*ಬಸ್ ನಿಲ್ದಾಣದಲ್ಲಿ 1 ಪಿಸ್ತೂಲ್, 5 ಜೀವಂತ ಗುಂಡು ಜಪ್ತಿ
*ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ
ಬೆಂಗಳೂರು (ಫೆ. 21): ಪಿಸ್ತೂಲ್̈ (Pistol) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಮೈಸೂರು ರಸ್ತೆಯ (Mysuru Road) ಕೆಎಸ್‌ಆರ್‌ಟಿಸಿ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಮಹಾರಾಷ್ಟ್ರ ಸಾಂಗ್ಲಿ ಮೂಲದ ರಾಹುಲ್ ಸತೀಶ್ ಮಾನೆ (29), ಕೊಲ್ಹಾಪುರ ಮೂಲದ ರಫಿಕ್ ದಸ್ತಗಿರ್ ನದಾಫ್(30) ಬಂಧಿತರು. ಆರೋಪಿಗಳಿಂದ 1 ಪಿಸ್ತೂಲ್, 5 ಜೀವಂತ ಗುಂಡುಗಳನ್ನು (Live Ammunition) ಜಪ್ತಿ ಮಾಡಲಾಗಿದೆ. ಆರೋಪಿಗಳು ಫೆ.11ರಂದು ಬೆಳಗ್ಗೆ 8ರ ಸಮಯದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪಿಸ್ತೂಲ್ ಮಾರಾಟಕ್ಕೆ ಬರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾಟಲೈಟ್ ಬಸ್ ನಿಲ್ದಾಣದ (Satellite Bus Stand) ತಮಿಳುನಾಡು ಬಸ್ ನಿಲುಗಡೆ ಮಾಡುವ ಪ್ಲಾಟ್‌ಫಾಮ್‌ರ್‍ನಲ್ಲಿ ಇಬ್ಬರು ಆರೋಪಿಗಳು ಕಪ್ಪು ಬಣ್ಣದ ಬ್ಯಾಗ್ ಹಿಡಿದು ನಿಂತಿದ್ದರು. ಈ ವೇಳೆ ವಶಕ್ಕೆ ಪಡೆದು ಪ್ರಶ್ನಿಸಿದಾಗ, ಒಮ್ಮೆ ಸ್ನೇಹಿತನನ್ನು ಭೇಟಿಗೆ ಬಂದಿರುವುದಾಗಿ ಮತ್ತೊಮ್ಮೆ ಕೆಲಸ ಹುಡುಕಿಕೊಂಡು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.
undefined
ಇದನ್ನೂ ಓದಿ: Crime News ವಿಚಿತ್ರ ಘಟನೆ, ಮೊಬೈಲ್‌ಗಾಗಿ ಸಾವಿನ ಹಾದಿ ಹಿಡಿದ ಯುವಕ, ಯುವತಿ
ಹೀಗಾಗಿ ಅನುಮಾನದಿಂದ ಬ್ಯಾಗ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಒಂದು ಪಿಸ್ತೂಲ್ ಮತ್ತು ಐದು ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಶ್ನಿಸಿದಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಂದಿರುವುದಾಗಿ ಬಾಯ್ಬಿಟ್ಟಿದ್ದಾರೆ. ಪಿಸ್ತೂಲ್ ಹಿಡಿಕೆ ಮೇಲೆ ಕೆಂಪು ಬಣ್ಣದ ಪ್ಲಾಸ್ಟಿಕ್ ‘ಸ್ಟಾರ್’ ಚಿತ್ರವಿದೆ. ಗುಂಡುಗಳ ಹಿಂಭಾಗದಲ್ಲಿ ‘ಕೆಎಫ್’ ಎಂಬ ಅಕ್ಷರವಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಮುಂಬೈನಿಂದ ಈ ಪಿಸ್ತೂಲ್ ಮತ್ತು ಗುಂಡುಗಳನ್ನು ತಂದು ನಗರದಲ್ಲಿ ಗಿರಾಕಿ ಹುಡುಕಿ ದುಬಾರಿ ಮೊತ್ತಕ್ಕೆ ಮಾರಾಟಕ್ಕೆ ಬಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮುಂಬೈನಲ್ಲಿ ಯಾರಿಂದ ಖರೀದಿ ಮಾಡಿದ್ದರು? ಯಾರಿಗೆ ಮಾರಾಟ ಮಾಡಲು ನಗರಕ್ಕೆ ಬಂದಿದ್ದರು.
