ಸಿಸಿಟಿವಿ ಆಧಾರದಲ್ಲಿ ಸರಗಳ್ಳರ ಪತ್ತೆ ಮಾಡಿದ  ಬೆಂಗಳೂರು ಪೊಲೀಸರು

By Suvarna News  |  First Published Jul 6, 2021, 9:54 PM IST

* ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡ್ತಿದ್ದ ಅರೋಪಿಗಳು ಅರೆಸ್ಟ್

* ಆರ್ ಆರ್ ನಗರದಲ್ಲಿ ಮಹಿಳೆಯ ಏಳೆದಾಡಿ ಸರ ದೋಚಿದ್ದ ಅರೋಪಿಗಳು

* ವಾಕಿಂಗ್ ಹೋಗ್ತಿದ್ದ ಮಹಿಳೆ ಸರ ಕಿತ್ತು ಪರಾರಿಯಾಗಿದ್ದರು

* ತುರುವೆಕೆರೆ ಮೂಲದ ರವಿ ಆಚಾರ್ಯ ಅಲಿಯಾಸ್ ರವಿ ,ಮತ್ತು ತಲಘಟ್ಟಪುರ ನಿವಾಸಿ ರಾಹುಲ್ ಬಂಧಿತರು


ಬೆಂಗಳೂರು(ಜು.  06)   ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡ್ತಿದ್ದ ಅರೋಪಿಗಳು ಸೆರೆ ಸಿಕ್ಕಿದ್ದಾರೆ. ಆರ್ ಆರ್ ನಗರದಲ್ಲಿ ಮಹಿಳೆಯ ಏಳೆದಾಡಿ ಸರ ದೋಚಿದ್ದ ಅರೋಪಿಗಳು ಬಲೆಗೆ ಬಿದ್ದಿದ್ದಾರೆ.

ವಾಕಿಂಗ್ ಹೋಗ್ತಿದ್ದ ಮಹಿಳೆ ಸರ ಕಿತ್ತು ಪರಾರಿಯಾಗಿದ್ದರು. ತುರುವೆಕೆರೆ ಮೂಲದ ರವಿ ಆಚಾರ್ಯ ಅಲಿಯಾಸ್ ರವಿ ,ಮತ್ತು ತಲಘಟ್ಟಪುರ ನಿವಾಸಿ ರಾಹುಲ್ ಬಂಧಿತರು. ರಾಹುಲ್ ಬೈಕ್ ರೈಡ್ ಮಾಡ್ತಿದ್ದ ಅರೋಪಿ. ಮಹಿಳೆ ರವಿ ಹಿಂಬಾಲಿಸುತ್ತಿದ್ದ.

Latest Videos

undefined

ಫುಲ್ ಟೈಟಾಗಿ ಸರಗಳ್ಳತನಕ್ಕೆ ಇಳಿಯುತ್ತಿದ್ದ ಕಿಲಾಡಿ

ಕೃತ್ಯ ನಡೆದ ಸ್ಥಳದಿಂದ ಸುಮಾರು 5 ಕಿಮಿ ವರೆಗೆ ಸಿಸಿಟಿವಿ ಪರಿಶೀಲನೆ ಮಾಡಿದ್ದ ಪೊಲೀಸರಿಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. ಸರಗಳ್ಳತನ ಬಳಿಕ  ಕೆಂಗೇರಿ ಬಳಿಯ  ಶಿವನ ಪಾಳ್ಯಕ್ಕೆ ಹೋಗಿದ್ದರು. ಸುಮಾರು ಇಪ್ಪತ್ತೈದಕ್ಕು ಹೆಚ್ಚಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಇವರ ಚಲನವಲನ ಪತ್ತೆಯಾಗಿದೆ. ವಿಚಾರಣೆ ವೇಳೆ ಪಾಂಡವಪುರ ದಲ್ಲಿ ಎಟಿಎಂ ಕಳ್ಳತನ ಯತ್ನ ಮಾಡಿದ್ದು ಬೆಳಕಿಗೆ ಬಂದಿದೆ. 

ಗ್ಯಾಸ್ ಕಟರ್ ಬಳಸಿ ಎಟಿಂ ದೋಚಲು ಯತ್ನಿಸಿದ್ದ ಆರೋಪಿ ರವಿ ಯತ್ನ ಮಾಡಿದ್ದ. ಆರ್ ಆರ್ ನಗರ ಪೊಲೀಸರಿಂದ ಇಬ್ಬರು ಅರೋಪಿಗಳ ಬಂಧನವಾಗಿದ್ದು ಇವರಿಂದ ಮತ್ತಷ್ಟು ಪ್ರಕರಣ ಬೆಳಕಿಗೆ ಬರುವ ಸಾಧ್ಯತೆ ಇದೆ.  ಹೆಚ್ಚಿನ ತನಿಖೆ ನಡೆಸುತ್ತಿರುವ  ಆರ್ ಆರ್ ನಗರ ಪೊಲೀಸರು ಇನ್ನು ಕೆಲ ಪ್ರಕರಣದ ಹಿಂದೆ ಬಿದ್ದಿದ್ದಾರೆ. 

click me!