ಬೀದರ್‌: ಯನಗುಂದಾ ಗ್ರಾಮದಲ್ಲಿ ಹಸಿ ಗಾಂಜಾ ಜಪ್ತಿ, ಇಬ್ಬರ ಬಂಧನ

By Kannadaprabha News  |  First Published Nov 4, 2023, 10:30 PM IST

ಬಾಡಿಗೆ ಪಡೆದ ಜಮೀನಿನಲ್ಲಿ ಇವರು ತೊಗರಿ ಬೆಳೆಯ ನಡುವೆ ಗಾಂಜಾ ಗಿಡ ಬೆಳೆಸಿದ್ದರು. ರಾಜಕುಮಾರ ಎಂಬಾತ ಬಾಡಿಗೆ ಪಡೆದ ಜಮೀನಿನಲ್ಲಿ 110 ಗಿಡ ಬೆಳೆದಿದ್ದು, 26 ಕೆ.ಜಿ 513 ಗ್ರಾಂ. ತೂಕದ ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಅಂದಾಜು 20.6 ಲಕ್ಷ, ಇನ್ನೂ ಇದೇ ಗ್ರಾಮದ ಭೀಮಶಾ ಶಿವರಾಜ ಕುದರೆ 45 ಗಿಡ ಬೆಳೆದಿದ್ದು, ಈತನಿಂದ 5 ಕೆ.ಜಿ 220 ಗ್ರಾಂ. ತೂಕದ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಅಂದಾಜು 2 ಲಕ್ಷ 8,800 ರು. ಎಂದು ತಿಳಿಸಿದ ಪೊಲೀಸರು


ಔರಾದ್(ನ.04):  ಬಾಡಿಗೆ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಯನಗುಂದಾ ಗ್ರಾಮದ ರಾಜಕುಮಾರ ಶಿವರಾಜ ಗೋರನಾಳೆ ಮತ್ತು ಭೀಮಶಾ ಶಿವರಾಜ ಕುದರೆ ಬಂಧಿತ ಆರೋಪಿಗಳು. 

ಬಾಡಿಗೆ ಪಡೆದ ಜಮೀನಿನಲ್ಲಿ ಇವರು ತೊಗರಿ ಬೆಳೆಯ ನಡುವೆ ಗಾಂಜಾ ಗಿಡ ಬೆಳೆಸಿದ್ದರು. ರಾಜಕುಮಾರ ಎಂಬಾತ ಬಾಡಿಗೆ ಪಡೆದ ಜಮೀನಿನಲ್ಲಿ 110 ಗಿಡ ಬೆಳೆದಿದ್ದು, 26 ಕೆ.ಜಿ 513 ಗ್ರಾಂ. ತೂಕದ ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಅಂದಾಜು 20.6 ಲಕ್ಷ, ಇನ್ನೂ ಇದೇ ಗ್ರಾಮದ ಭೀಮಶಾ ಶಿವರಾಜ ಕುದರೆ 45 ಗಿಡ ಬೆಳೆದಿದ್ದು, ಈತನಿಂದ 5 ಕೆ.ಜಿ 220 ಗ್ರಾಂ. ತೂಕದ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಅಂದಾಜು 2 ಲಕ್ಷ 8,800 ರು. ಎಂದು ಪೊಲೀಸರು ತಿಳಿಸಿದ್ದಾರೆ. 

Latest Videos

undefined

ಬೆಂಗಳೂರು: ಪೂಜೆ ಮಾಡಲು ಪಾಟ್‌ನಲ್ಲಿ ಗಾಂಜಾ ಗಿಡ ಬೆಳೆಸಿದ್ದ ಪೇಯಿಂಟರ್‌ ಜೈಲಿಗೆ..!

ಖಚಿತ ಮಾಹಿತಿ ಪಡೆದ ಚಿಂತಾಕಿ ಪೊಲೀಸರು ಎಸ್ಪಿ ಚೆನ್ನಬಸವಣ್ಣ ಎಸ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ.

ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ರೈತರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತಹಸೀಲ್ದಾರ್‌ ಮಲ್ಲಶೆಟ್ಟಿ ಚಿದ್ರೆ ಪಂಚೆನಾಮೆ ಮಾಡಿದರು. ಸಿಪಿಐ ರಘುವೀರಸಿಂಗ್ ಠಾಕೂರ್, ಚಿಂತಾಕಿ ಪಿಎಸ್‌ಐ ಸಿದ್ಧಲಿಂಗ, ಸಂತಪೂರ ಪಿಎಸ್‌ಐ ಮಹೆಬೂಬ್ ಅಲೀ, ಶೀರಸ್ಥೆದಾರ ರಾಜಕುಮಾರ ಕುಲಕರ್ಣಿ, ಕರವಸೂಲಿಗಾರ ಭಾವುರಾವ್ ಪಾಟೀಲ್ ಸೇರಿದಂತೆ ಸಿಬ್ಬಂದಿ ಇದ್ದರು.

click me!