ಜಮೀನು ವಿವಾದಕ್ಕಾಗಿ ತಂದೆಯ ಕಣ್ಣೆದುರೇ ಮಗನನ್ನು ಬಂದೂಕಿನಿಂದ ಶೂಟ್ ಮಾಡಿ ಕೊಲೆಗೈದ ಘಟನೆ ನಾಗಮಂಗಲದಲ್ಲಿ ನಡೆದಿದೆ.
ಮಂಡ್ಯ (ನ.04): ದೇಶದ ಗಡಿ ಕಾಯುವ ಯೋಧನಾಗಬೇಕು ಅಥವಾ ಪೊಲೀಸ್ ಹುದ್ದೆಯನ್ನು ಪಡೆಯಬೇಕು ಎಂದು ದೈಹಿಕ ಕಸರತ್ತು ಮಾಡುತ್ತಾ ಸ್ಪರ್ಧಾಮತ್ಮ ಪರೀಕ್ಷಾ ತರಬೇತಿ ಪಡೆಯುತ್ತಿದ್ದ ಯುವಕನನ್ನು ಆತನ ತಂದೆಯ ಕಣ್ಣೆದುರೇ ಜಮೀನು ವಿಚಾರಕ್ಕಾಗಿ ಬಂದೂಕಿನಿಂದ ಶೂಟ್ ಮಾಡಿ ಕೊಲೆಗೈದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹನುಮನಹಳ್ಳಿ ಜಮೀನು ವಿಚಾರಕ್ಕೆ ಯುವಕನನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ. ಜಯಪಾಲ್ (19) ಮೃತ ಯುವಕನಾಗಿದ್ದಾರೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಆರಂಭವಾದ ಜಗಳದಲ್ಲಿ ತಂದೆಯ ಎದುರೇ ಮಗನನ್ನು ಶೂಟೌಟ್ ಮಾಡಿ ಹತ್ಯೆ ಮಾಡಲಾಗಿದೆ. ಇನ್ನು ಕೊಲೆಗೀಡಾದ ಯುವಕ ಜಯಪಾಲ್ ಅವರ ಚಿಕ್ಕಪ್ಪ ಸೀಮೆಎಣ್ಣೆ ಕುಮಾರ್ ಎನ್ನುವವರೇ ತಮ್ಮ ಅಣ್ಣನ ಮಗನನ್ನು ಮಟ ಮಟ ಮಧ್ಯಾಹ್ನವೇ ಜಮೀನಿನ ಬಳಿ ಗನ್ ಶೂಟ್ ಮಾಡಿ ಕೊಲೆ ಮಾಡಿದ್ದಾನೆ.
undefined
ಕಾವೇರಿ ಕಣಿವೆ, ಕರಾವಳಿ ಮತ್ತು ಕಾಫಿನಾಡಿನಲ್ಲಿ ಭಾರಿ ಮಳೆ: ಯಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಜಮೀನು ವಿಚಾರವಾಗಿ ನಡೆಯುತ್ತಿದ್ದ ಜಗಳದ ಕುರಿತು ವಿವಾದ ಇತ್ಯರ್ಥ ಮಾಡಲು ಕೊಲೆ ಆರೋಪಿ ಕುಮಾರ್ ಎನ್ನುವವರು ಜಯಪಾಲ್ ಹಾಗೂ ಆತನ ತಂದೆಯನ್ನು ಜಮೀನಿನ ಬಳಿ ಕರೆಸಿಕೊಂಡಿದ್ದನು. ಈ ವೇಳೆ ಮಾತಿಗೆ ಮಾತು ಎಳೆದಿದ್ದು, ದೈಹಿಕವಾಗಿ ದಷ್ಟಪುಷ್ಟವಾಗಿದ್ದ ಜಯಪಾಲ್ ಅನ್ಯಾಯವನ್ನು ಸಹಿಸದೇ ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ಇನ್ನು ಜಯಪಾಲ್ ತನ್ನ ಮೇಲೆ ಹಲ್ಲೆ ಮಾಡಬಹುದೆಂದು ಹಾಗೂ ಹೆಚ್ಚು ಕಡಿಮೆಯಾದರೆ ಕೊಲೆ ಮಾಡುವ ಉದ್ದೇಶದಿಂದಲೇ ಜೇಬಿನಲ್ಲಿ ಬಂದೂಕು ಇಟ್ಟುಕೊಂಡು ಬಂದಿದ್ದ ಆರೋಪಿ ಕುಮಾರ್ ಜಯಪಾಲ್‌ನ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದಾನೆ.
ತಂದೆ ಕಣ್ಣೆದುರೇ ಒದ್ದಾಡಿ ಪ್ರಾಣ ಬಿಟ್ಟ ಮಗ: ಅಣ್ಣನ ಮಗ ಜಯಪಾಲ್‌ನ ಎದೆ, ತೋಳು, ಮುಖದ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಗುಂಡಿನ ಹೊಡೆತಕ್ಕೆ ತೀವ್ರ ರಕ್ತಸ್ರಾವಗೊಂಡ ಜಯಪಾಲ್ ತಂದೆಯ ಮುಂದೆಯೇ ಒದ್ದಾಡಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಘಟನೆಯು ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನ್ಯಾಯ ಕೊಡಿಸುವಂತೆ ತಂದೆ ಪೊಲೀಸರ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಮುಸ್ಲಿಂ ಏರಿಯಾದಲ್ಲಿ 2 ದಿನ ನಿಷೇಧಾಜ್ಞೆ ಜಾರಿ: ಪೊಲೀಸ್ ಕಮಿಷನರ್ ದಯಾನಂದ್ ಆದೇಶ
ಕುಮಾರ ಕೊಲೆ ಬೆದರಿಕೆ ಹಾಕ್ತಿದ್ದ, ಆದರೆ ಹೀಗೆ ಶೂಟ್ ಮಾಡ್ತಾನೆ ಎಂದುಕೊಂಡಿರಲಿಲ್ಲ: ಮೃತ ಜಯಪಾಲ್ ಮೃತದೇಹ ನಾಗಮಂಗಲ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಭೇಟಿ ನಿಡಿದ್ದಾರೆ. ಮೃತ ಜಯಪಾಲ್ ಕುಟುಂಬಸ್ಥರಿಂದ ಘಟನೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಜಮೀನು ವಿವಾದದ ಬಗ್ಗೆ ಮಾತನಾಡಲು ಕರೆದಿದ್ದ ಕುಮಾರ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಈ ಹಿಂದೆಯೂ ಹಲವು ಬಾರಿ ಕೊಲೆ ಬೆದರಿಕೆ ಹಾಕಿದ್ದನು. ಜೊತೆಗೆ, ಜಿಲ್ಲೆ ಹಾಗೂ ರಾಜ್ಯದ ಪೊಲೀಸರು ನನ್ನ ಪರವಾಗಿದ್ದಾರೆ, ನಿಮ್ಮನ್ನು ಶೂಟ್ ಮಾಡಿ ಬೀಸಾಡಿದರೂ ಯಾರೂ ಕೇಳುವವರಿಲ್ಲ ಎಂದು ಹೆದರಿಸುತ್ತಿದ್ದನು. ಆದರೆ, ಹೀಗೆ ಕೊಲೆ ಮಾಡ್ತಾನೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಜಯಪಾಲ್ ತಂದೆ ವಾಸು ಕಣ್ಣೀರು ಹಾಕಿದ್ದಾರೆ.