ಈ ಹಿಂದೆ ಎಷ್ಟುಜನರಿಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದಾರೆ. ಅಕ್ರಮ ದಂಧೆಯ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದರ ಬಗ್ಗೆ ಮುಂದಿನ ತನಿಖೆಯಿಂದ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಡೆಲಿವರಿ ಬಾಯ್‌ಗೆ ಇರಿದು ಹಣ ದೋಚಿದ್ದ ಕಿಡಿಗೇಡಿಗಳ ಬಂಧನ
7 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶದಿಂದ(Foreign) ಕಳ್ಳ ಹಾದಿಯಲ್ಲಿ ರಾಜಧಾನಿಗೆ ಬರುವ ಡ್ರಗ್ಸ್(Drugs) ಸಾಗಾಣಿಕೆ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳ ದಾಳಿ(Raid) ಮುಂದುವರೆದಿದ್ದು, ಮತ್ತೆ ನಗರದಲ್ಲಿ ಇಬ್ಬರನ್ನು ಬಂಧಿಸಿ 11.2 ಕೋಟಿ ಮೌಲ್ಯದ ಡ್ರಗ್ಸನ್ನು ಜಪ್ತಿ ಮಾಡಿದ್ದಾರೆ.
ಬೆಲ್ಜಿಯಂ ಹಾಗೂ ಜಾಂಬೀಯಾ ದೇಶಗಳಿಂದ ದುಬೈ ಮೂಲಕ ಕೊರಿಯರ್‌ನಲ್ಲಿ(Courier) ನಗರಕ್ಕೆ ಬಂದಿದ್ದ .7 ಕೋಟಿ ಮೌಲ್ಯದ ಹೆರಾಯಿನ್ ಹಾಗೂ 4.2 ಕೋಟಿ ಬೆಲೆ ಬಾಳುವ 2 ಕೆ.ಜಿ ಎಂಡಿಎಂಎ ಡ್ರಗ್ಸ್ ಜಪ್ತಿಯಾಗಿದೆ. ವಿದೇಶದಿಂದ ಡ್ರಗ್ಸ್ ಸಾಗಾಣಿಕೆ ಬಗ್ಗೆ ಮಾಹಿತಿ ಮೇರೆಗೆ ಎಚ್ಚೆತ್ತಿರುವ ಕಸ್ಟಮ್ಸ್ ಅಧಿಕಾರಿಗಳು(Customs Officers), ನಗರಕ್ಕೆ ವಿದೇಶದಿಂದ ಬರುವ ಪಾರ್ಸಲ್ ಹಾಗೂ ಕೊರಿಯರ್ ಮೇಲೆ ನಿಗಾವಹಿಸಿದ್ದಾರೆ.
ಇತ್ತೀಚೆಗೆ ಇದೇ ರೀತಿ ಕೊರಿಯರ್‌ನಲ್ಲಿ ಬಂದಿದ್ದ .4 ಕೋಟಿ ಮೌಲ್ಯದ ಡ್ರಗ್ಸನ್ನು ಕಸ್ಟಮ್ಸ್ ಜಪ್ತಿ ಮಾಡಿದ್ದರು. ಈಗ ಮತ್ತೆ ಕಾರ್ಯಾಚರಣೆ ಮುಂದುವರೆಸಿದಾಗ .11 ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಈ ಡ್ರಗ್ಸ್ ಸಾಗಾಣಿಕೆ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ(International Drugs Mafia) ಪಾತ್ರವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.