ಸಂಸದ ತೇಜಸ್ವಿ ಸೂರ್ಯ ರಿಂದ ಬೆಡ್ ಬ್ಲಾಕಿಂಗ್ ದಂಧೆ ಬಯಲು ಪ್ರಕರಣ/ ಬೆಡ್ ಬ್ಲಾಕಿಂಗ್ ದಂಧೆ ಬೆನ್ನಲ್ಲೆ ಎಫ್ ಐಆರ್ ದಾಖಲು/ ಇಬ್ಬರು ಬೆಡ್ ಬ್ಲಾಕಿಂಗ್ ದಂಧೆಕೋರರು ಅರೆಸ್ಟ್/ ಬೆಡ್ ಬ್ಲಾಕಿಂಗ್ ದಂಧೆ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ/ ರೋಹಿತ್ & ನೇತ್ರಾ ಬಂಧಿತ ಬೆಡ್ ಬ್ಲಾಕಿಂಗ್ ದಂಧೆಕೋರರು
ಬೆಂಗಳೂರು(ಮೇ 04) ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆ ಬೆನ್ನಲ್ಲೆ ಎಫ್ ಐಆರ್ ಸಹ ದಾಖಲಾಗಿದೆ. ಇಬ್ಬರು ಬೆಡ್ ಬ್ಲಾಕಿಂಗ್ ದಂಧೆಕೋರರನ್ನು ಬಂಧಿಸಲಾಗಿದೆ.
ಬೆಡ್ ಬ್ಲಾಕಿಂಗ್ ದಂಧೆ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೋಹಿತ್ ಮತ್ತು ನೇತ್ರಾ ಬಂಧಿತ ಬೆಡ್ ಬ್ಲಾಕಿಂಗ್ ದಂಧೆಕೋರರು. ರೋಹಿತ್ ಮತ್ತು ನೇತ್ರಾ,ಇಬ್ಬರು ಏಜೆಂಟರುಗಳ ರೀತಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿದ್ದರು.
ಲಾಕ್ ಡೌನ್ ಬಗ್ಗೆ ಅಂತಿಮ ಮಾಹಿತಿ ಕೊಟ್ಟ ಸಿಎಂ
ರೋಹಿತ್ & ನೇತ್ರಾರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಜೊತೆ ದಂಧೆಯಲ್ಲಿ ಭಾಗಿಯಾಗಿದ್ದವರ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಸೆಕ್ಷನ್ 420, 384 ಅಡಿ ಬಂಧನ ಮಾಡಲಾಗಿದೆ.
ಮೂರು ಐಸಿಯು ಬೆಡ್ ಗಳನ್ನ ಮಾರಿದ್ದ ದಂಧೆ ಕೋರರು ಅರೆಸ್ಟ್ ಆಗಿದ್ದಾರೆ. ಇಬ್ಬರ ಅಕೌಂಟ್ ನಿಂದ ಒಂದುಲಕ್ಷದ ಐದು ಸಾವಿರ ರೂ ಪತ್ತೆಯಾಗಿದೆ. ಪೇಷೆಂಟ್ ಗಳಿಂದ ಐವತ್ತು ಸಾವಿರಕ್ಕೆ ಡಿಮ್ಯಾಂಡ್ ಇಟ್ಟು ಡೀಲ್ ಕುದುರಿಸುತ್ತಿದ್ದ ದಂಧೆ ಕೋರರು ಬಲೆಗೆ ಬಿದ್ದಿದ್ದಾರೆ. ಬೆಡ್ ಸಿಕ್ಕರೆ ಸಾಕು ಅನ್ನೊನಿಟ್ಟಿನಲ್ಲಿ ಪೇಷೆಂಟ್ ಗಳು ಹಣ ನೀಡುತ್ತಿದ್ದರು.