6 ವರ್ಷದ ಬಾಲಕಿಯ 3 ವರ್ಷ ರೇಪ್ ಮಾಡಿ ಕೊಂದ CPI(M) ಕಾರ್ಯಕರ್ತ

By Suvarna News  |  First Published Jul 6, 2021, 4:27 PM IST
  • 6 ವರ್ಷದ ಪುಟ್ಟ ಬಾಲಕಿಯ ಮೇಲೆ 3 ವರ್ಷದಿಂದ ಅತ್ಯಾಚಾರ
  • ಬಾಲೆಯ ಕೊಂದು ನೇತು ಹಾಕಿದ CPI(M) ಕಾರ್ಯಕರ್ತ ಅರೆಸ್ಟ್

ತಿರುವನಂತಪುರಂ(ಜು.06): 6 ವರ್ಷದ ಬಾಲಕಿಯನ್ನು ಮೂರು ವರ್ಷಗಳಿಂದ ರೇಪ್ ಮಾಡುತ್ತಿದ್ದ ಸಿಪಿಐ(ಎಂ) ಯುವ ಘಟಕದ ಕಾರ್ಯಕರ್ತನನ್ನು ಕೇರಳದಲ್ಲಿ ಬಂಧಿಸಲಾಗಿದೆ. ಮೂರು ವರ್ಷ ಅತ್ಯಾಚಾರ ಮಾಡಿ ನೇಣು ಹಾಕಿ ಕೊಲೆ ಮಾಡಿದ ಆರೋಪದ ಹಿನ್ನೆಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಜೂನ್ 30 ರಂದು ಬಾಲಕಿಯ ಮೃತದೇಹ ಆಕೆಯ ಪೋಷಕರ ಕ್ವಾರ್ಟರ್ಸ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

Tap to resize

Latest Videos

ತುಮಕೂರು; ಕೊಳೆತ ಶವ್ ಕೈಮೇಲಿನ ಟ್ಯಾಟೂ ತೆಗೆದಿಟ್ಟ ಭಯಾನಕ ಸ್ಟೋರಿ

ಆರೋಪಿ ಸಿಹಿ ತಿಂಡಿಗಳನ್ನು ನೀಡುವ ನೆಪದಲ್ಲಿ ಬಾಲಕಿಯನ್ನು ಆಮಿಷವೊಡ್ಡುತ್ತಿದ್ದನು. ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡುತ್ತಲೇ ಇದ್ದ. ಪೊಲೀಸರ ಪ್ರಕಾರ ಜೂನ್ 30 ರಂದು ಆರೋಪಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಮರಣೋತ್ತರ ವರದಿಯು ಲೈಂಗಿಕ ಕಿರುಕುಳ ಸಾಬೀತು:

ಆರಂಭದಲ್ಲಿ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಬಾಲಕಿಯ ಶವಪರೀಕ್ಷೆಯ ವರದಿಯಲ್ಲಿ, ಆಕೆ ದೀರ್ಘಕಾಲದವರೆಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಈ ಪ್ರಕರಣವು ಕೊಲೆ ಪ್ರಕರಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದರು.

ಜೂನ್ 30 ರಂದು ಬಾಲಕಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಗ ಪ್ರಜ್ಞೆ ಕಳೆದುಕೊಂಡಿದ್ದಳು. ಆಕೆ ಸಾವನ್ನಪ್ಪಿರಬಹುದೆಂದು ಆರೋಪಿ ಆತಂಕಗೊಂಡು ಅವಳನ್ನು ಕೋಣೆಯಲ್ಲಿ ಗಲ್ಲಿಗೇರಿಸಿದ್ದ. ಪೊಲೀಸ್ ಮೂಲಗಳ ಪ್ರಕಾರ, ವಿಚಾರಣೆ ವೇಳೆ ಬಾಲಕಿಯನ್ನು ಲೈಂಗಿಕ ಕಿರುಕುಳಕ್ಕೆ ಒಳಪಡಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

click me!