ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.6) : ವರ್ಷಪೂರ್ತಿ ತಣ್ಣನೆಯ ಗಾಳಿ. ಮುಗಿಲೆತ್ತರದ ಬೆಟ್ಟ-ಗುಡ್ಡ. ಸದಾ ಹಚ್ಚ ಹಸಿರಿನ ಸಿರಿ. ಇಲ್ಲಿನ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಸಾಗ್ತಿದ್ರೆ ಸ್ವರ್ಗ ಅಂಗೈಲಿ. ಮಲೆನಾಡ ಚಾರ್ಮಾಡಿಯಂದ್ರೆ ಪ್ರವಾಸಿಗ್ರು ನಿಂತಲ್ಲೇ ತೇಲ್ತಾರೆ. ಚಾರ್ಮಾಡಿಗೆ ಮನಸೋಲ್ದೆ ಇರರು. ಮತ್ತೊಂಡೆಡೆ ಪ್ರಕೃತಿಯ ಐಸಿರಿ ಜೊತೆಗೆ ಅಪಾಯವೂ ಈ ರಸ್ತೆಯಲ್ಲಿ ಅಡಗಿದೆ. ಅಪ್ಪಿತಪ್ಪಿ ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವ ವೇಳೆಯಲ್ಲಿ ವಾಹನ ಕೆಟ್ರೆ , ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಇದಕ್ಕಿದಂತೆ ನಿದರ್ಶನ ಎನ್ನುವಂತೆ ಚಾರ್ಮಾಡಿ ರಸ್ತೆಯಲ್ಲಿ ನಡೆದಿರುವ ದರೋಡೆ (Robbery) ಪ್ರಕರಣ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದರೋಡೆ : ಪರಿಸ್ಥಿತಿಯ ದುರ್ಬಳಕೆ ಪಡೆದ ಕಳ್ಳರಿಂದ ನೀಚ ಕೃತ್ಯ
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ (Charmadi ghat) ರಸ್ತೆಯಲ್ಲಿ ಮೇ 3ರಂದು ನಡೆದ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪರಿಸ್ಥಿತಿಯ ದುರ್ಬಳಕೆ ಪಡೆದ ಕಳ್ಳರು ನೀಚ ಕೃತ್ಯವನ್ನು ನಡೆಸಿದ್ದಾರೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುವ ವೇಳೆಯಲ್ಲಿ ಕಾರ್ ಯೊಂದು ಅಪಘಾತಕ್ಕೀಡಾಗಿದೆ.
ವಾಹನದಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ಹಣ, ಉಂಗುರ ಹಾಗೂ ಮೊಬೈಲ್ ಕಸಿದುಕೊಂಡು ಹೋಗಿರುವ ಘಟನೆ ನಡೆದಿದ್ದು ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಬೆಂಗಳೂರಿನ ದೇವನಹಳ್ಳಿಯ ಮದುಸೂದನ್ ಎಂಬುವವರು ಬಣಕಲ್ ಠಾಣೆಗೆ ದೂರು ನೀಡಿದ್ದಾರೆ. ಮೇ 3 ರಂದು ದೇವನಹಳ್ಳಿಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದು ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ 12.30 ರ ಸುಮಾರಿಗೆ ರಸ್ತೆ ಬದಿಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ.
MTBಯಿಂದ ಅಧಿಕಾರ ದುರ್ಬಳಕೆ ಶರತ್ ಬಚ್ಚೇಗೌಡ ಬೆಂಬಲಿಗರ ಆರೋಪ
ಘಾಟ್ ರಸ್ತೆಯಲ್ಲಿ ನೆಟ್ ವರ್ಕ್ ಇಲ್ಲದೇ ಪರದಾಟ: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅಪಘಾತಕ್ಕೆ ಒಳಾಗದ ಸಮಯದಲ್ಲಿ ಮಧುಸೂಧನ್ ಸಹಾಯಕ್ಕಾಗಿ ಮೊಬೈಲ್ ಮೂಲಕ ಸಂಪರ್ಕ ಮಾಡಲು ಮುಂದಾಗಿದ್ದಾರೆ. ಆದ್ರೆ ನೆಟ್ ವರ್ಕ್ ಸಮಸ್ಯೆಯಿಂದ ಕಾರಿನಲ್ಲೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾತ್ರಿ ಸಮಯವಾದ ಕಾರಣ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿರುತ್ತೆ. ಯಾವುದೇ ವಾಹನಗಳು ರಸ್ತೆಯಲ್ಲಿ ಪಾಸ್ ಆಗದ ಕಾರಣ ಮಧುಸೂದನ್ ಸೇರಿ ಮೂವರು ಕಾರಿನಲ್ಲೆ ಕುಳಿತಿದ್ದಾರೆ.
ಈ ಸಂದರ್ಭದಲ್ಲಿ ಧರ್ಮಸ್ಥಳ ಕಡೆಯಿಂದ ಮೂಡಿಗೆರೆ ಕಡೆಗೆ ಬೈಕ್ ಮತ್ತು ಸ್ಕೂಟರ್ ನಲ್ಲಿ ಬಂದ ಮೂವರು ಯುವಕರ ತಂಡ ಕಾರನ್ನು ಸುತ್ತುವರಿದು 600 ರೂಪಾಯಿ ಹಣ, ಮೊಬೈಲ್ ಹಾಗೂ ಉಂಗುರವನ್ನು ಕಸಿದುಕೊಂಡು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೊಪ್ಪಳದ 60 ಗ್ರಾಮ ಎಣ್ಣೆ ಮುಕ್ತ, ಮಾರಿದ್ರೆ ಬೀಳುತ್ತೆ ದಂಡ
ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅಳವಾದ ಅಳವಾದ ಪ್ರಪಾತಗಳು ಒಂದಡೆಯಾದ್ರೆ ಮತ್ತೊಂದಡೆ ಕಳ್ಳರ ಕಾಟವೂ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ತಪಾಸಣೆ ಸೇರಿದಂತೆ ಘಾಟ್ ರಸ್ತೆಯಲ್ಲಿ ಪೊಲೀಸ್ ಜೀಪ್ ನಲ್ಲಿ ಗಸ್ತು ತಿರುಗುವಂತಹ ವ್ಯವಸ್ಥೆ ಮಾಡಬೇಕಾಗಿದೆ.