎಲ್ಲಿ ವಿದ್ಯುತ್ ಅವಘಡ ಸಂಭವಿಸಿರುವುದು: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ‌ ಇಂದು ನಡೆಯಬಾರದ ಘಟನೆಯೊಂದು ನಡೆದಿದೆ. ಈ ಘಟನೆ ಕೇಳಿದರೆ ನೀವು ಬೆಚ್ಚಿ ಬಿಳೋದು ಗ್ಯಾರಂಟಿ. ಹೌದು ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಇಂದು ವಿದ್ಯುತ್ ಅವಘಡವೊಂದು (Electric Shock) ಸಂಭವಿಸಿದರ ಪರಿಣಾಮಾಗಿ ತಾಯಿ, ಇಬ್ಬರು ಮಕ್ಕಳು ಸೇರಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ (Death).

ಯಾರು ಸಾವನ್ನಪ್ಪಿರುವುದು: ಹುಲಿಹೈದರದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಉಮೇಶ ಹಾಗು ಶೈಲಾಜರಿಗೆ ಒಟ್ಟು ಮೂರು ಮಕ್ಕಳು. ಇವರಲ್ಲಿ ಈ ಘಟನೆಯಲ್ಲಿ ಉಮೇಶ್ ಪತ್ನಿ 28 ವರ್ಷದ  ಶೈಲಜಾ, 2 ವರ್ಷದ ಮಗ ಪವನ ಹಾಗೂ 3 ವರ್ಷದ ಮಗಳು ಸಾನ್ವಿ ಸಾವನ್ನಪ್ಪಿದ್ದಾರೆ.

ಕೊಪ್ಪಳದ 60 ಗ್ರಾಮ ಎಣ್ಣೆ ಮುಕ್ತ, ಮಾರಿದ್ರೆ ಬೀಳುತ್ತೆ ದಂಡ

ಮೂವರು ಸಾವನ್ನಪ್ಪಲು ಕಾರಣ: ಇಂದು ಮುಂಜಾನೆಯ ವೇಳೆ ಉಮೇಶ ಕೆಲಸಕ್ಕೆ ಹೋಗಿದ್ದಾರೆ. ಶೈಲಾಜ ಬಟ್ಟೆ ತೊಳೆಯಲು ಹೊರಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಸಾನ್ವಿ ಎಂಬ ಮೂರು ವರ್ಷದ ಮಗು ವಿದ್ಯುತ್ ಅನ್ನು ಹಿಡಿದಿದ್ದಾಳೆ. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿದೆ. ಆಗ ತಾಯಿ ಶೈಲಾಜ ಬಂದು ಮಗಳನ್ನು ಬಿಡಿಸಲು ಹೋಗಿದ್ದರಿಂದ ಆಕೆಗೆ. ತಾಯಿಯನ್ನು ಹಿಡಿದುಕೊಂಡಿದ್ದ ಇನ್ನೊಬ್ಬ ಮಗ ಪವನಗೂ ಸಹ ವಿದ್ಯುತ್ ಪ್ರವಹಿಸಿದೆ. ಇದರಿಂದಾಗಿ ಮೂವರು ಸಾವನ್ಮಪ್ಪಿದ್ದಾರೆ.

ಸ್ಥಳೀಯರ ಧೈರ್ಯದಿಂದ‌ ಉಳಿಯಿತು ಮಗುವಿನ ಪ್ರಾಣ: ಇನ್ನು ಉಮೇಶ್ ಆಟೋ ಚಾಲಕನಾಗಿದ್ದು, ಆತ ಬಾಡಿಗೆಗೆ ಬೇರೆ ಕಡೆ ಹೋಗಿದ್ದಾನೆ. ಈ ವೇಳೆಯಲ್ಲಿ ಈ ಘಟನೆ ನಡೆದಿದೆ.‌ ಇನ್ನು ಶೈಲಜಾ ಮನೆಗೆ ಬಂದಾಗ ಈ ಘಟನೆ ನಡೆದಿದ್ದು, ಮಗಳು ವಿದ್ಯುತ್ ತಂತಿ ಹಿಡಿದಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ. ಈ ವೇಳೆ ಇನ್ನೊಬ್ಬ ಮಗ ಧೃವ ತನ್ನ ತಾಯಿ, ಅಕ್ಕ, ಅಣ್ಣ ಬಿದ್ದಿರುವುದನ್ನು ನೋಡಿ ಅವರನ್ನು ಹಿಡಿಯಲು ಹೋಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಧೈರ್ಯ ಮಾಡಿ ಕೂಡಲೇ ಧೃವನನ್ನು ಟವಲ್‌ನಿಂದ‌ ಹಿಡಿದು ಎಳೆದಿದ್ದಾರೆ. ಇದರಿಂದಾಗಿ ಅದೃಷ್ಟವಶಾತ್ ಧೃವ ಬದುಕಿದ್ದಾ‌ನೆ. 

Koppal: ನಗರದಲ್ಲಿ ಓಡಾಡದ ಸಿಟಿ ಬಸ್‌ಗಳು: ಸಂಚಾರ ಸ್ಥಗಿತದಿಂದ ತೊಂದರೆ

ಊರಿಗೆ ಊರೇ ಕಣ್ಣೀರು: ತಾಯಿ ಮಕ್ಕಳು ಸಾವನ್ನಪ್ಪಿದ್ದರಿಂದ ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.‌ ಮುದ್ದಾದ ಮಕ್ಕಳ ಆಟ ನೋಡಿದ್ದ ಗ್ರಾಮಸ್ಥರಿಗೆ ಆ ಮಕ್ಕಳ ಮೃತದೇಹ ನೋಡಲು ಮನಸಾಗದೆ ಅಯ್ಯೋ ವಿಧಿಯೇ ಯಾಕಪ್ಪ ಈ ಮಕ್ಕಳಿಗೆ ಸಾವು ತಂದೆ ಎಂದು ಮಮ್ಮಲ ಮರಗುತ್ತಿದ್ದರು.‌ ಒಟ್ಟಿನಲ್ಲಿ ಇನ್ನು ಮುಂದೆಯಾದರೂ ಮನೆಯಲ್ಲಿ ವಿದ್ಯುತ್ ತಂತಿಗಳಿಂದ ಮಕ್ಕಳನ್ನು ದೂರ ಇಡುವುದು ಒಳಿತು. ಇಲ್ಲವಾದಲ್ಲಿ ಇಂತಹ ಅವಘಡಗಳು ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ.

click me!